Advertisement
ಜವಳಿ ಪಾರ್ಕ್ ನಿರ್ಮಾಣಕ್ಕೆ ಸೂಕ್ತವಾಗಿರುವ ಸರಕಾರಿ ಜಾಗ ಎಲ್ಲೆಲ್ಲಿದೆ ಎಂಬ ಮಾಹಿತಿ ಪಡೆದ ಡಿಸಿ ಹಾಗೂ ಶಾಸಕರು, ಸರಕಾರಿ ಜಾಗದ ಸರ್ವೆ ಕಾರ್ಯ ನಡೆಸಿ, ಡೀಮ್ಡ್ ಅರಣ್ಯವನ್ನು ಬೇರ್ಪಡಿಸಿ ವರದಿ ನೀಡುವಂತೆ ತಿಳಿಸಿದರು. ಮಿಯ್ನಾರು, ಸಾಣೂರು, ಬೆಳ್ಮಣ್, ಬೈಲೂರು ಪ್ರದೇಶದಲ್ಲಿ 20 ಎಕ್ರೆ ಸರಕಾರಿ ಜಾಗ ಲಭ್ಯತೆ, ಕಾರ್ಮಿಕರು ದೊರೆಯಬಹು ದಾದ ಸ್ಥಳ ಗುರುಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚಿಸಲಾಯಿತು.
ಯುವಸಮುದಾಯಕ್ಕೆ ಉದ್ಯೋಗ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕಾರ್ಕಳದಲ್ಲಿ ಜವಳಿ ಪಾರ್ಕ್ ನಿರ್ಮಿಸಲು ಅನುದಾನ ಬಿಡುಗಡೆಗೊಳಿಸುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿಕೊಂಡಿದ್ದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಯವರು ಬಜೆಟ್‌ನಲ್ಲಿ ಜವುಳಿ ಪಾರ್ಕ್ ನಿರ್ಮಾಣದ ಘೋಷಣೆ ಮಾಡಿದ್ದು, ಯೋಜನೆ ಅನುಷ್ಠಾನದ ಕುರಿತು ಕಂದಾಯ, ಕೈಗಾರಿಕಾ, ಅರಣ್ಯ ಇಲಾಖಾಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇವೆ.
– ವಿ. ಸುನಿಲ್ ಕುಮಾರ್, ಶಾಸಕರು, ಕಾರ್ಕಳ