Advertisement

ಜೋಗೇಶ್ವರಿ ಶ್ರೀ ಜಗದಂಬಾ ಕಾಳಭೈರವ ದೇವಸ್ಥಾನ 46ನೇ ವಾರ್ಷಿಕ ಭಜನೆ

11:27 AM Jan 01, 2019 | |

ಮುಂಬಯಿ: ಜೋಗೇ ಶ್ವರಿ ಪೂರ್ವ, ಗುಂಫಾ ಟೆಕಿxಯ ಕೃಷ್ಣ ನಗರ ನಾರಾಯಣ ಗಿರಿ ಆಶ್ರಮದ ಸಮೀಪದಲ್ಲಿರುವ ಶ್ರೀ ಜಗದಂಬಾ ಕಾಳಭೈರವ ದೇವಸ್ಥಾನದ 46ನೇ ವಾರ್ಷಿಕ ಏಕಾಹ ಭಜನ  ಕಾರ್ಯಕ್ರಮವು ಡಿ. 15ರಂದು ಪ್ರಾರಂಭಗೊಂಡು ಡಿ. 16ರ ಮುಂಜಾನೆ ಯವರೆಗೆ ನಡೆಯಿತು.

Advertisement

ಡಿ. 15ರಂದು ಮುಂಜಾನೆ 6.30ಕ್ಕೆ ಗಣಹೋಮ ನಡೆಯಿತು. ಅನಂತರ ದೇವಸ್ಥಾನದ ಪ್ರಧಾನ ಅರ್ಚಕ ಪಾದೂರು ನರಹರಿ ತಂತ್ರಿ ಅವರು ದೀಪ ಪ್ರಜ್ವಲಿಸಿ ಏಕಾಹ ಭಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಸಂಜೀವ ಪಿ. ಪೂಜಾರಿ, ಎಚ್‌. ಬಾಬು ಪೂಜಾರಿ, ಮುದ್ದು ಸುವರ್ಣ, ಶೇಖರ ಕರ್ಕೇರ, ಡಿ. ಕೆ. ಕುಂದರ್‌, ಕಾರ್ಯಾಧ್ಯಕ್ಷ  ಪೊಸ್ರಾಲು ಸದಾಶಿವ ಕೋಟ್ಯಾನ್‌, ಮಹಿಳಾ ಮಂಡಳಿಯ ಅಧ್ಯಕ್ಷೆ ಸುಶೀಲಾ ಎಸ್‌. ಪೂಜಾರಿ, ಭುವಾಜಿ ರಾಘವೇಂದ್ರ ಶಾನುಭಾಗ್‌, ಆಡಳಿತ ಮಂಡಳಿಯ ಸದಸ್ಯರು, ಮಹಿಳಾ ಮಂಡಳಿಯ ಸದಸ್ಯೆಯರು ಉಪಸ್ಥಿತರಿದ್ದರು.

ಉದ್ಘಾಟಿಸಿ ಮಾತನಾಡಿದ ಪಾದೂರು ನರಸಿಂಹ ತಂತ್ರಿಯವರು, ವಿಟuಲ ನಾಮ ಸ್ಮರಣೆಯೇ ಭಜನೆ, ಕೀರ್ತನೆ ಎಂಬಂತಹ ದಾಸ ಶ್ರೇಷ್ಠರು ಗಳಿಂದ ಮನುಕುಲಕ್ಕೆ ಬಂದ ವರಪ್ರಸಾದವಾಗಿದೆ. ಇದನ್ನು ಕಲಿ ಯುಗದಲ್ಲಿ ಭಕ್ತಿಯಿಂದ ಜೀವನದಲ್ಲಿ ಅಳವಡಿಸಿಕೊಂಡು ಭಗವಂತನಿಗೆ ಅರ್ಪಣೆ ಮಾಡುವುದರಿಂದ ಮನುಷ್ಯ ಜನ್ಮ ಪಾವನವಾಗುತ್ತದೆ ಎಂದು ನುಡಿದರು. ಏಕಾಹ ಭಜನ ಕಾರ್ಯಕ್ರಮದಲ್ಲಿ ಮುಂಬಯಿ, ಉಪನಗರಗಳ 24 ಭಜನ ಮಂಡಳಿಗಳು ಭಾಗವಹಿಸಿದ್ದವು. 

ಬಾಲಾಜಿ ಭಜನ ಮಂಡಳಿ ಮೀರಾರೋಡ್‌, ವಿಟuಲ ಭಜನ ಮಂಡಳಿ ಬ್ರಾಹ್ಮಣ ಸಂಘ ಮೀರಾರೋಡ್‌, ಗುರು ನಾರಾಯಣ ಭಜನ ಮಂಡಳಿ ಕುಂದಾಪುರ, ಚಾರ್‌ಕೋಪ್‌ ಕನ್ನಡಿಗರ ಬಳಗ ಭಜನ ಮಂಡಳಿ ಕಾಂದಿವಲಿ, ಶ್ರೀ ಚಾಮುಂಡೇಶ್ವರಿ ಭಜನ ಮಂಡಳಿ ಸಾಕಿನಾಕಾ, ಶ್ರೀ ನಿತ್ಯಾನಂದ ಭಜನ ಮಂಡಳಿ ಸಾಕಿನಾಕಾ, ಶ್ರೀ ಹನುಮಾನ್‌ ಭಜನ ಮಂಡಳಿ ಅಶೋಕವನ ಬೊರಿವಲಿ, ದತ್ತ ಜಗದಂಬಾ ಭಜನ ಮಂಡಳಿ ಅಂಧೇರಿ, ಮಾರಿಯಮ್ಮಾ ಭಜನ ಮಂಡಳಿ ಮೇಘವಾಡಿ ಜೋಗೇಶ್ವರಿ, ಶ್ರೀ ರಾಮಕೃಷ್ಣ ಭಜನ ಮಂಡಳಿ ಕೊಂಡಿವಿಟಾ ಅಂಧೇರಿ, ಶ್ರೀ ಉಮಾಮಹೇಶ್ವರಿ ಭಜನ ಮಂಡಳಿ ಜೆರಿಮರಿ, ಶ್ರೀ ಕೃಷ್ಣ ಭಜನ  ಮಂಡಳಿ ವಿರಾರ್‌, ಶ್ರೀ ಮಹಾಕಾಳಿ ಭಜನ ಮಂಡಳಿ ಜೋಗೇಶ್ವರಿ, ಶ್ರೀ ಸೀತಾರಾಮ ಭಜನ ಮಂಡಳಿ ಕುರ್ಲಾ ಕಮಾನಿ, ಶ್ರೀ ಮಹಾಕಾಳಿ ಭಜನ ಮಂಡಳಿ ಸಾಂತಾಕ್ರೂಜ್‌, ಶ್ರೀ ದುರ್ಗಾಪರಮೇಶ್ವರಿ ಆಧಾರ್‌ ಉಡುಪಿ, ಶ್ರೀ ಶನೀಶ್ವರ ಭಜನ  ಮಂಡಳಿ ಮೇಘವಾಡಿ ಜೋಗೇಶ್ವರಿ, ಶ್ರೀ ಅಯ್ಯಪ್ಪ ಭಕ್ತವೃಂದ ಭಜನ ಮಂಡಳಿ ಫೋರ್ಟ್‌, ಶ್ರೀ ದತ್ತಾತ್ರೇಯ ದುರ್ಗಾಂಬಿಕಾ ಭಜನ ಮಂಡಳಿ ಅಸಲ್ಪಾ, ಶ್ರೀ ಶನೀಶ್ವರ ಸೇವಾ ಸಮಿತಿ ಭಜನ ಮಂಡಳಿ ನೆರೂಲ್‌ ಇನ್ನಿತರ ಭಜನ ಮಂಡಳಿಗಳು ಭಾಗವಹಿಸಿದ್ದವು.

ಮುಂಬಯಿ ಮಹಾನಗರ ಪಾಲಿಕೆಯ ಮೇಯರ್‌ ವಿಶ್ವನಾಥ್‌ ಮಹಾಡೇಶ್ವರ್‌, ಸ್ಥಳೀಯ ನಗರ ಸೇವಕರಾದ ಪ್ರವೀಣ್‌ ಶಿಂಧೆ, ಉಜ್ವಲ್‌ ಮೋದಕ್‌, ದೀಪಕ್‌ ಮೂಟ್ಕರ್‌ ಅವರು ವಿಶೇಷ ಅತಿಥಿಗಳಾಗಿ ಆಗಮಿಸಿ ಪ್ರಸಾದ ಸ್ವೀಕರಿಸಿದರು. ಜಯ ಪೂಜಾರಿ ಮತ್ತು ದಿನೇಶ್‌ ಕೋಟ್ಯಾನ್‌ ಅವರು ಸೇರಿದಂತೆ ನಗರದ ವಿವಿಧ ಕ್ಷೇತ್ರಗಳ ಗಣ್ಯರು ಆಗಮಿಸಿ ಶುಭಹಾರೈಸಿದರು.

Advertisement

ಆಡಳಿತ ಮಂಡಳಿಯ ಪರ ವಾಗಿ ಪೊಸ್ರಾಲು ಸದಾಶಿವ ಕೋಟ್ಯಾನ್‌, ಅಧ್ಯಕ್ಷ ಸಂಜೀವ ಪೂಜಾರಿ, ಮಹಿಳಾ ವಿಭಾಗದ ಅಧ್ಯಕ್ಷೆ ಸುಶೀಲಾ ಎಸ್‌. ಪೂಜಾರಿ, ಮಂದಿರದ ಭುವಾಜಿ ರಾಘವೇಂದ್ರ ಶಾನುಭಾಗ್‌ ಹಾಗೂ ಕಾರ್ಯಕಾರಿ ಸಮಿತಿಯ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. 
ಕೊನೆಯಲ್ಲಿ ಮಹಾಮಂಗಳಾರತಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ನೂರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next