Advertisement

Kambala: ಬೆಂಗಳೂರಿಗರ ಕುತೂಹಲ️ ತಣಿಸುತ್ತಿದೆ ರಾಜ ಮಹಾರಾಜ ಕಂಬಳ

03:11 PM Nov 25, 2023 | Team Udayavani |

ಬೆಂಗಳೂರು: ಸಿನಿಮಾದಲ್ಲಿ, ವಿಡಿಯೋದಲ್ಲಿ ಕಂಬಳ ನೋಡಿದ್ದ ಬೆಂಗಳೂರು ಮಹಾನಗರದ ಜನತೆ ಇದೇ ಮೊದಲ️ ಬಾರಿಗೆ ನೇರವಾಗಿ ಕಂಬಳ ನೋಡಿ ಪುಳಕಿತಗೊಂಡಿದ್ದಾರೆ.

Advertisement

ಅಬ್ಬರದ ಕೋಣಗಳ ಓಟ, ಕಟ್ಟುಮಸ್ತಾದ ದೇಹದಿಂದ ಕಚ್ಚೆ ಉಟ್ಟು ಓಡುತ್ತಿರುವ ಓಟಗಾರರನ್ನು ತದೇಕಚಿತ್ತದಿಂದ ಕಾಣುತ್ತಿರುವ ಜನತೆ, ಕರಾವಳಿಯಿಂದ ಬಂದು ನಮ್ಮ ಊರಿನ ಕಂಬಳ ಇಲ್ಲಿ ಹೇಗೆ ಸಾಗುತ್ತಿದೆ ಎಂದು ಕುತೂಹಲಿಗರಿಗಾಗಿ ನೋಡುತ್ತಿರುವವರು ಒಂದೆಡೆಯಾದರೆ, ಕಂಬಳ ಇರಲಿ ನಾವು ಜಾತ್ರೆ ಸುತ್ತುವ ಎಂಬ ಮತ್ತೊಂದು ಗುಂಪು… ಇದಕ್ಕೆಲ್ಲಾ ಸಾಕ್ಷಿಯಾಗಿದ್ದು ಇದೇ ಮೊದಲ️ ಬಾರಿಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ರಾಜ ಮಹಾರಾಜ ಜೋಡುಕರೆ ಕಂಬಳ.

ಬೆಂಗಳೂರಿನಲ್ಲಿ ಕಂಬಳ ನಡೆಯಲಿದೆ ಎಂದು ತಿಳಿದು ಪುಳಕಿತರಾಗಿದ್ದ  ಮಹಾನಗರಿಗರು ಸಾಲುಕಟ್ಟಿ ಅರಮನೆ ಮೈದಾನಕ್ಕೆ ಆಗಮಿಸಿದ್ದಾರೆ. ಸಾಲ️- ಸಾಲು ವಾಹನಗಳ ಕಾರಣದಿಂದ ಟ್ರಾಫಿಕ್ ಜಾಮ್ ಕೂಡಾ ಉಂಟಾಗಿತ್ತು. ಕೇವಲ️ ಕನ್ನಡಿಗರು ಮಾತ್ರವಲ️್ಲದೆ ಬೆಂಗಳೂರಿನಲ್ಲಿ ವಾಸವಿರುವ ತಮಿಳರು, ತೆಲುಗರು ಸೇರಿ ಹಲ️ವು ಸಂಪ್ರದಾಯಗಳ ಮಂದಿ ತುಳುನಾಡ ಕಂಬಳವನ್ನು ಕಣ್ತುಂಬಿ️ಕೊಂಡರು.

ಮಳೆರಾಯನ ಆಗಮನ

Advertisement

ಕಂಬಳ ಕೂಟಕ್ಕೆ ಮಧ್ಯಾಹ್ನದ ಸಮಯದಲ್ಲಿ ಮಳೆರಾಯನ ಎಂಟ್ರಿಯಾಯಿತು. ಒಮ್ಮೆಗೆ ಸುರಿದ ಗಾಳಿ ಮಳೆಗೆ ಬಯಲ️ಲ್ಲಿ ನಿಂತಿದ್ದ ಜನತೆ ರಕ್ಷಣೆಗೆ ಓಡಿದರು. ಮಳೆ ಬಂದರೂ ಕಂಬಳ ಕೂಟ ಮಾತ್ರ ಸರಾಗವಾಗಿ ನಡೆಯುತ್ತಿತ್ತು.

ಬಣ್ಣ ಬಣ್ಣದ ಜರ‍್ಸಿ

ಕಂಬಳ ಕೂಟದಲ್ಲಿ ಭಾಗವಹಿಸುವ ತಂಡಗಳು ತಮಗೆ ಬೇಕಾದಂತೆ ಭಿನ್ನ ರೀತಿಯ ಜರ‍್ಸಿಗಳನ್ನು ಧರಿಸುತ್ತಾರೆ. ಹೀಗಾಗಿ ಪ್ರತಿ ತಂಡವೂ ಭಿನ್ನವಾಗಿ ಕಾಣುತ್ತದೆ. ಜರ‍್ಸಿ ನೋಡಿಯೇ ಯಾವ ತಂಡ ಎಂದು ಗುರುತಿಸಬಹುದು. ಹೀಗಾಗಿ ನೂರೈವತ್ತಕ್ಕೂ ಹೆಚ್ಚು ಜೋಡಿ ಕೋಣಗಳು ಭಾಗವಹಿಸಿರುವ ಬೆಂಗಳೂರು ಕಂಬಳದಲ್ಲಿ ಈ ಜರ‍್ಸಿಗಳು ಅಲ್ಲಲ್ಲಿ ಗಮನ ಸೆಳೆದವು.

ಫೋಟೊ ಫೋಟೊ ಫೋಟೊ

ಕುತೂಹಲದಿಂದಲೇ ಕಂಬಳ ನೋಡಲು ಬಂದಿರುವ ಜನತೆ ಎಲ್ಲಾ ಕಡೆ ಹೊಸತನ್ನು ಕಂಡು ಫೋಟೊ  ತೆಗೆಯುವುದರಲ್ಲಿ ಮಗ್ನರಾಗಿದ್ದರು. ಕಂಬಳದ ಕೋಣಗಳ ಫೋಟೊ, ಸಾಧು ಸ್ವಭಾವದ ಕೋಣಗಳ ಜೊತೆ, ಓಟಗಾರರ ಜೊತೆಗೆ ಅಲ️್ಲದೆ ಮೈದಾನದಲ್ಲಿ ಇರಿಸಲಾಗಿದ್ದ ಹಲ️ವು ಪ್ರತಿಕೃತಿಗಳ ಜೊತೆಗೆ ಸೆಲ್ಫಿ ತೆಗೆದುಕೊಳ್ಳುವುದು ಸಾಮಾನ್ಯವಾಗಿತ್ತು. ಅಲ️್ಲದೆ ಕಂಬಳ ಕರೆಯ ತುಂಬಾ ಸಮೀಪ ಹೋಗಲು ಅವಕಾಶವಿಲ️್ಲದ ಕಾರಣ ದೂರದಿಂದಲೇ ಕೋಣಗಳು ಓಡುವ ಫೋಟೊ ತೆಗೆದು ಸಂತಸಗೊಂಡರು.

ಜನರನ್ನು ಸಂಭಾಳಿಸುವುದೇ ಕಷ್ಟ

ತಮ್ಮ ತಮ್ಮ ಟೆಂಟ್ ಗಳನ್ನು ಹಾಕಿಕೊಂಡು ಕೋಣಗಳನ್ನು ಕಟ್ಟಿಕೊಂಡು ವಿರಾಮ ಪಡೆಯುತ್ತಿರುವ ಯಜಮಾನರುಗಳಿಗೆ ಜನರನ್ನು ಸಂಭಾಳಿಸುವುದೇ ಸಂಕಷ್ಟವಾಗಿದೆ. ಟೆಂಟ್ ಸುತ್ತ ಬಟ್ಟೆ ಕಟ್ಟಿದ್ದರೂ ಕುತೂಹಲ️ದ ಅಭಿಮಾನಿಗಳು ಬಂದು ಕೋಣಗಳ ಜೊತೆ ಫೋಟೋ ತೆಗೆದುಕೊಳ್ಳಲು ಪ್ರಯತ್ನಿಸುವ ದೃಶ್ಯಗಳು ಕಂಡುಬಂತು.

ಇದೇ ಮೊದಲ️ ಬಾರಿಗೆ ಕಂಬಳ ನಡೆಯುತ್ತಿರುವ ಕಾರಣ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದ ಮಾಧ್ಯಮಗಳು ಕಂಬಳದ ಸುದ್ದಿ ಮಾಡುತ್ತಿವೆ. ಹಲ️ವು ಟೆಂಟ್ ಗಳಲ್ಲಿ ಕೋಣದ ಯಜಮಾನರುಗಳು ಮಾಧ್ಯಮದ ಕ್ಯಾಮರಾದ ಎದುರು ತಮ್ಮ ಕೋಣಗಳನ್ನು ಹೆಮ್ಮೆಯಿಂದ ವರ್ಣಿಸುತ್ತಿದ್ದರು.

ಉಭಯ ಭಾಷೆಗಳಲ್ಲಿ ವಿವರಣೆ

ಸಾಮಾನ್ಯವಗಿ ಕಂಬಳ ಕೂಟಗಳಲ್ಲಿ ತುಳು ಭಾಷೆಯಲ್ಲಿ ವೀಕ್ಷಕ ವಿವರಣೆ ನಡೆಯುತ್ತಿದೆ. ಆದರೆ ಬೆಂಗಳೂರಿನಲ್ಲಿ ಮಾತ್ರ ಎಲ️್ಲರಿಗೂ ಅರ್ಥವಾಗಬೇಕಾದ ಕಾರಣ ಕನ್ನಡ ಮತ್ತು ತುಳು ಭಾಷೆಗಳಲ್ಲಿ ವೀಕ್ಷಕ ವಿವರಣೆ ನಡೆಯುತ್ತಿದೆ.

ದೊಡ್ಡ ಪರದೆ

ಕಂಬಳ ಕರೆಯ ಸಮೀಪ ಜನ ತುಂಬಿ️ ಹೋದ ಕಾರಣ ಹಲ️ವರು ದೊಡ್ಡ ಡಿಜಿಟಲ್ ಪರದೆಗಳಲ್ಲಿ ಕಂಬಳ ವೀಕ್ಷಣೆ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next