Advertisement

ಹೆತ್ತವರೇ ನಿಜವಾದ ಹೀರೋಗಳು

10:24 AM Jan 21, 2019 | Team Udayavani |

ಕನಕಗಿರಿ: ಸಿನಿಮಾ ರಂಗದ ಹೀರೋಗಳನ್ನು ನಾವು ಮಾದರಿಯಾಗಿ ಇಟ್ಟುಕೊಳ್ಳಬಾರದು. ನಮಗೆ ಜನ್ಮ ನೀಡಿ, ಜೀವನ ರೂಪಿಸಿದ ನಮ್ಮ ತಂದೆ-ತಾಯಿಗಳೇ ನಮ್ಮಗೆ ನಿಜವಾದ ಹೀರೋಗಳು ಮತ್ತು ಆದರ್ಶ ವ್ಯಕ್ತಿಗಳು ಎಂದು ಹಿರೇಹಡಗಲಿ ಹಾಲಸ್ವಾಮೀಜಿ ಸಂಸ್ಥಾನಮಠ ಪೀಠಾಧಿಪತಿ ಅಭಿವನ ಹಾಲವೀರಾಪ್ಪಜ್ಜ ಸ್ವಾಮಿ ಹೇಳಿದರು.

Advertisement

ಪಟ್ಟಣದ ಕಲ್ಮಠದ ಹತ್ತಿರ ಯುವಕರು ರವಿವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರು ಬರೀ ಭಾಷಣವನ್ನು ಮತ್ತು ಉಪದೇಶವನ್ನು ಮಾಡಲಿಲ್ಲ. ಅದರ ಜೊತೆ ರಾಷ್ಟ್ರದ ಸೇವೆಯನ್ನು ಮಾಡಿದರು. ರಾಷ್ಟ್ರದ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. ಸ್ವಾಮಿ ವಿವೇಕಾನಂದರ ಒಳಗೆ ಸಂತ ಜೊತೆಗೆ ಅವರೊಳಗೆ ಒಬ್ಬ ವಿಜ್ಞಾನಿ ಇದ್ದನು. ಯುವ ಮನಸ್ಸುಗಳಿಗೆ ಇಡೀ ಜಗತ್ತನೇ ಗೆಲ್ಲುವ ಸಾಮರ್ಥ್ಯವಿದೆ. ದೇಶ ಕಾಯುವ ಸೈನಿಕರು ದೇಶ ಅಭಿಮಾನವಿದೆ. ಅವರನ್ನು ನಾವು ಮಾದರಿಯಾಗಿ ನೋಡಬೇಕು. ದೇಶಕ್ಕಾಗಿ ಪ್ರಾಣವನ್ನೇ ಬಿಟ್ಟ ಹನುಮಂತಪ್ಪ ಕೊಪ್ಪದ್‌ ಉತ್ತರ ಕರ್ನಾಟಕದವರು ಎಂಬುವುದು ನಮ್ಮ ಹೆಮ್ಮೆ. ವಿವೇಕಾನಂದ ತತ್ವ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದರು.

ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ಸ್ವಾಮಿ ವಿವೇಕಾನಂದರ ಜಯಂತಿಯನ್ನು ಒಂದು ವೇದಿಕೆಗೆ ಸೀಮಿತಗೊಳಿಸುವುದು ಸರಿಯಲ್ಲ. ಪ್ರತಿ ಮನೆಯಲ್ಲಿ ಅವರ ಜಯಂತಿಯನ್ನು ಆಚರಿಸಬೇಕು. ಯುವಕರಿಗೆ ಸೇವಾ ಮನೋಭಾವನೆ ಇರಬೇಕು. ನಾವು ಇರುವಷ್ಟು ದಿನ ಸಮಾಜಕ್ಕೆ ಏನಾದರೂ ಒಳ್ಳೆಯ ಕೆಲಸವನ್ನು ಮಾಡಬೇಕು. ಇದರಿಂದ ಜೀವನ ಸಾರ್ಥಕವಾಗುವುದು ಎಂದರು.

ಕಾರ್ಯಕ್ರಮದ ಸಾನಿಧ್ಯವನ್ನು ಅರಳಹಳ್ಳಿ ಬೃಹನ್ಮಠದ ಗವಿಸಿದ್ದಯ್ಯಸ್ವಾಮಿ ವಹಿಸಿಕೊಂಡಿದ್ದರು. ಕಾರ್ಯಕ್ರಮವನ್ನು ಶಾಸಕ ಬಸವರಾಜ ದಢೇಸುಗೂರು ಉದ್ಘಾಟಿಸಿದ್ದರು. ಪ್ರಾಸ್ತಾವಿಕವಾಗಿ ಸೋಮನಾಥಸ್ವಾಮಿ ಹಣವಾಣ ಮಾತನಾಡಿದರು. ಪಟ್ಟಣದ ಕಲ್ಮಠದಿಂದ ಪ್ರಾರಂಭವಾದ ಶೋಭಾಯಾತ್ರೆ ರಾಜಬೀದಿಯ ಮೂಲಕ ವಾಲ್ಮೀಕಿ ವೃತ್ತ ತಲುಪಿತು.

ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ರವಿ ಸಜ್ಜನ್‌, ರವಿ ಭಜಂತ್ರಿ, ಪ್ರಮುಖರಾದ ಡಾ| ದೊಡ್ಡಯ್ಯ ಅರವಟಗಿಮಠ, ಮಹಾಂತೇಶ ಸಜ್ಜನ್‌, ವಾಗೇಶ ಹಿರೇಮಠ, ಸಣ್ಣ ಕನಕಪ್ಪ, ಅಶ್ವಿ‌ನಿ ದೇಸಾಯಿ, ಬಿ.ವಿ. ಜೋಶಿ, ರಂಗಪ್ಪ ಕೊರಗಟಗಿ, ಮಂಜುನಾಥರೆಡ್ಡಿ ಸಿಂಧುವಾಳ, ರುದ್ರಪ್ಪ ದೇವರೆಡ್ಡಿ ಸೇರಿದಂತೆ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next