ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ (Upendra) ಬಹು ಸಮಯದ ಬಳಿಕ ಡೈರೆಕ್ಟರ್ ಕ್ಯಾಪ್ ತೊಟ್ಟು ಆ್ಯಕ್ಷನ್ ಕಟ್ ಹೇಳಿದ ʼಯುಐʼ (UI) ಚಿತ್ರವನ್ನು ನೋಡಿ ಪ್ರೇಕ್ಷಕರು ಮೆಚ್ಚಿಕೊಂಡಿದ್ದಾರೆ. ಆ ಮೂಲಕ ಉಪ್ಪಿ ನಿರ್ದೇಶಕರಾಗಿ ಮತ್ತೊಮ್ಮೆ ಗೆದ್ದು ತೋರಿಸಿದ್ದಾರೆ.
ʼಕಲ್ಕಿʼ ಹಾಗೂ ʼಸತ್ಯʼ ಎನ್ನುವ ಪಾತ್ರದ ಮೂಲಕ ಉಪ್ಪಿ ಹಣದುಬ್ಬರ, ಎಐ, ನಿರುದ್ಯೋಗ, ಯುದ್ಧದ ಪರಿಣಾಮ ಬಡ ಜನರ ಮೇಲೆ ಭವಿಷ್ಯದಲ್ಲಿ ಯಾವ ರೀತಿಯ ಪರಿಣಾಮ ಬೀಳಲಿದೆ ಎನ್ನುವುದನ್ನು ʼಯುಐʼನಲ್ಲಿ ಹೇಳಿದ್ದಾರೆ.
ಉಪ್ಪಿ ನಿರ್ದೇಶನದ ಸಿನಿಮಾಗಳೇ ಹಾಗೆ ಒಮ್ಮೆಗೆ ಅರ್ಥ ಆಗುವುದಿಲ್ಲ. ಆದರೆ ಅರ್ಥ ಮಾಡಿಕೊಳ್ಳುವ ಹತ್ತಾರು ಅಂಶಗಳನ್ನು ಸೂಕ್ಷ್ಮವಾಗಿ ಹೇಳಿರುತ್ತಾರೆ ʼಯುಐʼನಲ್ಲೂ ಇಂಥದ್ದೇ ವಿಚಾರವನ್ನು ಉಪ್ಪಿ ಹೇಳಿದ್ದಾರೆ.
ಮೂರನೇ ವಾರವೂ ಚಿತ್ರ ಥಿಯೇಟರ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ನಡುವೆ ಕೆಲ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ʼಯುಐʼ ಓಟಿಟಿ ರಿಲೀಸ್ ಬಗ್ಗೆ ಚರ್ಚೆ ಶುರುವಾಗಿದೆ. ಈ ದಿನವೇ ಸಿನಿಮಾ ಓಟಿಟಿಗೆ ಬರುತ್ತದೆ. ಸನ್‌ನೆಕ್ಸ್ಟ್‌ಗೆ ಚಿತ್ರದ ಓಟಿಟಿ ರೈಟ್ಸ್ ಮಾರಾಟವಾಗಿದೆ ಎಂದು ಸುದ್ದಿಗಳು ಹರಿದಾಡಿತ್ತು.
ಇದನ್ನೂ ಓದಿ: BBK11: ಫಿನಾಲೆ ಓಟದಿಂದ ಚೈತ್ರಾಳನ್ನು ಹೊರಗಿಟ್ಟ ಮನೆಮಂದಿ..ಕಣ್ಣೀರಿಟ್ಟ ಫೈಯರ್ ಬ್ರ್ಯಾಂಡ್
ಈ ಬಗ್ಗೆ ಚಿತ್ರದ ನಿರ್ಮಾಪಕವೇ ಸ್ಪಷ್ಟನೆ ನೀಡಿದ್ದಾರೆ. ಕೆ. ಪಿ ಶ್ರೀಕಾಂತ್ ಅವರ ಪೋಸ್ಟರ್ ವೊಂದರ ಮೂಲಕ ʼಯುಐʼ ಓಟಿಟಿ ರಿಲೀಸ್ ಬಗ್ಗೆ ಮಾಹಿತಿ ನೀಡಿದ್ದಾರೆ.
ʼಯುಐʼ ಚಿತ್ರದ ಬಗ್ಗೆ ಓಟಿಟಿ ರೈಟ್ಸ್ ʼಸನ್ ನೆಕ್ಸ್ಟ್ʼ ಗೆ ಮಾರಾಟವಾಗಿದ ಎನ್ನುವ ವಿಚಾರ ನಮ್ಮ ಗಮನ ಬಂದಿದೆ. ಇದು ಸುಳ್ಳು ಸುದ್ದಿಯಾಗಿದೆ. ಚಿತ್ರದ ಓಟಿಟಿ ರೈಟ್ಸ್ ಹಾಗೂ ಇತರೆ ಮಾಹಿತಿ ಏನೇ ಇದ್ದರೂ ʼಯುಐʼ ತಂಡದಿಂದಲೇ ಅಧಿಕೃತವಾಗಿ ಬರುತ್ತದೆ. ಸುಳ್ಳು ಸುದ್ದಿ ಹಾಗೂ ವದಂತಿಗಳನ್ನು ನಂಬಬೇಡಿ ಎಂದು ನಿರ್ಮಾಪಕರು ಪೋಸ್ಟ್ ವೊಂದರ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ಲಹರಿ ಫಿಲ್ಮ್ಸ್ ಹಾಗೂ ವೀನಸ್ ಎಂಟರ್‌ಟೈನರ್ಸ್ ಬ್ಯಾನರ್‌ಗಳ ಅಡಿಯಲ್ಲಿ ‘ಯುಐ’ ಚಿತ್ರ ನಿರ್ಮಾಣವಾಗಿದೆ. ಜಿ. ಮನೋಹರ್ ಹಾಗೂ ಕೆ. ಪಿ ಶ್ರೀಕಾಂತ್ ಚಿತ್ರಕ್ಕೆ ಹಣ ಹೂಡಿದ್ದಾರೆ.
ಚಿತ್ರದಲ್ಲಿ ರೀಷ್ಮಾ ನಾಣಯ್ಯ ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಆರ್ಮುಗ ರವಿಶಂಕರ್, ಸಾಧು ಕೋಕಿಲ ಹಾಗೂ ಅಚ್ಯುತ್ ಕುಮಾರ್ ಚಿತ್ರದಲ್ಲಿ ನಟಿಸಿದ್ದಾರೆ.