ಕಲಬುರಗಿ : ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಚಂದ್ರಂಪಳ್ಳಿ ಜಲಾಶಯದಲ್ಲಿ ಮೀನು ಹಿಡಿಯಲು ಹೋದ ತಂದೆ ಮಗ ಜಲಾಶಯದಲ್ಲಿ ಸಿಲುಕಿ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ.
ಚಂದ್ರಂಪಳ್ಳಿ ಗ್ರಾಮದ ರಾಜಪ್ಪ ತಿಮ್ಮಯ್ಯ (45) ಮತ್ತು ಆತನ ಮಗ ಮಹೇಶ್ (12) ಮೃತ ದುರ್ದೈವಿಗಳು.
ಇಬ್ಬರು ಜಲಾಶಯದಲ್ಲಿ ಮೀನು ಹಿಡಿಯಲು ಹೋದವರು ಬಾರದೆ ಇರುವುದನ್ನು ಕಂಡ ಇನ್ನೋರ್ವ ಮಗ ಗ್ರಾಮಸ್ಥರಿಗೆ ತಿಳಿಸಿದಾಗ ಕೂಡಲೇ ಜನರು ಜಲಾಶಯದ ಬಳಿ ಬಂದು ನೋಡಿದಾಗ ಯಾವುದೇ ಶವ ಪತ್ತೆಯಾಗಿಲ್ಲ ಆದರೆ ಕಾಲುವೆಗೆ ನೀರು ಬಿಡುವ ಗೇಟನ್ನು ಮೇಲೆತ್ತಿದಾಗ ನೀರಿನ ರಭಸಕ್ಕೆ ಇಬ್ಬರ ಶವಗಳನ್ನು ಹೊರಕ್ಕೆ ಬಂದು ಬಂದಿವೆ.
ಕಾಲುವೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಶವಗಳು ಇನ್ನೂ ಪತ್ತೆಯಾಗಿಲ್ಲ. ಶವಗಳ ಶೋಧ ಕಾರ್ಯ ನಡೆದಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅಗ್ನಿಶಾಮಕದಳ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ ಆದರೆ ನೀರಿನ ರಭಸಕ್ಕೆ ಕೊಚ್ಚಿ ಹೋದ ಶವಗಳ ಇನ್ನೂ ಪತ್ತೆಯಾಗದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ : ಯಾರಿಗೆ ಅಮೃತ ಸಂದೇಶ? ಇಂದು ದಾವಣಗೆರೆಯಲ್ಲಿ ಸಿದ್ದರಾಮಯ್ಯ ಜನ್ಮದಿನ ಸಮಾವೇಶ