Advertisement

ಪೂರ್ವ ಮುಂಗಾರು ಕೈಕೊಟ್ಟರೆ ಜಲ ಸಂಕಷ್ಟ

01:16 PM Apr 07, 2021 | Team Udayavani |

ಮೈಸೂರು: ಕಳೆದ ಮೂರು ವರ್ಷಗಳಿಂದ ಉತ್ತಮ ಮಳೆಯಾದ ಹಿನ್ನೆಲೆ ಜಿಲ್ಲೆಯಲ್ಲಿ ಬೇಸಿಗೆ ಆರಂಭವಾದರೂ, ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ.

Advertisement

ಕಾವೇರಿ ಕೊಳ್ಳದಲ್ಲಿ ಉತ್ತಮ ಮಳೆಯಾಗಿದ್ದರಿಂದಎಲ್ಲ ಜಲಾಶಯ, ಕೆರೆ-ಕಟ್ಟೆಗಳು ತುಂಬಿದ್ದು,ಅಂತರ್ಜಲ ಮಟ್ಟ ಸುಧಾರಿಸಿರುವುದರಿಂದಗ್ರಾಮಾಂತರ ಹಾಗೂ ನಗರ ಪ್ರದೇಶಗಳಲ್ಲಿ ನೀರಿನಹಾಹಾಕಾರ ಉದ್ಭವಿಸಿಲ್ಲ. ಒಂದು ವೇಳೆ ಯುಗಾದಿನಂತರ ಮಳೆ ಆರಂಭವಾಗದಿದ್ದರೆ, ಜಿಲ್ಲೆಯ 98ಹಳ್ಳಿಗಳಲ್ಲಿ ನೀರಿನ ಸಮಸ್ಯೆ ತಲೆದೊರುವ ಸಾಧ್ಯತೆ ಇದ್ದು, ಅದಕ್ಕಾಗಿ ಜಿಲ್ಲಾ ಪಂಚಾಯಿತಿ ಪರ್ಯಾಯ ಮಾರ್ಗಗಳನ್ನು ಕಂಡುಕೊಂಡಿದೆ.

ಕೆಲವು ಪ್ರದೇಶಗಳಲ್ಲಷ್ಟೇ ಸಮಸ್ಯೆ: ಪ್ರತಿ ವರ್ಷದಂತೆಈ ಬಾರಿಯೂ ಮೈಸೂರು ನಗರಕ್ಕೆಹೊಂದಿಕೊಂಡಿರುವ ಗ್ರಾಮಗಳಲ್ಲಿ ನೀರಿನ ಸಮಸ್ಯೆಎದುರಾಗಿದ್ದು, ಸ್ಥಳೀಯ ಗ್ರಾಪಂಗಳ ಮೂಲಕ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಒಂದು ವೇಳೆ ಮುಂಗಾರು ತಡವಾಗಿ ಆರಂಭವಾಗಿ ಕುಡಿಯುವ ನೀರಿಗೆ ಸಮಸ್ಯೆಯಾದರೆ, ಪರ್ಯಾಯ ವ್ಯವಸ್ಥೆ ಮಾಡಲು ಜಿಲ್ಲಾ ಪಂಚಾಯಿತಿಯು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಸಜ್ಜಾಗಿದೆ.

ಬೇಸಿಗೆ ದಿನಗಳಲ್ಲಿ ಅಂತರ್ಜಲ ಕಡಿಮೆಯಾಗಿ ನೀರಿನ ಸಮಸ್ಯೆ ಎದುರಿಸುತ್ತಿದ್ದ ಮೈಸೂರು ತಾಲೂಕಿನಜಯಪುರ ಹೋಬಳಿ, ನಂಜನಗೂಡು ತಾಲೂಕಿನ ಕವಲಂದೆ ಹೋಬಳಿಗಳಲ್ಲಿ ಈಗ ಸಮಸ್ಯೆನಿವಾರಣೆಯಾಗಿದೆ. ಬಹುಗ್ರಾಮ ಕುಡಿಯುವನೀರಿನ ಯೋಜನೆಯಲ್ಲಿ ಹಲವು ಗ್ರಾಮಗಳಿಗೆ ನೀರುಒದಗಿಸಿರುವ ಹಿನ್ನೆಲೆಯಲ್ಲಿ ಟ್ಯಾಂಕರ್‌ಗಳ ಮೂಲಕನೀರು ಕೊಡುವುದು ತಪ್ಪಿದೆ. ಹೀಗಿದ್ದರೂ,ಮುನ್ನೆಚ್ಚರಿಕಾ ಕ್ರಮವಾಗಿ ಮೇ-ಜೂನ್‌ ತಿಂಗಳುಗಳಲ್ಲಿಕುಡಿಯುವ ನೀರು ಸಮಸ್ಯೆ ಉಂಟಾಗಬಹುದಾದಗ್ರಾಮಗಳನ್ನು ಗುರುತಿಸಿ, ಕ್ರಿಯಾಯೋಜನೆ ರೂಪಿಸಿಸಲ್ಲಿಸುವಂತೆ ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗಳಿಗೆ ಸೂಚನೆ ಕೊಡಲಾಗಿದೆ.

ಜಲಾಶಯಗಳಲ್ಲಿ ನೀರಿನ ಪ್ರಮಾಣ ಇಳಿಕೆ: ಕಳೆದ ವರ್ಷ ಕೇರಳದ ವಯನಾಡು, ಕೊಡಗು ಜಿಲ್ಲೆಯಲ್ಲಿಹಿಂಗಾರು ಮತ್ತು ಮುಂಗಾರಿನ ಸಮಯದಲ್ಲಿ ಭಾರೀಮಳೆಯಾಗಿದ್ದರಿಂದ ಪ್ರವಾಹ ಉಂಟಾಗುವ ಜತೆಗೆಕಬಿನಿ ಮತ್ತು ಕೃಷ್ಣರಾಜಸಾಗರ ಜಲಾಶಯಗಳುಭರ್ತಿಯಾಗಿದ್ದವು. ಆದರೆ, ಇದೀಗ ಜಲಾಶಯಗಳಲ್ಲಿನೀರಿನ ಪ್ರಮಾಣ ಸ್ವಲ್ಪ ಇಳಿಕೆಯಾಗಿದೆ. ಕೆಆರ್‌ಎಸ್‌ಜಲಾಶಯದಲ್ಲಿ 30.53 ಟಿಎಂಸಿ ನೀರು ಇದ್ದರೆ, ಕಳೆದವರ್ಷ 32.74 ಟಿಎಂಸಿ ನೀರು ಸಂಗ್ರಹವಿತ್ತು. ಕಬಿನಿಜಲಾಶಯದಲ್ಲಿ 11.28 ಟಿಎಂಸಿ ನೀರು ಇದ್ದರೆ, ಕಳೆದವರ್ಷ 15.05 ಟಿಎಂಸಿ ನೀರು ಸಂಗ್ರಹವಾಗಿತ್ತು. ಹವಾಮಾನ ಇಲಾಖೆ ಪ್ರಕಾರ ಮಾರ್ಚ್‌ 15ರ ನಂತರ ಮಳೆ ಬಿದ್ದರೆ, ನೀರಿನ ಸಮಸ್ಯೆ ಅಷ್ಟಾಗಿ ಕಾಡುವುದಿಲ್ಲ ಎಂದು ಅಧಿಕಾರಿಗಳು ಪತ್ರಿಕೆಗೆ ತಿಳಿಸಿದ್ದಾರೆ.

Advertisement

ನಿಯಂತ್ರಣ ಕೊಠಡಿ ಆರಂಭ: ಮುಂಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾದಲ್ಲಿ ಜನರು ತಕ್ಷಣವೇ ದೂರು ಹೇಳಲು ಹಾಗೂ ಸಮಸ್ಯೆ ಇರುವ ಗ್ರಾಮಗಳಲ್ಲಿನ ನೀರಿನ ಸಮಸ್ಯೆ ಶೀಘ್ರವೇ ಬಗೆಹರಿಸುವ ಸಲುವಾಗಿ ಎಲ್ಲಾ ತಾಲೂಕುಗಳ ತಾಪಂ ಕಚೇರಿಯಲ್ಲಿ ನಿಯಂತ್ರಣ ಕೊಠಡಿ ಆರಂಭಿಸಲಾಗಿದೆ. ಇದು ದಿನದ 24 ಗಂಟೆಯೂ ಕಾರ್ಯನಿರ್ವಹಿಸಲಿದೆ.

ಜಿಲ್ಲೆಯಲ್ಲಿ 98 ಗ್ರಾಮಗಳ ಗುರುತು :

ಜಿಲ್ಲೆಯಲ್ಲಿ ಈವರೆಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಿದ್ದರೂ, ಮುಂಗಾರು ತಡವಾಗಿ ಆರಂಭವಾದರೆ, ಜಿಲ್ಲೆಯ 98 ಗ್ರಾಮಗಳಲ್ಲಿ ಸಮಸ್ಯೆ ತಲೆದೊರುವ ಸಾಧ್ಯತೆ ಇದೆ. ಇದಕ್ಕಾಗಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಯೋಜನೆ ಇಲಾಖೆ ಹುಣಸೂರಿನಲ್ಲಿ 32, ಎಚ್‌.ಡಿ.ಕೋಟೆಯಲ್ಲಿ 6, ಮೈಸೂರು ತಾಲೂಕಿನಲ್ಲಿ11, ನಂಜನಗೂಡಿನಲ್ಲಿ 17, ಪಿರಿಯಾಪಟ್ಟಣದಲ್ಲಿ 9, ಕೆ.ಆರ್‌. ನಗರದಲ್ಲಿ 13, ಸರಗೂರು ತಾಲೂಕಿನಲ್ಲಿ 2, ತಿ.ನರಸೀಪುರದ 8 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆ ಎಂದು ಗುರುತಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿ ಸದ್ಯಕ್ಕೆಕುಡಿಯುವ ನೀರಿನ ಸಮಸ್ಯೆ ಇಲ್ಲ.ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವನೀರಿನ ಸಮಸ್ಯೆ ಸಂಬಂಧ ಗ್ರಾಪಂಗಳಿಂದದೂರು ಬಂದಿಲ್ಲ, ಮನವಿಯೂ ಬಂದಿಲ್ಲ.ಮುಂದಿನ ದಿನಗಳಲ್ಲಿ ಸಮಸ್ಯೆ ಬರುವಂತಹ98 ಗ್ರಾಮಗಳನ್ನು ಗುರುತಿಸಿದ್ದು, ಜೂನ್‌ನಂತರ ಸಮಸ್ಯೆಯಾದರೆ ಪರ್ಯಾಯವ್ಯವಸ್ಥೆ ಮಾಡುವ ಬಗ್ಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು.-ಡಾ| ಕೃಷ್ಣರಾಜು, ಉಪ ಕಾರ್ಯದರ್ಶಿ ಜಿಪಂ

 

– ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next