Advertisement

ಜೂ. ವಿಶ್ವಕಪ್‌ ಶೂಟಿಂಗ್‌: ಅನೀಶ್‌ ಭಾನ್ವಾಲಗೆ ಚಿನ್ನ

07:30 AM Mar 27, 2018 | Team Udayavani |

ಹೊಸದಿಲ್ಲಿ: ಉದಯೋನ್ಮುಖ ಆಟಗಾರ 15ರ ಹರೆಯದ ಅನೀಶ್‌ ಭಾನ್ವಾಲ ಅವರು ಸಿಡ್ನಿಯಲ್ಲಿ ನಡೆಯುತ್ತಿರುವ ಐಎಸ್‌ಎಸ್‌ಎಫ್ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ ಸ್ಪರ್ಧೆಯ ಪುರುಷರ 25 ಮೀ. ರ್ಯಾಪಿಡ್‌ ಫೈರ್‌ ಪಿಸ್ತೂಲ್‌ ವಿಭಾಗದಲ್ಲಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದು ಈ ಕೂಟದಲ್ಲಿ ಭಾರತಕ್ಕೆ ಲಭಿಸಿದ ಮೂರನೇ ಚಿನ್ನದ ಪದಕವಾಗಿದೆ.

Advertisement

ಅನೀಶ್‌ ಆ ಬಳಿಕ ಅನ್‌ಹಾದ್‌ ಜವಾಂಡ ಮತ್ತು ಆದರ್ಶ್‌ ಸಿಂಗ್‌ ಜತೆಗೂಡಿ ತಂಡ ಸ್ಪರ್ಧೆಯಲ್ಲಿ ಬೆಳ್ಳಿಯ ಪದಕ ಗೆದ್ದರು.  ಈ ವಿಭಾಗದ ಚಿನ್ನವನ್ನು ಚೀನ ಗೆದ್ದರೆ ಭಾರತದ ಇನ್ನೊಂದು ತಂಡ ಕಂಚು ಜಯಿಸಿತು.

Advertisement

Udayavani is now on Telegram. Click here to join our channel and stay updated with the latest news.

Next