Advertisement
ಕೋಲ್ಕತ್ತಾದ ನೀಲಾದ್ರಿ ಕುಮಾರ್ ಸಿತಾರ್- ಝಿತಾರ್ ತರಂಗಗಳ ಕಂಪನದ ಅಲೆ ಸೃಷ್ಟಿಸಿದರು. ಅವರ ಬೆರಳುಗಳ ಸಂಚಲನದ ಕಂಪನ- ತರಾಂಗಂತರಂಗಕ್ಕೆ ಬಯಲು ರಂಗಮಂದಿರವೇ ನಿನಾದದಲ್ಲಿ ತುಂಬಿತು. ತಾವೇ ಅಭಿವೃದ್ಧಿಪಡಿಸಿದ ಎಲೆಕ್ಟ್ರಿಕ್ ಸಿತಾರ್ ಕೆಂಪು ವರ್ಣದ “ಝಿತಾರ್’ ಮೂಲಕ ಕಛೇರಿ ಆರಂಭಿಸಿದ ನೀಲಾದ್ರಿ, ತಮ್ಮದೇ ಸಂಯೋಜನೆಯ “ಸಮ್ಮಿಲನ’ (ಫ್ಯೂಜನ್) ಮೂಲಕ ಕಛೇರಿಗೆ ನಾಂದಿ ಹಾಡಿದರು.
Related Articles
Advertisement
ಸಿತಾರ್, ತಬಲ, ಜಂಬೆ ಮತ್ತು ವಾಯೋಲಿನ್ ನಡುವಿನ ಜುಗಲ್ ಬಂ ಯಂತೂ ವಿಭಿನ್ನವಾಗಿ ಮೂಡಿಬಂತು. ಜಂಬೆ ಹಾಗೂ ಸಭಿಕರ ನಡುವಿನ ಜುಗಲ್ ಬಂದಿಯಂತೂ ಮನಮೋಹಕವಾಗಿತ್ತು. ತಬಲಾದಲ್ಲಿ ಅಮಿತ್ ಕವೆಕರ್, ಕೀಬೋರ್ಡ್ ನಲ್ಲಿ ಆ್ಯಂಜಲೋ ಫೆರ್ನಾಂಡಿಸ್, ಡ್ರಮ್ಸ್ ಮತ್ತು ಸ್ವರಮೇಳದಲ್ಲಿ ಝಾಕೀರ್ ಹುಸೇನ್ ಸಂಬಂಧಿ ಶಿಖರ್ ನಾದ್ ಖುರೇಷಿ, ವಯೋಲಿನ್ನಲ್ಲಿ ಯಾದೆ°àಶ್ ರಾಯ್ಕರ್ ಸಾಥ್ ನೀಡಿದರು. ಅಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ, ಮಾಜಿ ಸಚಿವರಾದ ನಾಗರಾಜ್ ಶೆಟ್ಟಿ, ಪಿ.ಜಿ.ಆರ್. ಸಿಂಧ್ಯಾ, ಅಭಯಚಂದ್ರ ಜೈನ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ| ಗಣೇಶ್ ಕಾರ್ಣಿಕ್ ಕಲಾವಿದರನ್ನು ಗೌರವಿಸಿದರು.
ಆಳ್ವಾಸ್ ಸಾಂಸ್ಕೃತಿಕ ವೈಭವಆಳ್ವಾಸ್ ಕಾಲೇಜು ವತಿಯಿಂದ ಸಾಂಸ್ಕೃತಿಕ ವೈಭವ ನಡೆಯಿತು. ಕೃಷ್ಣನ ಲೀಲೆ ಯಕ್ಷಗಾನದ ನೃತ್ಯ ರೂಪಕ, ಡೊಳ್ಳು ಕುಣಿತ ಹಾಗೂ ದಾಂಡಿಯಾ ನೃತ್ಯ ಪ್ರದರ್ಶನ, ಕೂಚುಪುಡಿ ನೃತ್ಯ ನಯನ ಮನೋಹರವಾಗಿದ್ದವು. ವಿದ್ಯಾರ್ಥಿಗಳ ಕುಣಿತ ಕಂಡ ಪ್ರೇಕ್ಷಕರು ಕೂಡ ತಲ್ಲೀನರಾಗಿರುವ ದೃಶ್ಯ ಕಂಡುಬಂತು. ವಿರಾಸತ್ ನೆಲದಲ್ಲಿ ವರ್ಣರಂಜಿತ ‘ತ್ರಿಪರ್ಣ’ ಪ್ರದರ್ಶನ
ಭರತನಾಟ್ಯ, ಒಡಿಸ್ಸಿ, ಕಥಕ್ ನೃತ್ಯ ಒಂದೇ ವೇದಿಕೆಯಲ್ಲಿ ಆಸ್ವಾದಿಸುವ ಅವಕಾಶ ಕೂಡಿ ಬಂದದ್ದು, ಆಳ್ವಾಸ್ ವಿರಾಸತ್ನ ನಾಲ್ಕನೇ ದಿನವಾದ ಸಾಂಸ್ಕೃತಿಕ ವೈಭವದ ಕಾರ್ಯಕ್ರಮದಲ್ಲಿ. ಕೋಲ್ಕತಾದ ಆಶಿಂ ಬಂಧು ಭಟ್ಟಾಚಾರ್ಯ ಅವರ “ತ್ರಿಪರ್ಣ’ ರಮಣೀಯವಾಗಿತ್ತು. ಭರತನಾಟ್ಯ, ಕಥಕ್ ಹಾಗೂ ಒಡಿಸ್ಸಿ ಮೂರೂ ಭಾರತೀಯ ಶಾಸ್ತ್ರೀಯ ನೃತ್ಯ ಕಲಾ ಪ್ರಕಾರಗಳ ವೇಷಭೂಷಣ, ವಾದ್ಯಮೇಳ, ಕೇಶವಿನ್ಯಾಸ ವಿಭಿನ್ನತೆಯಿಂದ ಕೂಡಿತ್ತು. ವಿರಾಸತ್ನಲ್ಲಿ ಮೂರೂ ಪ್ರಕಾರಗಳು ಸಂಗಮಿಸಿ ನೃತ್ಯಲೋಕವನ್ನೇ ಸೃಷ್ಟಿಸಿತು. ಡಾ| ಎಂ. ಮೋಹನ ಆಳ್ವ ಹಾಗೂ ಯಕ್ಷ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂ. ಎಲ್. ಸಾಮಗ ಕಲಾವಿದರಿಗೆ ಸ್ಮರಣಿಕೆ ನೀಡಿ ಗೌರವಿಸಿದರು. ನಿತೇಶ್ ಮಾರ್ನಾಡು ಕಾರ್ಯಕ್ರಮ ನಿರೂಪಿಸಿದರು.
ವಾರಾಂತ್ಯದಲ್ಲಿ ಆಳ್ವಾಸ್ ಆವರಣದಲ್ಲಿ ಜನ ಸಾಗರದ ನಿರೀಕ್ಷೆ
ಮೂಡುಬಿದಿರೆ: ದೃಷ್ಟಿ ಹಾಯಿಸಿದಷ್ಟು ದೂರ ಜನವೋ ಜನ. ಕಾರ್ಯಕ್ರಮಗಳಲ್ಲಿ ಶಿಳ್ಳೆ ಚಪ್ಪಾಳೆಯೊಂದಿಗೆ ಸಂಭ್ರಮ. ಮೂಡುಬಿದಿರೆಯ ಆಳ್ವಾಸ್ ವಿರಾಸತ್ನಲ್ಲಿ ಎಲ್ಲಿ ನೋಡಿದರಲ್ಲಿ ಜನ ಸಾಗರವೇ ಕಂಡುಬರುತ್ತಿದೆ. ಡಿ. 10ರಿಂದ ವಿದ್ಯಾಗಿರಿಯಲ್ಲಿ ನಡೆಯುತ್ತಿರುವ ವಿರಾಸತ್ಗೆ ರಾಜ್ಯದ ಮೂಲೆ ಮೂಲೆಗಳಿಂದ ಜನ ಆಗಮಿಸುತ್ತಿದ್ದಾರೆ. ಬೆಳಗ್ಗಿನಿಂದ ನಡೆಯುತ್ತಿರುವ ಕೃಷಿ, ಆಹಾರ, ಹೂವಿನ ಮೇಳದಲ್ಲಿ ಜನ ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು. ವಿವಿಧ ಮೇಳಗಳಿಗೆ ಜನ ಆಗಮಿಸುತ್ತಿರುವುದು ಸಾಮಾನ್ಯವಾಗಿತ್ತು. ಕೆಲವರು ಖರೀದಿಯಲ್ಲಿ ತೊಡಗಿದರೆ ಹೆಚ್ಚಿನವರು ಮೇಳದಲ್ಲಿದ್ದ ವಿವಿಧ ಮಳಿಗೆಗಳನ್ನು ಕಣ್ತುಂಬಿಕೊಂಡು ಖುಷಿಪಟ್ಟರು. ಹಲವು ಕೃಷಿ ಉಪಕರಣಗಳ ಪ್ರಾತ್ಯಕ್ಷಿಕೆಯಂತೂ ಕೆಲವು ಕೃಷಿಕರನ್ನು ಚಕಿತರನ್ನಾಗಿ ಮಾಡಿಸಿತು. ಗದಗ, ಹಾವೇರಿ, ಬೆಳಗಾವಿ, ಬಿಜಾಪುರ, ಶಿರ್ಶಿ ಸೇರಿದಂತೆ ಇತ್ಯಾದಿ ಜಾಗಗಳಿಂದ ಆಗಮಿಸಿದ ಜನರಂತೂ ಬಹುಸಂಸ್ಕೃತಿಯ ವೈಭವ ಕಂಡು ಪುಳಕಿತರಾಗಿದ್ದರು. ವಾರದ ನಡುವೆಯೇ ಸಹಸ್ರಾರು ಜನ ಆಗಮಿಸುತ್ತಿದ್ದು ವಾರಾಂತ್ಯದಲ್ಲಿ ಜನಸಾಗರವೇ ವಿರಾಸತ್ಗೆ ಆಗಮಿಸುವ ನಿರೀಕ್ಷೆ ಇದೆ. ಶುಕ್ರವಾರದ ವರೆಗೆ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ 40 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದು, ಶನಿವಾರ, ರವಿವಾರಗಳಂದು ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ವಿದ್ಯಾಗಿರಿ ಆವರಣ ವಾರಾಂತ್ಯಕ್ಕೆ ಜನ ದಾಂಗುಡಿಯಿಡುವ ಸಾಧ್ಯತೆ ಇದೆ. ಸಾಗರದಿಂದ ಆಗಮಿಸಿದ ಕವಿತಾ ಅವರು “ಉದಯವಾಣಿ’ಯೊಂದಿಗೆ ಮಾತನಾಡಿ, ಜಾತ್ರೆಯಂತೆ ವಿರಾಸತ್ ನಲ್ಲಿ ನಮ್ಮ ಸಂಪ್ರದಾಯ ಅನಾವರಣವಾಗಿದೆ. ಆವರಣದಲ್ಲಿ ಯಾವುದೇ ಭಯವಿಲ್ಲದೆ ನಿಶ್ಚಿಂತೆಯಿಂದ ಓಡಾಡಬಹುದಾಗಿದೆ. ಎಲ್ಲ ವರ್ಗದ ಜನ ಬಂದ್ರು ಉತ್ತಮವಾಗಿ ಆಯೋಜಿಸಲಾಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಆಗ್ರಾದಿಂದ ಆಗಮಿಸಿದ ಅರ್ಷದ್ ಅವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿ, ಇಂತಹ ಕಾರ್ಯಕ್ರಮವನ್ನು ದೇಶದಲ್ಲೇ ಮೊದಲ ಬಾರಿಗೆ ನೋಡುತ್ತಿದ್ದೇನೆ. ಇಲ್ಲಿನ ಶಿಸ್ತು ಅಚ್ಚುಕಟ್ಟಿನ ಅಯೋಜನೆ ನಿಜಕ್ಕೂ ಶ್ಲಾಘನೀಯ. ಕಾರ್ಯಕ್ರಮದಲ್ಲಿ ಭಾಗವಹಿಸಿ ತುಂಬಾ ಖುಷಿಯಾಗಿದೆ. ಸಂಜೆಯ ಕಾರ್ಯಕ್ರಮಗಳು ಒಂದಕ್ಕೋಂದು ಭಿನ್ನ ಎಂಬುವುದಾಗಿ ಅಭಿಪ್ರಾಯ ಹಂಚಿಕೊಂಡಿದ್ದಾರೆ.