Advertisement

ಜೈಶ್ ಮುಖ್ಯಸ್ಥ ಮಸೂದ್ ನಮ್ಮಲ್ಲೇ ಇದ್ದಾನೆ: ಪಾಕ್

04:00 AM Mar 01, 2019 | Karthik A |

ಲಾಹೋರ್: ಜೈಶ್ – ಎ-ಮಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ನಮ್ಮ ನೆಲದಲ್ಲಿಯೇ ಇದ್ದಾನೆ ಎಂಬುದನ್ನು ಪಾಕಿಸ್ಥಾನ ಇದೇ ಪ್ರಥಮ ಬಾರಿಗೆ ಬಹಿರಂಗವಾಗಿ ಒಪ್ಪಿಕೊಂಡಿದೆ. ಈ ಕುರಿತಾಗಿ ಹೇಳಿಕೆ ನೀಡಿರುವ ಪಾಕಿಸ್ಥಾನದ ವಿದೇಶಾಂಗ ಸಚಿವ ಶಾ ಮಹ್ಮೂದ್ ಖುರೇಷಿ ಅವರು, ‘ಮಸೂದ್ ಅಜ್ಹರ್ ಅವರ ಆರೋಗ್ಯ ಹದಗೆಟ್ಟಿರುವುದರಿಂದ ಆತ ತನ್ನ ಮನೆಯಲ್ಲೇ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ’ ಎಂದು ಹೆಳಿದ್ದಾರೆ.

Advertisement

ಮತ್ತು ಮಸೂದ್ ನನ್ನು ಬಂಧಿಸಲು ಪಾಕಿಸ್ಥಾನವು ಭಾರತದ ಬಳಿಯಲ್ಲಿ ಸಾಕ್ಷ್ಯವನ್ನು ಕೇಳಿದೆ. ಈ ಮೂಲಕ ಉಗ್ರರ ಮೇಲಿರುವ ತನ್ನ ಪ್ರೀತಿಯನ್ನು ಪಾಕ್ ಮತ್ತೆ ತೋರ್ಪಡಿಸಿದಂತಾಗಿದೆ. ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದು ತಮ್ಮ ವಶದಲ್ಲಿರುವ ಭಾರತೀಯ ಯುದ್ಧ ವಿಮಾನದ ಪೈಲಟ್ ಅಭಿನಂದನ್ ಅವರನ್ನು ಭಾರತಕ್ಕೆ ವಾಪಾಸು ಕಳುಹಿಸಲು ಒಪ್ಪಿಕೊಂಡ ಬೆನ್ನಲ್ಲೇ ಇದೀಗ ಮೌಲಾನ ಮಸೂದ್ ತನ್ನ ನೆಲದಲ್ಲೆ ಇದ್ದಾನೆ ಎಂದು ಪಾಕ್ ಒಪ್ಪಿಕೊಂಡಿರುವುದು ವಿಶೇಷವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next