Advertisement

Viral Photos: ದುಬೈನಲ್ಲಿ ಸಾನಿಯಾ ಮಿರ್ಜಾ – ಮೊಹಮ್ಮದ್ ಶಮಿ ಜಾಲಿ ಮೂಡ್..‌ ಫೋಟೋ ವೈರಲ್.!

12:13 PM Dec 24, 2024 | Team Udayavani |

ಮುಂಬಯಿ: ಕ್ರೀಡಾ ಲೋಕದಲ್ಲಿ ತಮ್ಮದೇ ಆದ ಸಾಧನೆಯಿಂದ ಗುರುತಿಸಿಕೊಂಡಿರುವ ಟೆನ್ನಿಸ್‌ ಆಟಗಾರ್ತಿ ಸಾನಿಯಾ ಮಿರ್ಜಾ – ಕ್ರಿಕೆಟಿಗ ಮೊಹಮ್ಮದ್ ಶಮಿ ( Mohammed Shami) ಜತೆಯಾಗಿ ಹಾಲಿಡೇ ಮೂಡ್‌ನಲ್ಲಿ ಫೋಟೋಸ್‌ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಪಟ್ಟೆ ವೈರಲ್‌ (Viral) ಆಗಿದೆ.

Advertisement

ಸಾನಿಯ ಮಿರ್ಜಾ(Sania Mirza) ಪತಿ ಶೋಯೆಬ್ ಮಲಿಕ್ ಅವರಿಂದ ಕೆಲ ತಿಂಗಳ ಹಿಂದೆ ದೂರವಾಗಿದ್ದಾರೆ. ಶೋಯೆಬ್‌ ಮಲಿಕ್‌ ಬೇರೆ ವಿವಾಹ ಕೂಡ ಆಗಿದ್ದಾರೆ. ಇತ್ತ ಶಮಿ ಕೂಡ ತಮ್ಮ ಪತ್ನಿಯಿಂದ ದೂರವಾಗಿದ್ದಾರೆ.

ಈ ನಡುವೆ ಕೆಲ ಸಮಯದ ಹಿಂದಷ್ಟೇ  ಶಮಿ ಮತ್ತು ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರು ಮದುವೆಯಾಗಲಿದ್ದಾರೆ ಎಂದು ವದಂತಿ ಹಬ್ಬಿತ್ತು. ಈ ವಿಚಾರ ಎಲ್ಲೆಡೆ ಹರಿದಾಡಿ ಕೊನೆಗೆ ಶಮಿ ಅವರೇ ಇದಕ್ಕೆ ಫುಲ್‌ ಸ್ಟಾಪ್‌ ಇಟ್ಟಿದ್ದರು.

ಸಾಮಾಜಿಕ ಮಾಧ್ಯಮದಲ್ಲಿ ಸುಳ್ಳು ಸುದ್ದಿಗಳನ್ನು ಹರಡುವುದನ್ನು ತಡೆಯಲು ಜನರನ್ನು ಕೇಳಿಕೊಂಡು,  ಮೀಮ್‌ ಗಳು ಮನರಂಜನೆಯನ್ನು ನೀಡಬಹುದಾದರೂ ಅವು ಹಾನಿಕಾರಕವೂ ಆಗಿರಬಹುದು ಎಂದು ಹೇಳಿದ್ದರು.

Advertisement

ಸಾಮಾಜಿಕ ಜಾಲತಾಣಗಳೊಂದಿಗೆ ಎಲ್ಲರೂ ಜವಾಬ್ದಾರರಾಗಿರಬೇಕು, ಇಂತಹ ಆಧಾರರಹಿತ ಸುದ್ದಿಗಳನ್ನು ಹರಡುವುದನ್ನು ತಡೆಯಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದರು.

ಇದೀಗ ಸಾನಿಯಾ ಮಿರ್ಜಾ ಹಾಗೂ ಮೊಹಮ್ಮದ್‌ ಶಮಿ ಅವರು ಜತೆಯಾಗಿರುವ ಫೋಟೋಗಳು ವೈರಲ್‌ ಆಗಿದೆ.

ಸಾನಿಯಾ ಹಾಗೂ ಶಮಿ ಅವರು ಜತೆಯಲ್ಲಿ ದುಬೈಯಲ್ಲಿರುವ ಕೆಲ ಫೋಟೋಗಳಯ ವೈರಲ್‌ ಆಗಿದೆ. ಸಾನಿಯಾ – ಶಮಿ ಬೀಚ್‌ವೊಂದರಲ್ಲಿ ಜತೆಯಾಗಿ ನಿಂತುಕೊಂಡಿರುವ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇನ್ನೊಂದು ಫೋಟೋದಲ್ಲಿ ಸಾನಿಯಾ – ಶಮಿ ಮದುವೆ ಆದ ಲುಕ್‌ನಲ್ಲಿ ನವ ಜೋಡಿಯಂತೆ ಕಾಣುತ್ತಿದ್ದಾರೆ.

ಈ ಫೋಟೋಗಳು ಎಲ್ಲೆಡೆ ಹರಿದಾಡುತ್ತಿದ್ದಂತೆ ಇದೊಂದು ʼಎಐʼ ರಚಿತ ಫೋಟೊವೆಂದು ಅಸಲಿಯತ್ತು ಗೊತ್ತಾಗಿದೆ.

ಎಐನಿಂದ (AI) ಈ ರೀತಿ ಫೋಟೋಗಳನ್ನು ಕ್ರಿಯೇಟ್‌ ಮಾಡಿ ವೈರಲ್‌ ಮಾಡಿರುವುದು ಇದೇ ಮೊದಲಲ್ಲ. ಇತ್ತೀಚೆಗೆ ಪ್ರಭಾಸ್‌ ಹಾಗೂ ಅನುಷ್ಕಾ ಅವರ ಫೋಟೋವನ್ನು ಸಹ ಇದೇ ರೀತಿಯಾಗಿ ವೈರಲ್‌ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next