Advertisement

ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಣೆ

12:05 PM May 11, 2020 | Naveen |

ಕಲಬುರಗಿ: ನಗರದ ರಡ್ಡಿ ಸಮಾಜ ಅಭಿವೃದ್ಧಿ ಸಂಘದ ವತಿಯಿಂದ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು. ಸಮಾಜದ ಗೌರವಾಧ್ಯಕ್ಷ ಹಾಗೂ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಹೇಮರಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾಲಾರ್ಪಣೆ ಮಾಡಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಸಾರದಲ್ಲಿದ್ದುಕೊಂಡೆ ಕುಟುಂಬದ ಸದಸ್ಯರ ಕಿರುಕುಳ ಸಹಿಸಿ ಅವರ ಅವಗುಣಗಳನ್ನು ಪ್ರೀತಿ, ಸಹನೆಯಿಂದ ತಿದ್ದಿ, ತೀಡಿ ಅವರನ್ನು ಸರಿದಾರಿಗೆ ತರಬಹುದು ಎಂಬುದನ್ನು ಜಗತ್ತಿಗೆ ತೋರಿಸಿದ ಏಕೈಕ ಮಹಿಳೆ, ಸ್ತ್ರೀಕುಲ ರತ್ನ, ಮಹಾಸಾದ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಎಂದು ಹೇಳಿದರು.

ಈಗ ನಾವೆಲ್ಲರೂ ಹೇಮರಡ್ಡಿ ಮಲ್ಲಮ್ಮ ನವರ ಮೇಲೆ ಶ್ರದ್ಧೆ ಮತ್ತು ಭಕ್ತಿ ಇಟ್ಟು ಕುಟುಂಬ ಸಂಸ್ಕೃತಿ ರಕ್ಷಣೆ ಕಡೆಗೆ ಗಮನಕೊಡಬೇಕು. ಗಮನಕೊಟ್ಟು ಅವರ ಆದರ್ಶ ಪಾಲಿಸಬೇಕು. ಸಮಾಜದ ದುರ್ಬಲರ, ದೀನರ ಮತ್ತು ಅಸಹಾಯಕರ ಸಹಾಯಕ್ಕೆ ಧಾವಿಸಿ ಅವರಿಗೆ ನೆರವಾಗಬೇಕು. ಆಗ ಮಾತ್ರ ದೇಶದ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದು ಶಾಸಕರು ಹೇಳಿದರು. ಸಮಾಜದ ರಾಜ್ಯ ಉಪಾಧ್ಯಕ್ಷ ಶಾಂತರಡ್ಡಿ ವಿ., ಜಿಲ್ಲಾಧ್ಯಕ್ಷ ಚನ್ನಾರಡ್ಡಿ ಪಾಟೀಲ, ಜಿಲ್ಲಾ ಉಪಾಧ್ಯಕ್ಷ ಚಂದ್ರಶೇಖರಡ್ಡಿ ಪರಸರಡ್ಡಿ, ಕಾರ್ಯದರ್ಶಿ ಬಿ.ಆರ್‌. ಪಾಟೀಲ, ಮಾಜಿ ಉಪ ಮಹಾಪೌರ ಮಹೇಶರಡ್ಡಿ ಹೊಸೂರಕರ್‌, ಹೇಮರಡ್ಡಿ ಮಲ್ಲಮ್ಮ ಪತ್ತಿನ ಸಹಕಾರ ಸಂಘದ ಸದಸ್ಯರಾದ ಆರ್‌.ಎಸ್‌. ಪಾಟೀಲ ರೊಟ್ನಡಿಗಿ, ಬಸವರಾಜ ಪಾಟೀಲ, ರಮೇಶ ಪಾಟೀಲ ರಬ್ಬನಳ್ಳಿ, ಮಹೇಶ ಪಾಟೀಲ, ಶಾಂತರಡ್ಡಿ ಪೇಠಶಿರೂರ, ಅರುಣರಡ್ಡಿ ಶಿವುಪುರ, ವಿಜಯರಡ್ಡಿ ಬಸವೇಶ್ವರ ಮೆಡಿಕಲ್‌ ಸ್ಟೋರ್‌, ಶಂಕರಗೌಡ ಹಾಲಗಡ್ಲಾ, ಸಂಜೀವರಡ್ಡಿ, ಸುನೀಲರಡ್ಡಿ, ಶ್ರೀಧರರಡ್ಡಿ ಮಾಣಿಕರಡ್ಡಿ ಗೋಗಿ ಇಇದ್ದರು. ನಂತರ ವಿವಿಧ ಬಡಾವಣೆಯ ಸುಮಾರು 800ಕ್ಕೂ ಹೆಚ್ಚು ಬಡ ನಿರಾಶ್ರಿತರಿಗೆ ಅನ್ನ ಸಂತರ್ಪಣೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next