Advertisement

Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್

05:29 PM Nov 26, 2024 | Team Udayavani |

ಕಲಬುರಗಿ: ರಾಜ್ಯದಲ್ಲಿನ ಮಠ-ಮಂದಿರಗಳ ಹಾಗೂ ರೈತರ ಜಮೀನಿನ ದಾಖಲೆಗಳಲ್ಲಿ ವಕ್ಫ್ ಎಂಬುದಾಗಿ ನಮೂದಿಸಿರುವುದಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 2 ರ ನಂತರ ಕೇಂದ್ರದ ಜಗದಾಂಬಿಕಾ ಪಾಲ್ ನೇತೃತ್ವದ ಸಮಿತಿಗೆ ಮಧ್ಯಂತರ ವರದಿ ಸಲ್ಲಿಸಲಾಗುವುದು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ತಿಳಿಸಿದರು.

Advertisement

ಮಂಗಳವಾರ (ನ.26) ನಗರದಲ್ಲಿ ವಕ್ಫ್ ವಿರುದ್ಧ ಹಮ್ಮಿಕೊಳ್ಳಲಾದ ಜನ ಜಾಗೃತಿ ಅಭಿಯಾನ ಉದ್ದೇಶಿಸಿ ಮಾತನಾಡಿದ ಅವರು, ಬೀದರ್‌ ನಿಂದ ತಮ್ಮ ನೇತೃತ್ವದಲ್ಲಿ ಅಭಿಯಾನ ಕೈಗೊಂಡಿದ್ದು, ಕಲ್ಯಾಣ ಕರ್ನಾಟಕದ ಜಿಲ್ಲೆಗಳು ಹಾಗೂ ಬಾಗಲಕೋಟೆಯಲ್ಲಿ ಸಂಚರಿಸಿ ಡಿಸೆಂಬರ್ 2ರಂದು ತಮ್ಮ ನೇತೃತ್ವದ ಹೋರಾಟ ಸಮಿತಿ ನವದೆಹಲಿಗೆ ತೆರಳಿ ಮರುದಿನ ಅಥವಾ ಡಿಸೆಂಬರ್ 4ರಂದು ಮಧ್ಯಂತರ ವರದಿ ಸಲ್ಲಿಸಲಾಗುವುದು ಎಂದರು.

ವಕ್ಫ್ ಕಾಯ್ದೆ ಬಗ್ಗೆ ಡಾ. ಬಿ. ಆರ್. ಅಂಬೇಡ್ಕರ ಸಂವಿಧಾನದಲ್ಲಿ ಎಲ್ಲೂ ಉಲ್ಲೇಖಿಸಿಲ್ಲ. ಆದರೆ ಕಾಂಗ್ರೆಸ್‌ನವರು ಸಂವಿಧಾನ ದುರುಪಯೋಗಪಡೆಸಿಕೊಂಡು ಜಾರಿ ತಂದರು. ಜಮ್ಮು ಕಾಶ್ಮೀರದಲ್ಲಿ ಮೀಸಲಾತಿಯೇ ಇರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ 370 ವಿಧಿ ರದ್ದು ಮಾಡಿದ ನಂತರ ಈಗ ಐವರು ಪರಿಶಿಷ್ಟ ಜಾತಿಯವರು ಶಾಸಕರಾಗಿದ್ದಾರೆ. ಆದರೆ ಕಾಂಗ್ರೆಸ್‌ನವರೇ ಮೋದಿ ಅವರು ಸಂವಿಧಾನ ಬದಲು ಮಾಡಲು ಹೊರಟಿದ್ದಾರೆ ಎಂದು ಅಪಪ್ರಚಾರ ಮಾಡುತ್ತಾರೆ. ಇನ್ನಾದರೂ ಹಿಂದುಗಳು ಎಚ್ಚರಗೊಳ್ಳಬೇಕೆಂದರು.

ಟ್ರಿಬ್ಯುನಲ್ ರದ್ಧಾಗಬೇಕು, ವಕ್ಫ್ ಕಾಯ್ದೆ ಕಿತ್ತು ಹಾಕಬೇಕೆಂಬುದು ತಮ್ಮ ಬೇಡಿಕೆಯಾಗಿದೆ. ತಮ್ಮ ಹೋರಾಟ ಯಾವುದಾದರೂ ಕುಟುಂಬದ ವಿರುದ್ದ ಅಲ್ಲ, ಯಾರಾದರೂ ಏನನ್ನಾದರಲೂ ಹೇಳಲಿ. ಹೋರಾಟಕ್ಕೆ ಬರಬೇಡಿ ಎಂದು ಹೇಳಿದರೂ ತಮಗೇನಿಲ್ಲ. ಆದರೆ ಮುಂದೆ ಟಿಕೆಟ್ ನೀಡುವ ಅಧಿಕಾರ ತಮಗೆ ಸಿಗಲಿದೆ ಹಾಗೂ ತಮ್ಮ ತಂಡದೊಳಗೆ ಸಿಎಂ ಆಗುವ ಕಾಲ ಬರುತ್ತದೆ ಎಂದು ಮತ್ತೊಮ್ಮೆ ಬಿಎಸ್‌ವೈ ಹಾಗೂ ವಿಜಯೇಂದ್ರ ವಿರುದ್ಧ ಗುಡುಗಿದರು.

ಪ್ರತಿಭಟನೆಯಲ್ಲಿ ಮಾಜಿ ಸಚಿವ ರಮೇಶ ಜಾರಕಿಹೊಳಿ, ಜಿ.ಎಂ. ಸಿದ್ದೇಶ್ವರ, ಅರವಿಂದ ಲಿಂಬಾವಳಿ, ಕುಮಾರ ಬಂಗಾರಪ್ಪ, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ಸೇರಿದಂತೆ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next