Advertisement
ನಾಲ್ಕು ದಿನಕ್ಕೊಮ್ಮೆ 200 ಲೀಟರ್ ನೀರಿಗೆ 20 ಲೀಟರ್ ಗೋಮೂತ್ರ ಮಿಶ್ರಣ ಮಾಡಿ ಕಲ್ಲಂಗಡಿ ಬಳ್ಳಿಗೆ ಹಾಕಲಾಗಿದೆ. ಅದೇ ರೀತಿ ಜೀವಾಮೃತ ಸಹ ಬಳಸಿ ಕಲ್ಲಂಗಡಿ ಬೆಳೆಯಲಾಗಿದೆ. ಅಫಜಲಪುರ ತಾಲೂಕಿನ ಭೈರಾಮಡಗಿ ಗ್ರಾಮದ ಪ್ರಗತಿಪರ ರೈತ ಶರಣಗೌಡ ಎಸ್. ಪಾಟೀಲ್ ಅವರೇ ಸಾವಯವ ಪದ್ಧತಿಯಲ್ಲಿ ಕಲ್ಲಂಗಡಿ ಬೆಳೆದು ಮಾದರಿ ರೈತರಾಗಿ ಹೊರ ಹೊಮ್ಮಿದ್ದಾರೆ. ಒಂದೂವರೆ ಎಕರೆ ಭೂಮಿಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಬರೀ ತಿಪ್ಪೆ ಗೊಬ್ಬರ ಬಳಸಲಾಗಿದೆ. ಕಲ್ಲಂಗಡಿ ಹಣ್ಣು ದಪ್ಪವಾಗಲು ಔಷಧಿ ಸಿಂಪಡಿಸಿಲ್ಲ. ಜತೆಗೆ ಹಣ್ಣು ಕೆಂಪಾಗಿಸಲು ಸಹ ಯಾವುದೇ ಔಷಧ ಬಳಸಿಲ್ಲ. ಬರೀ ಗೋಮೂತ್ರ ಹಾಗೂ ಜೀವಾಮೃತದೊಂದಿಗೆ ರುಚಿಯಾದ ಕಲ್ಲಂಗಡಿ ಬೆಳೆಯಲಾಗಿದೆ. ರೈತ ಶರಣಗೌಡ ಸಾವಯವವಾಗಿ ಬೆಳೆಯಲಾದ ಕಲ್ಲಂಗಡಿಯನ್ನು ವ್ಯಾಪಾರಸ್ಥರಿಗೆ (ದಲ್ಲಾಳಿಗಳು) ಒಟ್ಟಿಗೆ ಮಾರಾಟ ಮಾಡದೇ ರೈತರು ಹಾಗೂ ಸ್ನೇಹಿತರು ಮತ್ತು ಇತರರು ತಿನ್ನಲಿ ಎಂದು ಮುಕ್ತವಾಗಿ ಆಹ್ವಾನ ನೀಡುತ್ತಿದ್ದಾರೆ. ಜತೆಗೆ ಸಾವಯವಾಗಿ ಕಲ್ಲಂಗಡಿ ಬೆಳೆಯುವುದರ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.
ಶರಣಗೌಡ ಪಾಟೀಲ್,
ಪ್ರಗತಿಪರ ರೈತ