Advertisement

ವಲಯ ಮಟ್ಟದ ಕ್ರೀಡಾಕೂಟದಲ್ಲಿ 600 ಮಕ್ಕಳು ಭಾಗಿ

04:49 PM Aug 04, 2018 | |

ಹಗರಿಬೊಮ್ಮನಹಳ್ಳಿ: ಪಟ್ಟಣದ ಪಾಪುಸ್ವಾಮಿ ಪ್ರೌಢಶಾಲೆಯ ಮೈದಾನದಲ್ಲಿ ಮಕ್ಕಳ ಕ್ರೀಡಾಕೂಟದಲ್ಲಿ ಚಪ್ಪಾಳೆ, ಕೇಕೆಯೊಂದಿಗೆ ಆಟಗಾರರನ್ನು ಹುರಿದುಂಬಿಸುತ್ತಿರುವುದು ಕಣ್ಮನ ಸೆಳೆಯುವಂತಿತ್ತು.

Advertisement

ಪಟ್ಟಣದ ಪಾಪುಸ್ವಾಮಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಕಬಡ್ಡಿ, ಖೋಖೋ
ಪಂದ್ಯಗಳು ರೋಚಕದಿಂದ ಕೂಡಿದ್ದವು. ಆದರ್ಶ ಶಾಲೆ ಹಾಗೂ ಕ್ರಿಸ್ತಶರಣ ವಿದ್ಯಾಪೀಠ ನಡುವೆ ನಡೆದ ಬಾಲಕರ ಕಬಡ್ಡಿ ಫೈನಲ್‌ ಪಂದ್ಯ ಪರಸ್ಪರ ಟೈ ಮೂಲಕ ಅಂತ್ಯಗೊಂಡಿತ್ತು. ಆಗ ತೀರ್ಪುಗಾರರು ಗೋಲ್ಡನ್‌ ರೈಡ್‌ ಮೂಲಕ ಪುನಃ ಪಂದ್ಯ ಪ್ರಾರಂಭಿಸಿದರು. ಇದರಲ್ಲಿ ಆದರ್ಶ ಶಾಲೆಯ ಮಕ್ಕಳು ಗೋಲ್ಡನ್‌ ರೈಡ್‌ ನಲ್ಲಿ 3 ಅಂಕಗಳನ್ನು ಹೆಚ್ಚು ಗಳಿಸುವ ಮೂಲಕ ವಿಜೇತರಾದರು. ಇದರೊಂದಿಗೆ ಆದರ್ಶ ಶಾಲೆ ತಾಲೂಕು ಮಟ್ಟಕ್ಕೆ ಆಯ್ಕೆಯಾಯಿತು. 

ಬಾಲಕಿಯರ ಕಬಡ್ಡಿಯಲ್ಲಿ ವಲ್ಲಬಾಪುರ ಮೊರಾರ್ಜಿ, ಬಾಲಕರ ಖೋಖೋ ಪಂದ್ಯದಲ್ಲಿ ಕ್ರಿಸ್ತಶರಣ ಶಾಲೆ ವಿಜೇತರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾದರು. ವಲ್ಲಬಾಪುರ, ಉಪನಾಯಕನಹಳ್ಳಿ, ಜ್ಞಾನಗಂಗ ಪ್ರೌಢಶಾಲೆ ಸೇರಿದಂತೆ ಒಟ್ಟು 10 ಶಾಲೆಯ 600 ವಿದ್ಯಾರ್ಥಿಗಳು ಕ್ರೀಡಾಕೂಟದಲ್ಲಿ ಪಾಲ್ಗೊಂಡಿದ್ದರು. ಪಾಪುಸ್ವಾಮಿ ಪ್ರೌಢಶಾಲೆಯ  ಮುಖ್ಯ ಗುರು ಎಂ.ನಾಗಪ್ಪ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿ, ಕ್ರೀಡೆ ಮಕ್ಕಳ ದೈಹಿಕ, ಮಾನಸಿಕ ಬೆಳವಣಿಗೆಗೆ ಪೂರಕ. ದೈಹಿಕ ಶಿಕ್ಷಕರ ತೀರ್ಪುಗಳು ಮುಗª ಮನಸ್ಸುಗಳ ಮೇಲೆ ಪರಿಣಾಮ ಬೀರದಂತಿರಲಿ. ಮಕ್ಕಳಿಗೆ ಉತ್ತೇಜನ ನೀಡುವಂತಹ ಯುವಕರು ಎಲ್ಲೆ ಮೀರದೆ ಪ್ರೋತ್ಸಾಹಿಸಬೇಕು ಎಂದರು. 

ದೈಹಿಕ ಶಿಕ್ಷಕರಾದ ಮಲ್ಲಿಕಾರ್ಜುನ, ಉಜ್ಜನಗೌಡ, ವೀರೇಶಸ್ವಾಮಿ, ಕೊಟ್ರಗೌಡ, ಸಿ.ಕೊಟ್ರೇಶ, ಈಶ್ವರಗೌಡ ಸತೀಶ, ರಾಜು ಸೋಗಿ ಇತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next