Advertisement
ಕಾಣಿಯೂರು ಗ್ರಾ.ಪಂ. ವ್ಯಾಪ್ತಿಯ ಕಾಣಿಯೂರು, ಚಾರ್ವಾಕ, ದೋಳ್ಪಾಡಿ ಗ್ರಾಮಗಳ ಉಜ್ವಲ ಗ್ಯಾಸ್ ಯೋಜನೆಯ ಫಲಾನುಭವಿಗಳಿಗೆ ಗ್ಯಾಸ್ ಕಿಟ್‌ಗಳ ವಿತರಣೆ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಅವರು ಮಾತನಾಡಿದರು. ಗ್ಯಾಸ್ ಸುರಕ್ಷತೆ ಮತ್ತು ಉಪಯೋಗದ ಬಗ್ಗೆ ಸಂಪನ್ಮೂಲ ವ್ಯಕ್ತಿ ಗಣೇಶ್ ಮಾಹಿತಿ ನೀಡಿದರು. ಕಾಣಿಯೂರು ಗ್ರಾ.ಪಂ.ಉಪಾಧ್ಯಕ್ಷೆ ಕಮಲಾಕ್ಷಿ ಬೆದ್ರಂಗಳ ಅಧ್ಯಕ್ಷತೆ ವಹಿಸಿದ್ದರು. ಗ್ರಾ.ಪಂ. ಸದಸ್ಯರಾದ ಸುರೇಶ್ ಓಡಬಾಯಿ, ಗಣೇಶ್ ಉದುನಡ್ಕ, ವೀರಪ್ಪ ಗೌಡ ಉದಲಡ್ಡ, ಪದ್ಮನಾಭ ಅಂಬುಲ, ರಾಮಣ್ಣ ಗೌಡ ಮುಗರಂಜ, ಲಲಿತಾ ತೋಟ, ರುಕ್ಮಿಣಿ ನಾಗಲೋಕ, ದಿನೇಶ್ ಇಡ್ಯಡ್ಕ, ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್, ಡಾ| ವಿದ್ಯಾ, ಶಿಕ್ಷಕಿ ಮೋಹಿನಿ, ಮಣಿಕಂಠ ಗ್ಯಾಸ್ ಏಜೆನ್ಸಿಯ ಅರುಣ್ ಕುಮಾರ್, ಮೂಕಾಂಬಿಕಾ ಗ್ಯಾಸ್ ಏಜೆನ್ಸಿಯ ರಮೇಶ್ ಉಪಸ್ಥಿತರಿದ್ದರು. ಗಣೇಶ್ ಉದುನಡ್ಕ ವಂದಿಸಿದರು.