Advertisement

ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರ; ಜ. 14-19: ವರ್ಷಾವಧಿ ಉತ್ಸವ

12:07 AM Jan 13, 2024 | Team Udayavani |

ಪುಂಜಾಲಕಟ್ಟೆ: ಬಂಟ್ವಾಳ ತಾಲೂಕು ಉಳಿ ಗ್ರಾಮದ ಕಕ್ಯಬೀಡು ಶ್ರೀ ಪಂಚದುರ್ಗಾಪರಮೇಶ್ವರೀ ದೇವಿ ಕ್ಷೇತ್ರದಲ್ಲಿ ವರ್ಷಾವಧಿ ಜಾತ್ರೆ ಜ. 14ರಿಂದ 19ರ ವರೆಗೆ ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ| ಸತ್ಯಶಂಕರ ಶೆಟ್ಟಿ ತಿಳಿಸಿದ್ದಾರೆ.

Advertisement

ಜ. 14ರಂದು ಬೆಳಗ್ಗೆ ಪ್ರಾರ್ಥನೆ, ತೋರಣ ಮುಹೂರ್ತ, ಸಂಜೆ ಅಂಗಣ ಬಂಡಿ ರಥೋತ್ಸವ ನಡೆಯಲಿದೆ.
ಜ. 15ರಂದು ಬೆಳಗ್ಗೆ 108 ಕಾಯಿ ಗಣಪತಿ ಹೋಮ, ಚೆಂಡು, ಸಂಜೆ ಉತ್ಸವ, ಜ.16ರಂದು ಚಂಡಿಕಾ ಹೋಮ, ಸಂಜೆ ಬಾರªಡ್‌ ಗುತ್ತಿನಿಂದ ಶ್ರೀ ಕಡಂಬಿಲ್ತಾಯ ಮತ್ತು ಕೊಡಮಣಿತ್ತಾಯ ದೈವಗಳ ಭಂಡಾರ ಬರುವುದು, ಕಕ್ಯ ಬೋಂಟ್ರರ ಚಾವಡಿಯಿಂದ ದೈವದ ಭಂಡಾರ ಹಾಗೂ ಮಲೊÂàಡಿತ್ತಾಯ ಮತ್ತು ಕಲ್ಕುಡ ದೈವದ ಭಂಡಾರ ಬಂದು ದೈವಂಕುಳ ನೇಮ, ಜ.17ರಂದು ಸೂಕ್ತ ಹೋಮ, ನಾಗ ದೇವರ ಸನ್ನಿಧಿಯಲ್ಲಿ ನವಕ ಕಲಶ ಪ್ರಧಾನ ಹೋಮ, ಸಾಮೂಹಿಕ ಆಶ್ಲೇಷಾ ಬಲಿ, ತಂಬಿಲ ಸೇವೆ, ಸಂಜೆ ಶ್ರೀ ದೇವರ ಪೇಟೆ ಸವಾರಿ, ಕವಾಟ ಬಂಧನ ನಡೆಯಲಿದೆ.

ಜ. 18ರಂದು ದಿವ್ಯ ದರ್ಶನ, ಸಂಜೆ ಉತ್ಸವಗಳು, ದೈವಗಳ ನೇಮ, ರಾತ್ರಿ 10ರಿಂದ ಶ್ರೀ ದೇವಿಯ ವೈಭವದ ಮಹಾರಥೋತ್ಸವ, ಧ್ವಜಾವರೋಹಣ, ರಾತ್ರಿ 2ರಿಂದ ಮೂಲ ಚಾವಡಿಯಲ್ಲಿ ನೇಮ, ಭಂಡಾರ ಇಳಿಯುವುದು. ಜ. 19ರಂದು ಸಂಪ್ರೋಕ್ಷಣೆ ನಡೆಯಲಿದೆ. ಪ್ರತೀದಿನ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next