Advertisement

ಆರ್ಟ್‌ ಆಫ್ ಲಿವಿಂಗ್‌ನಿಂದ 1500 ಕಿಟ್‌

03:23 PM May 11, 2020 | Team Udayavani |

ಕಲಬುರಗಿ: ಕೋವಿಡ್  ನಿಂದ ಸಂಕಷ್ಟಕ್ಕೆ ಸಿಲುಕಿರುವ ಕೂಲಿ ಕಾರ್ಮಿಕರ ಹಾಗೂ ಬಡವರಿಗೆ ನೆರವಾಗುವ ನಿಟ್ಟಿನಲ್ಲಿ ನಗರದ ಆರ್ಟ್‌ ಆಫ್ ಲಿವಿಂಗ್‌ನ ಜ್ಞಾನಕ್ಷೇತ್ರದಿಂದ 1500 ಆಹಾರ ಧಾನ್ಯಗಳ ಕಿಟ್‌ಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಯಿತು.

Advertisement

ರವಿಶಂಕರ ಗೂರುಜಿ ಅವರ ನೇತೃತ್ವದಲ್ಲಿ ಆರು ತಿಂಗಳು ಹಿಂದೆ ನಗರದ ಸಾರ್ವಜನಿಕ ಉದ್ಯಾನವನಲ್ಲಿ ಪ್ರಾರಂಭವಾಗಿರುವ ಆರ್ಟ್ ಆಫ್ ಲಿವಿಂಗ್‌ದಲ್ಲಿ ಜಿಲ್ಲಾಧಿಕಾರಿ ಶರತ್‌ ಬಿ. ಅವರಿಗೆ ಕಿಟ್‌ಗಳನ್ನು ಹಸ್ತಾಂತರಿಸಲಾಯಿತು. ಗೂರುಜಿ ಅವರ ಭಕ್ತರ ಸಹಾಯದಿಂದ ಸುಮಾರು 200 ಕ್ವಿಂಟಾಲ್‌ ದವಸ ಧಾನ್ಯಗಳ ಕಿಟ್‌ಗಳನ್ನು ಸಲ್ಲಿಸಲಾಗಿದೆ. ಕೋವಿಡ್ ನಿಯಂತ್ರಣಕ್ಕೆ ಭಕ್ತರೆಲ್ಲರ ತನು ಮನದ ಸಹಾಯ ಸದಾ ಇದ್ದೇ ಇರುತ್ತದೆ ಎಂದು ತಿಳಿಸಲಾಯಿತು.

ಜಿಲ್ಲಾಧಿಕಾರಿ ಶರತ್‌ ಬಿ. ಮಾತನಾಡಿ, ಕೋವಿಡ್ ಹೊಡೆದೊಡಿಸಲು ಹಾಗೂ ಸಮರ್ಥವಾಗಿ ಎದುರಿಸಲು ಎಲ್ಲರೂ ಕೈ ಜೋಡಿಸುವುದು ಅಗತ್ಯವಾಗಿದೆ ಎಂದು ಹೇಳಿದರು. ಆರ್ಟ್‌ ಆಫ್ ಲಿವಿಂಗ್‌ನ ಜ್ಞಾನಕ್ಷೇತ್ರದ ಶರಣು ಗೂರುಜಿ ಹಾಗೂ ಚಿರಾಗ್‌ ಮಾತನಾಡಿ, ಭಕ್ತರು ಹಾಗೂ ದಾನಿಗಳು ನೀಡಿದ ಸಹಾಯ ಕ್ರೋಢಿಕರಿಸಿ ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ. ಕಿಟ್‌ದಲ್ಲಿ 5 ಕೆಜಿ ಅಕ್ಕಿ, 5 ಕೆಜಿ ಗೋಧಿ ಹಿಟ್ಟು, 1 ಕೆಜಿ ಬೇಳೆ, ಒಂದು ಕೆಜಿ ಎಣ್ಣೆ, ಸಾಬೂಬು, ಖಾರಾ, ಅರಸಿಣ ಸೇರಿ ಇತರ ದವಸ ಧಾನ್ಯಗಳಿವೆ ಎಂದು ಹೇಳಿದರು.

ಸಂಜೀವ ಗುಪ್ತಾ, ಡಾ| ಶಿವರಾಜ ಪಾಟೀಲ ಹರವಾಳ, ಸಂಪತ್ತ ಗಿಲ್ಡಾ, ಈಶ್ವರ ಕಿಂಗ್‌, ಉದಯಗಿರಿ ನವಣಿ, ಶಿವಲಿಂಗಪ್ಪ ರಾವೂರ, ಶರಣಬಸಪ್ಪ ರಾವೂರ, ಮಲ್ಲಿನಾಥ ದೇವರಮನಿ, ಡಾ| ಶರಣಗೌಡ, ಡಾ| ಸುರೇಶ ನವಣಿ, ಸಂಜೀವ ಆರ್‌., ಸಮೀರ, ಸುಶಾಂತ, ಬಾಬುರಾವ್‌ ಶೆರಿಕರ್‌, ಡಾ| ಕವಿರಾಜ, ದತ್ತ ರಂಗದಾಳ, ಗೋವಿಂದ, ಅನಿಲ ರಸಾಳಕರ್‌, ಬಿ. ನಾಗೇಶ, ಪ್ರವೀಣ ಇಟ್ಗಂಪಳ್ಳಿ ಇತರರು ಕೈ ಜೋಡಿಸಿದ್ದಾರೆ ಎಂದು ಹೇಳಿದರು. ಜಿಪಂ ಸಿಇಒ ಡಾ| ರಾಜಾ ಪಿ. ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next