ಬೆಂಗಳೂರು : ರಾಜಧಾನಿಯ ವಿವಿಧ ಕೇಂದ್ರಗಳಲ್ಲಿ 25 ಸಾವಿರ ವಿದ್ಯಾರ್ಥಿಗಳು ಸೇರಿ ರಾಜ್ಯಾದ್ಯಂತ ಸುಮಾರು 40 ಸಾವಿರ ವಿದ್ಯಾರ್ಥಿಗಳು ಸುರಕ್ಷತಾ ವ್ಯವ ಸ್ಥೆಯಲ್ಲಿ ಜೆಇಇ ಪರೀಕ್ಷೆ ಬರೆದಿದ್ದಾರೆ.
ದೇಶದ ವಿವಿಧ ಭಾಗಗಳಲ್ಲಿರುವ ಭಾರತೀಯ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕೆ ಜಂಟಿ ಪ್ರವೇಶ ಪರೀಕ್ಷೆ (ಜೆಇಇ) ನಡೆಸಲಾಗುತ್ತದೆ. ಐಐಟಿ ಮತ್ತು ಎನ್ ಐಟಿಯಲ್ಲಿ ಎಂಜಿನಿಯ ರಿಂಗ್ ಪದವಿ ಕೋರ್ಸ್‌ಗೆ ಸೀಟು ಪಡೆಯಲು ಜೆಇಇ ಶ್ರೇಣೀ ಅತ್ಯಂತ ಅವಶ್ಯ. ಕೆಲವೊಂದು ಖಾಸಗಿ ವಿವಿಗಳು ಕೂಡ ಜೆಇಇ ರ್‍ಯಾಂಕ್ ಆಧಾರದಲ್ಲಿ ಸೀಟು ಒದಗಿಸುತ್ತವೆ. ಮಂಗಳವಾರ ಮೊದಲ ದಿನದ ಪರೀಕ್ಷೆ ಯಾವುದೇ ಗೊಂದಲ ಅಥವಾ ಆತಂಕ ವಿಲ್ಲದೆ ಸಸೂತ್ರವಾಗಿ ನಡೆದಿದೆ. ಸೋಂಕಿತ ಅಭ್ಯರ್ಥಿಗಳು ಕೂಡ ವಿಶೇಷ ಕೊಠಡಿಯಲ್ಲಿ ಪರೀಕ್ಷೆ ಬರೆದಿದ್ದಾರೆ.
ಕೋವಿಡ್ ಸೋಂಕಿತ ಅಭ್ಯರ್ಥಿಗಳು ಪರೀಕ್ಷೆ ಬರೆದಿರುವ ಕೊಠಡಿಯ ಮೇಲ್ವಿಚಾರಕರು ಪಿಪಿಇ ಕಿಟ್ ಧರಿಸಿ ಸೇವೆ ಸಲ್ಲಿಸಿದ್ದಾರೆ. ಹಾಗೆಯೇ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವ ಪ್ರತಿ ವಿದ್ಯಾರ್ಥಿಯ ಆರೋಗ್ಯ ತಪಾಸಣೆ ಮತ್ತು ಸ್ಯಾನಿಟೈ ಜೇಷನ್, ಮಾಸ್ಕ್ ಕಡ್ಡಾಯ ವಾಗಿತ್ತು, ಅಭ್ಯರ್ಥಿಗಳಿಗೆ ಸಾಮಾಜಿಕ ಅಂತರದ ಅನುಕೂಲತೆಗೆ ತಕ್ಕಂತೆ ಕೊಠಡಿಯ ಒಳಗೆ ವ್ಯವಸ್ಥೆ ಮಾಡಲಾಗಿತ್ತು. ನಗರ ಸೇರಿದಂತೆ ರಾಜ್ಯದ ಬಹುತೇಕ ಕೇಂದ್ರದಲ್ಲಿ ವಿದ್ಯಾರ್ಥಿಗಳು ಬೆ. 7.30ರಿಂದಲೇ ಪರೀಕ್ಷಾ ಕೇಂದ್ರದಲ್ಲಿ ಹಾಜರಿದ್ದರು. ದೇಶಾದ್ಯಂತ ಸೆ.6ರವರೆಗೂ ಪರೀಕ್ಷೆ ನಡೆಯಲಿದೆ.
ಸಿಎಂ, ಡಿಸಿಎಂ ಶುಭ ಹಾರೈಕೆ: ಜೆಇಇ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾ ಯಣ ಅವರು ಟ್ವೀಟ್ ಮೂಲಕ ಶುಭಕೋರಿದ್ದಾರೆ. ಪರೀಕ್ಷೆಯ ಸುರಕ್ಷ ತೆಗೆ ಸಂಬಂಧಿಸಿದಂತೆ ಎಲ್ಲ ರೀತಿಯ ಸುರಕ್ಷತಾ ಕ್ರಮ ತೆಗೆದುಕೊಂಡಿದ್ದೇವೆ. ಆತ್ಮವಿಶ್ವಾಸದಿಂದ ಪರೀಕ್ಷೆ ಬರೆದು ಯಶ ಸ್ವಿಯಾಗಿ ಎಂದು ಶುಭಹಾರೈಸಿದ್ದಾರೆ.
ಯುವಿಸಿಇಯಲ್ಲಿ ಪರೀಕ್ಷೆ ಆರಂಭ : ಬೆಂಗಳೂರು: ನಗರದ ಕೆ.ಆರ್.ವೃತ್ತದಲ್ಲಿರುವ ವಿಶ್ವೇಶ್ವರಯ್ಯ ಎಂಜಿನಿ ಯರಿಂಗ್ ಕಾಲೇಜಿನ(ಯುವಿಸಿಇ) ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಮಂಗಳವಾರದಿಂದ ಪರೀಕ್ಷೆ ಆರಂಭ ವಾಗಿದ್ದು, ಕುಲಪತಿ ಪ್ರೊ.ಕೆ.ಆರ್.ವೇಣುಗೋಪಾಲ್ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಯುವಿಸಿಇನಲ್ಲಿ ನಡೆದ ಪರೀಕ್ಷೆಯಲ್ಲಿ 600ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಹಾಜರಾಗಿದ್ದರು. ಕೊರೊನಾದಿಂದ ಸುರಕ್ಷೆಗೆ ವಿದ್ಯಾರ್ಥಿಗಳಿಗೆ ಆರ್‌ಟಿ-ಪಿಸಿಆರ್ ಪರೀಕ್ಷಿಸಲಾಯಿತು. ಮುಂಜಾ ಗ್ರತಾ ಕ್ರಮಗಳನ್ನು ಪಾಲಿಸುವ ಮೂಲಕ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗಿತ್ತು. ಸೋಂಕಿತ ವಿದ್ಯಾರ್ಥಿ ಗಳಿಗೆ ಪರೀಕ್ಷೆ ಬರೆಯಲು ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿತ್ತು. ಪರೀಕ್ಷಾ ಸ್ಥಳಕ್ಕೆ ಭೇಟಿ ನೀಡಿದ ಬೆಂವಿವಿ ಕುಲಪತಿ ಡಾ.ಕೆ.ಆರ್.ವೇಣುಗೋಪಾಲ್ ಪರಿಶೀಲನೆ ನಡೆಸಿದರು. ಸೆ.12ರವರೆಗೆ ಪರೀಕ್ಷೆ ನಡೆಯಲಿದೆ ಎಂದರು