ಚಿಕ್ಕನಾಯಕನಹಳ್ಳಿ: ಅಟಲ್ ಭೂಜಲ ಯೋಜನೆ ಇಡೀ ರಾಷ್ಟ್ರದಲ್ಲಿ ಮೊದಲ ಭಾರಿಗೆ ಚಿಕ್ಕನಾಯಕನಹಳ್ಳಿ ತಾಲೂಕಿನ ಜೆ.ಸಿ ಪುರ ಗ್ರಾಪಂ ವ್ಯಾಪ್ತಿಯಲ್ಲಿ ಯಶಸ್ವಿ ಯಾಗಿ ಅನುಷ್ಠಾನಗೊಳಿಸಲು ಸಚಿವ ಜೆ.ಸಿ ಮಾಧು ಸ್ವಾಮಿಯವರು ಕಾರ್ಯೋನ್ಮುಖರಾಗಿದ್ದು, ಯೋಜ ನೆಯ ಮಾಹಿತಿ ಪಡೆಯಲು ಕೇಂದ್ರದ ತಂಡ ಜೆ.ಸಿ ಪುರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಪ್ರಧಾನಿ ಮೋದಿಯವರ ಮಹತ್ವಾಕಾಂಕ್ಷಿ ಯೋಜ ನೆಯಾದ ಆಟಲ್ ಭೂಜಲ ಯೋಜನೆ ಕೆಲವೇ ರಾಜ್ಯ ದಲ್ಲಿ ಅನುಷ್ಠಾನಗೊಳಲ್ಲಿದ್ದು, ಇವುಗಳ ಪೈಕಿ ಕರ್ನಾಟಕ ರಾಜ್ಯವೂ ಸೇರಿದೆ. ಇಡೀ ಕರ್ನಾಟಕ ರಾಜ್ಯದಲ್ಲಿ ಮೊದಲ ಬಾರಿಗೆ ತುಮಕೂರು ಜಿಲ್ಲೆಯ ಚಿಕ್ಕ ನಾಯ ಕನಹಳ್ಳಿ ತಾಲೂಕಿನ ಜಯಚಾಮರಾಜೇಂದ್ರಪುರ ಗ್ರಾಪಂನಲ್ಲಿ ಅನುಷ್ಠಾನಗೊಳ್ಳುತ್ತಿರುವುದು ವಿಶೇಷ.
ಐದು ವರ್ಷ ಯೋಜನೆ: ಇಡೀ ದೇಶದಲ್ಲಿ ಮೊದಲ ಬಾರಿಗೆ ಚಿಕ್ಕನಾಯಕನಹಳ್ಳಿ ಜೆ.ಸಿ ಪುರ ಗ್ರಾಪಂನಲ್ಲಿ ಅಟಲ್ ಭೂಜಲ ಯೋಜನೆ ಪ್ರಾಯೋಗಿಕವಾಗಿಅನುಷ್ಠಾನಗೊಳಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಎಂಐ, ಗ್ರಾಪಂ, ಕೃಷಿ , ಆರಣ್ಯ ಇಲಾಖೆಯ ಸಹ ಯೋಗದಲ್ಲಿ ಯೋಜನ ಅನುಷ್ಠಾನವಾಗಲಿದೆ. ಜೆ.ಸಿ. ಪುರ ಗ್ರಾಪಂನಲ್ಲಿ 370 ಕೃಷಿ ಹೊಂಡ, 450 ಕಂದಕ ಬದುಗಳು , ಆರಣ್ಯ ಇಲಾಖೆಯಿಂದ 223 ಜನ ಫಲಾ ನುಭವಿಗಳಿಗೆ ಸಸಿ ವಿತರಣೆ ಸೇರಿದಂತೆ 1,043 ಕಾರ್ಯಯೋಜನೆ ಪ್ಯಾಕೇಜ್‌ನ್ನು 5 ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. ಈ ಯೋಜನೆಗೆ ಗ್ರಾಪಂನಿಂದ 4ಕೋಟಿ 86 ಲಕ್ಷ ಹಣ ಮೀಸಲಿಡಲಾಗಿದೆ. ಎಲ್ಲಾ ಇಲಾಖೆಯೂ ಸೇರಿ 9.14 ಕೋಟಿ ರೂ. ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಕೃಷಿ ಕಾರ್ಮಿಕ ಕಾಯ್ದೆ ವಿರೋಧಿಸಿ ಪ್ರತಿಭಟನೆ
ಕೇಂದ್ರ ತಂಡ ಭೇಟಿ: ದೇಶದಲ್ಲಿ ಮೋದಿ ಕನಸು ನನಸು ಮಾಡಲು ಹೊರಟಿರುವ ಜೆ.ಸಿ. ಪುರ ಗ್ರಾಪಂಗೆ ಕೇಂದ್ರ ತಂಡ ಭೇಟಿ ನೀಡಿ ಕಾರ್ಯಕ್ರಮದ ಯೋಜನೆಯ ಅನುಷ್ಠಾನದ ಸ್ವರೂಪ ಕುರಿತು ಮಾಹಿತಿ ಪಡೆಯಿತು. ಖುದ್ದು ಸಚಿವ ಜೆ.ಸಿ ಮಾಧುಸ್ವಾಮಿ ಕೇಂದ್ರ ತಂಡಕ್ಕೆ ಯೋಜನೆಯ ಕಾರ್ಯ ಕ್ರಮಗಳ ಬಗ್ಗೆ ಹಾಗೂ ಅನುಷ್ಠಾನದ ಬಗ್ಗೆ ಮಾಹಿತಿ ನೀಡಿದರು.
ವಿವಿಧ ಇಲಾಖೆಗಳಿಂದ ಶ್ರಮ: ಅಟಲ್ ಭೂಜಲ ಯೋಜನೆಯನ್ನು ಯಶಸ್ವಿಗೊಳಿಸಲು, ಗ್ರಾಪಂ, ಕೃಷಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಆರಣ್ಯ ಇಲಾಖೆ ಸೇರಿದಂತೆ ಹಲವಾರು ಇಲಾಖೆಗಳು ಈ ಯೋಜ ನೆಯ ಯಶಸ್ವಿಗೆ ಶ್ರಮ ಹಾಕಬೇಕಾಗಿದೆ. ಹನಿ ನೀರಾವರಿ ಹಿಂಗು ಗುಂಡಿಗಳಿಂದ ಪ್ರದೇಶದಲ್ಲಿ ಜಲಭದ್ರತೆ ಯೋಜನೆಯ ಉದ್ದೇಶವಾಗಿರುತ್ತದೆ ಎಂದರು.
ಚೇತನ್