ಶಿವಮೊಗ್ಗ: ಯಾವುದೇ ಸಮಸ್ಯೆಗಳಿದ್ದರೆ ನಾಲ್ಕು ಗೋಡೆಯ ಮಧ್ಯೆ ಕುಳಿತು ಮಾತನಾಡಿ ಬಗೆಹರಿಸಿಕೊಳ್ಳಲಿ. ಅದು ಬಿಟ್ಟು ದೆಹಲಿಗೆ ಹೋಗುವುದು, ಸಿಎಂ ವಿರುದ್ಧ ದೂರು ಹೇಳುವುದು ಸರಿಯಲ್ಲ, ಸಿ.ಪಿ.ಯೋಗೀಶ್ ಗೆ ಸರ್ಕಾರದಲ್ಲಿ ಇರಲು ಮನಸ್ಸಿಲ್ಲದಿದ್ದರೆ ಸಂಪುಟದಿಂದ ಹೊರ ಹೋಗಬಹುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಗುಡುಗಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಮೊದಲು ಪಕ್ಷದ ವ್ಯವಸ್ಥೆಯನ್ನು ತಿಳಿದುಕೊಳ್ಳಬೇಕು. ಪಕ್ಷ ಅವರಿಗೆ ಅಗತ್ಯ ಸ್ಥಾನಮಾನ ನೀಡಿದೆ. ಯೋಗೀಶ್ವರ್ ನನ್ನ ಒಳ್ಳೆಯ ಸ್ನೇಹಿತ. ಆದರೂ ಈ ರೀತಿ ನಡೆದುಕೊಳ್ಳುವುದು ಸರಿಯಲ್ಲ ಎಂದರು.
ಇದನ್ನೂ ಓದಿ:ತುಮಕೂರಿನಲ್ಲಿ ಸಿಎಂ ಕೋವಿಡ್ ಪರಿಶೀಲನಾ ಸಭೆ: ಮಾಧ್ಯದವರಿಗಿಲ್ಲ ಪ್ರವೇಶ
ಈ ಬೆಳವಣಿಗೆಯಿಂದ ನಮಗೆ ಮುಜುಗರವಾಗುತ್ತಿದೆ. ಹೋದ ಕಡೆಯಲ್ಲೆಲ್ಲಾ ಮಾಧ್ಯಮವರು ಕೇಳುತ್ತಾರೆ. ಇದು ಮೂರು ಪಕ್ಷದ ಸರ್ಕಾರ ಎಂಬ ಯೋಗೀಶ್ ಹೇಳಿಕೆ ಸರಿಯಲ್ಲ. ಬಿಜೆಪಿಯಲ್ಲಿ ಅಶಿಸ್ತಿನ ಬೆಳವಣಿಗೆಯನ್ನು ಸಹಿಸುವುದಿಲ್ಲ ಎಂದರು.
ಯಡಿಯೂರಪ್ಪ ಅವರನ್ನು ಬದಲಾಯಿಸುವ ಪ್ರಶ್ನೆಯೇ ಇಲ್ಲ. ವರಿಷ್ಠರು ಇದನ್ನು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ಸಿಎಂ ಬದಲಾವಣೆಗೆ ತಮ್ಮ ವಿರೋಧದ ಬಗ್ಗೆ ಈಶ್ವರಪ್ಪ ಮತ್ತೊಮ್ಮೆ ಸ್ಪಷ್ಟ ಪಡಿಸಿದರು.