Advertisement

ಪ್ರೊ ಕಬಡ್ಡಿ: ತಲೈವಾಸ್‌ಗೆ ನಟ ಕಮಲ್‌ ಹಸನ್‌ ರಾಯಭಾರಿ

05:40 AM Jul 20, 2017 | |

ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ಕಮಲ್‌ ಹಸನ್‌ ಪ್ರೊಕಬಡ್ಡಿ 5ನೇ ಆವೃತ್ತಿಯಲ್ಲಿ ಇದೇ ಮೊದಲ ಬಾರಿಗೆ ಪಾಲ್ಗೊಂಡಿರುವ ಕ್ರಿಕೆಟ್‌ ದಂತಕಥೆ ಸಚಿನ್‌ ತೆಂಡುಲ್ಕರ್‌ ಮಾಲೀಕತ್ವದ ತಮಿಳು ತಲೈವಾಸ್‌ ತಂಡಕ್ಕೆ ರಾಯಭಾರಿಯಾಗಿ ಆಯ್ಕೆಯಾಗಿದ್ದಾರೆ. 

Advertisement

ತಂಡದ ಮಾಲೀಕರು ನನ್ನನ್ನು ತಮಿಳು ತಲೈವಾಸ್‌ ತಂಡಕ್ಕೆ ರಾಯಭಾರಿಯಾಗಿ ಆಯ್ಕೆ ಮಾಡಿ ಗೌರವ ನೀಡಿರುವುದು ಸಂತಸದ ವಿಷಯ. ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕೂಟದಲ್ಲಿ ತಲೈವಾಸ್‌ ತಂಡ ಅತ್ಯುತ್ತಮ ಪ್ರದರ್ಶನ ನೀಡಲಿದೆ ಎನ್ನುವ ವಿಶ್ವಾಸವನ್ನು ಕಮಲ್‌ ಹಸನ್‌ ಹೊಂದಿದ್ದಾರೆ. ಸಚಿನ್‌ ಜತೆಗೆ ಖ್ಯಾತ ಉದ್ಯಮಿ ಎನ್‌.ಪ್ರಸಾದ್‌ ಕೂಡ ತಂಡದ ಮಾಲೀಕತ್ವ ಹೊಂದಿದ್ದಾರೆ. ಕೂಟ ಜುಲೈ 28ರಂದು ಹೈದರಾಬಾದ್‌ನಲ್ಲಿ ಆರಂಭವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next