Advertisement

ಕಾನೂನು ನೈತಿಕತೆಯನ್ನು ಅವಲಂಬಿಸಿದಾಗ ನ್ಯಾಯ ಲಭ್ಯ : ನ್ಯಾ.ಅಬ್ದುಲ್‌ ನಝೀರ್‌

12:24 AM Aug 11, 2024 | Team Udayavani |

ಮೂಡುಬಿದಿರೆ: ನೈತಿಕತೆ ಎಂಬುದು ಕಾನೂನಿಗಿಂತ ಮಿಗಿಲಾದುದು. ಕಾನೂನು ನೈತಿಕತೆಯನ್ನು ಅವಲಂಬಿಸಿದ್ದಾಗ ಮಾತ್ರ ನ್ಯಾಯಾಕಾಂಕ್ಷಿಗೆ ನಿಜವಾದ ನ್ಯಾಯ ಲಭಿಸಲು ಸಾಧ್ಯ ಎಂದು ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಮೂರ್ತಿ, ಆಂಧ್ರ ಪ್ರದೇಶದ ರಾಜ್ಯಪಾಲ ಎಸ್‌.ಅಬ್ದುಲ್‌ ನಝೀರ್‌ ಹೇಳಿದರು.

Advertisement

ಶಿರ್ತಾಡಿಯಲ್ಲಿ ಭುವನಜ್ಯೋತಿ ಟ್ರಸ್ಟ್‌ನ ಕಾನೂನು ಕಾಲೇಜಿನ ಉದ್ಘಾಟನ ಸಮಾರಂಭದಲ್ಲಿ ಮಾತನಾಡಿದ ಅವರು, ಕೋರ್ಟ್‌ ಕೇಸುಗಳೆಂದರೆ ಕ್ಯಾನ್ಸರ್‌ ಇದ್ದಂತೆ. ದೇಶದ ನ್ಯಾಯಾಲಯಗಳಲ್ಲಿ ಐದು ಕೋಟಿ ಪ್ರಕರಣಗಳು ಕೊಳೆಯುತ್ತಿವೆ ಎಂದರೆ ಕನಿಷ್ಠ 20 -25 ಕೋಟಿ ಮಂದಿ ಈ ಕ್ಯಾನ್ಸರ್‌ನಿಂದ ನರಳುತ್ತಿದ್ದಾರೆ ಎಂದೇ ಪರಿಭಾವಿಸಬೇಕಾಗಿದೆ. ಕಾನೂನು ಪ್ರಕ್ರಿಯೆಯ ಜಟಿಲ ಅಂಶಗಳೇ ಈ ವಿಳಂಬಕ್ಕೆ ಕಾರಣ. ಇದನ್ನು ಹೋಗಲಾಡಿಸಲು ಕಾನೂನು ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ಆಗಬೇಕಾಗಿದೆ ಎಂದರು.

ಕಾನೂನು ಪರಿಪಾಲನೆ ಬರೇ ಕೋರ್ಟಿನ ವಿಷಯವಾಗುವುದಲ್ಲ, ನಮ್ಮ ನಮ್ಮ ಮನೆಯಿಂದಲೇ ಆರಂಭವಾಗಬೇಕು. ವಕೀಲರು ಉನ್ನತ ಮಟ್ಟದ ನ್ಯಾಯಸಮ್ಮತ ಸಂಸ್ಕೃತಿಯನ್ನು ರೂಢಿಸಿಕೊಂಡಿರಬೇಕಾಗಿದೆ. ವೃತ್ತಿ ರಹಸ್ಯದೊಂದಿಗೆ ತನ್ನ ಗ್ರಾಹಕರಿಗೆ ವಿಧೇಯನಾಗಿರುವುದೂ ಬಹಳ ಮುಖ್ಯ. ಒಂದುಕಾಲದಲ್ಲಿ ಯಾವುದಕ್ಕೂ ಸಲ್ಲದವನು ಕಾನೂನು ಕಾಲೇಜು ಸೇರುತ್ತಿದ್ದರು. ಅಲ್ಲೂ ಸಲ್ಲದವನು ಎಲ್ಲೂ ಸಲ್ಲನು ಎಂಬ ಮಾತಿತ್ತು. ಈಗ ಇದೊಂದು ಉದಾತ್ತ ಶಿಕ್ಷಣ ಶಾಖೆ ಎಂದು ಪರಿಗಣಿತವಾಗಿದೆ ಎಂದರು.

ಹೈಕೋರ್ಟ್‌ ನ್ಯಾಯಾಧೀಶ ಜ| ಕೃಷ್ಣ ಎಸ್‌.ದೀಕ್ಷಿತ್‌ ಮಾತನಾಡಿ, “ಭಾರತ ಎಂದರೆ ಜ್ಞಾನ ಅರಸುವವರ ನಾಡು. ಇಲ್ಲಿ ತಕ್ಷಶಿಲಾ, ನಳಂದಾ ಮೊದಲಾದ 24 ವಿಶ್ವವಿಖ್ಯಾತ ವಿವಿಗಳಿದ್ದವು. ಅನ್ಯದೇಶಗಳಿಂದಲೂ ಇಲ್ಲಿಗೆ ಜನ ಜ್ಞಾನಾರ್ಜನೆಗಾಗಿ ಬರುತ್ತಿದ್ದರು. ಪ್ರವಾದಿ ಮೊಹಮ್ಮದರು ತನ್ನ ನಾಡಿನಿಂದ ಮೊದಲು ಬಂದದ್ದೇ ಭಾರತಕ್ಕೆ ಎಂಬುದು ಈ ನಾಡು ಜ್ಞಾನಕಾಶಿ ಎಂಬುದಕ್ಕೆ ಸಾಕ್ಷಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next