Advertisement
ಪ್ರಶಸ್ತಿ ವಿತರಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್, ಕ್ರೀಡೆಯಲ್ಲಿ ಪ್ರತಿಭೆಗಳನ್ನು ಪೋ›ತ್ಸಾಹಿಸಲು ಕೊಡಿಯಾಲ್ ಸೋರ್ಟ್ಸ್ ಅಸೋಸಿಯೇಶನ್ ಎರಡು ವರ್ಷಗಳಿಂದ ಕ್ರಿಕೆಟ್ ಮತ್ತು ಕಬಡ್ಡಿ ಪಂದ್ಯಾಟಗಳನ್ನು ಆಯೋಜಿಸುತ್ತಿದೆ. ಜತೆಗೆ ಕ್ರೀಡೆಯಲ್ಲಿ ಉನ್ನತ ಸ್ಥಾನಕ್ಕೇರಲು ಶ್ರಮಿಸುವ ಜಿಎಸ್‌ಬಿ ಕ್ರೀಡಾಳುಗಳಿಗೆ ಸಹಾಯಹಸ್ತ ಕೂಡ ಚಾಚುವ ಕೆಲಸ ಮಾಡುತ್ತಿದೆ ಎಂದರು. ಬೆಸ್ಟ್ ರೈಡರ್ ಪ್ರಶಸ್ತಿಯನ್ನು ಡಿವಿಕೆ ತಂಡದ ಶ್ರೀಕಾಂತ್ ಪ್ರಭು, ಬೆಸ್ಟ್ ಕ್ಯಾಚರ್ ಆಗಿ ನಿತಿನ್ ಪುತ್ತೂರು, ಫುಜ್ಲಾನ್ ಪ್ಲೇಯರ್ ಆಫ್ ದಿ ಮ್ಯಾಚ್ ಪರ್ಲ್ ಸಿಟಿ ಪುತ್ತೂರು ತಂಡದ ಸುಬ್ರಾಯ್ ಕಾಮತ್, ಮಾಡರ್ನ್ ಎಮರ್ಜಿಂಗ್ ಪ್ಲೇಯರ್ ಆಗಿ ನಮೋ ವಾರಿಯರ್ ಮುಂಬೈ ತಂಡದ ರಕ್ಷಿತ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು.ಸಮಾರೋಪ ಸಮಾರಂಭದಲ್ಲಿ ಕಾಮತ್ ಕೇಟರರ್ಸ್ ಮಾಲಕರಾದ ಸುಧಾಕರ ಕಾಮತ್, ಶ್ರೀ ವೆಂಕಟರಮಣ ದೇವಸ್ಥಾನದ ಟ್ರಸ್ಟಿ ರಾಮಚಂದ್ರ ಕಾಮತ್, ಲೆಕ್ಕ ಪರಿಶೋಧಕ ಜಗನ್ನಾಥ ಕಾಮತ್, ಉದ್ಯಮಿಗಳಾದ ಸುರೇಶ್ ಕಾಮತ್, ಅನಂತ ಕಾಮತ್, ನರೇಂದ್ರ ನಾಯಕ್, ರಾಜೇಶ್ ಕಿಣಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಮಂಜುನಾಥ ಪೈ, ರಮೇಶ್ ಮಲ್ಯ, ಪೂಜಾ ಪೈ, ಕಬಡ್ಡಿ ಎಸೋಸಿಯೇಶನ್ ಅಮರನಾಥ ರೈ, ವಕೀಲ ಸತೀಶ್ ಭಟ…, ಅರವಿಂದ ಪ್ರಭು, ಹನುಮಂತ ಕಾಮತ್, ನರೇಶ್ ಶೆಣೈ, ಶಿವಾನಂದ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು, ಉಪಸ್ಥಿತರಿದ್ದರು. Advertisement
ಕಬಡ್ಡಿ: ಪರ್ಲ್ ಸಿಟಿ ಸ್ಮ್ಯಾಶರ್ಸ್ ಚಾಂಪಿಯನ್
11:34 AM Jul 23, 2018 | |
Advertisement
Udayavani is now on Telegram. Click here to join our channel and stay updated with the latest news.