Advertisement

ದಿನಸಿ ಫುಡ್ ಕಿಟ್ ವಿತರಿಸಿದ ಅಬಕಾರಿ ಸಚಿವ ಕೆ ಗೋಪಾಲಯ್ಯ

11:39 AM May 24, 2021 | Team Udayavani |

ಬೆಂಗಳೂರು: ಮಹಾಲಕ್ಷ್ಮೀ ಲೇಔಟ್ ವಿಧಾನಸಭಾ ಕ್ಷೇತ್ರದ ಮಾರಪ್ಪನಪಾಳ್ಯದ ಅಶೋಕ ಪುರದಲ್ಲಿ ಇಂದು ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರು ಆಹಾರ ಪದಾರ್ಥಗಳ ದಿನಸಿ ಫುಡ್ ಕಿಟ್ ನ್ನು ವಿತರಿಸಿದರು.

Advertisement

ನಂತರ ಮಾತನಾಡಿದ ಅವರು, ಕೋವಿಡ್ ಎರಡನೇ ಅಲೆ ಪ್ರಾರಂಭವಾಗಿದ್ದು ಎಲ್ಲರೂ ನಿಮ್ಮ ಕುಟುಂಬ ಹಾಗೂ ಸುತ್ತಮುತ್ತಲಿನ ಬಡಾವಣೆಯ ಜನರಿಗೆ ಕರೆತಂದು ಲಸಿಕೆ ಹಾಕಿಸಿ ಹಾಗೂ ಸರ್ಕಾರದ ಮಾರ್ಗ ಸೂಚನೆಗಳಾದ ಸಾಮಾಜಿಕ ಅಂತರ ಕಾಪಾಡಿಕೊಂಡು ಮಾಸ್ಕ್ ಧರಿಸಿ ಮನೆಯಲ್ಲಿ ಇರಿ, ಸುಖಾ ಸುಮ್ಮನೆ ಹೊರಗಡೆ ಬರಬೇಡಿ ಎಂದರು.

ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ರಾಜ್ಯದಲ್ಲಿ ಬಿ ಎಸ್ ಯಡಿಯೂರಪ್ಪ ಅವರ ಸರ್ಕಾರ ಎಲ್ಲರಿಗೂ ಉಚಿತ ಪಡಿತರ ಅಕ್ಕಿ ಗೋಧಿ ನೀಡುತ್ತಿದ್ದು, ಇದರ ಜೊತೆಗೆ ನಾವು ಇಂದು ಕೆಲವು ದಿನಗಳಿಗೆ ಆಗುವಷ್ಟು ಆಹಾರ ಪದಾರ್ಥಗಳ ದಿನಸಿ ಕಿಟ್ ವಿತರಣೆ ಮಾಡುತ್ತಿದ್ದೇವೆ. ಸರ್ಕಾರ ಈಗಾಗಲೇ ಕೋವಿಡ್ ಸೋಂಕು ನಿಯಂತ್ರಣಕ್ಕೆ ಲಾಕ್ ಡೌನ್ ಘೋಷಣೆ ಮಾಡಿದ್ದು, ಎಲ್ಲರೂ ಸರ್ಕಾರದ ಜೊತೆ ಕೈಜೋಡಿಸಿ ಸೋಂಕು ತಡೆಗೆ ಸಹಕರಿಸಿಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷರಾದ ನರೇಂದ್ರ ಬಾಬು, ಮಂಡಲ ಅಧ್ಯಕ್ಷ ರಾಘವೇಂದ್ರ ಶೆಟ್ಟಿ, ಮಾಜಿ ಉಪ ಮೇಯರ್ ಹರೀಶ್ ಮಾಜಿ ಬಿಬಿಎಂಪಿ ಕಾರ್ಪೊರೇಟರ್  ಎಂ ಮಹದೇವ್, ಮುಖಂಡರಾದ ಡಾ, ನಾಗೇಂದ್ರ, ಸಾಯಿ ರೆಡ್ಡಿ, ಪುಟ್ಟಸ್ವಾಮಿ  ಬಿಬಿಎಂಪಿ ಹಿರಿಯ ಅಧಿಕಾರಿಗಳು ಸೇರಿದಂತೆ ಸ್ಥಳೀಯ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು

Advertisement

Udayavani is now on Telegram. Click here to join our channel and stay updated with the latest news.

Next