ಬೆಂಗಳೂರು: ಅತಿ ಹೆಚ್ಚು ಸಂಚಾರದಟ್ಟಣೆವುಳ್ಳ ಜೆ.ಸಿ.ರಸ್ತೆಯ ಮಧ್ಯಭಾಗದಲ್ಲಿ ಏಕಾಏಕಿ ಗುರುವಾರ ಸುಮಾರು 7-8 ಅಡಿಯಷ್ಟು ಬೃಹದಾಕಾರದ ಗುಂಡಿ ಬಿದ್ದಿದ್ದು, ವಾಹನ ಸವಾರರು ಆತಂಕದಲ್ಲಿ ಸಂಚರಿಸಿದರು.
ಬೆಳಗ್ಗೆಯೇ ಈ ಬೃಹದಾಕಾರದ ಗುಂಡಿ ರಸ್ತೆ ಮಧ್ಯೆ ಕಾಣಿಸಿಕೊಂಡಿದ್ದರಿಂದ ಕೆಲಹೊತ್ತು ಉದ್ದೇಶಿತ ಮಾರ್ಗದಲ್ಲಿ ಸವಾರರು ಕೈಯಲ್ಲಿ ಜೀವ ಹಿಡಿದು ಕೊಂಡು ಸಂಚರಿಸಿದರು. ವೇಗವಾಗಿ ಬರುವ ವಾಹನಗಳಿಗೆ ಗುಂಡಿ ಹತ್ತಿರಕ್ಕೆ ಬರುತ್ತಿದ್ದಂತೆ ಬ್ರೇಕ್ ಬೀಳುತ್ತಿತ್ತು. ಇದರಿಂದ ಹಿಂದೆ ಬರುವ ಇತರೆ ವಾಹನ ಸವಾರರು ಗಲಿಬಿಲಿಗೊಳ್ಳುತ್ತಿರುವುದು ಕಂಡುಬಂತು.
ಇದರಿಂದ ತೀವ್ರ ವಾಹನದಟ್ಟಣೆ ಉಂಟಾಗಿತ್ತು. ಈ ಗುಂಡಿ ಹೇಗೆ ಸೃಷ್ಟಿಯಾಯಿತು ಎನ್ನುವುದು ಬಿಬಿಎಂಪಿ ವಲಯ ಎಂಜಿನಿಯರ್‌ಗಳಿಗೂ ಗೊತ್ತಿಲ್ಲ. ಈ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ. ಗುಂಡಿಯಾಗಿರುವುದು ಗಮನಕ್ಕೆ ಬರುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಬಿಬಿಎಂಪಿ ಅಧಿಕಾರಿಗಳು, ಯಾವುದೇ ಅನಾಹುತಗಳಾದಂತೆ ತಾತ್ಕಾಲಿಕ ತಡೆ ನಿರ್ಮಿಸಿ, ಗುಂಡಿಯನ್ನು ಅಗೆದು ನೋಡಿದರೂ ಕಾರಣ ಗೊತ್ತಾಗಲಿಲ್ಲ.
ಇದನ್ನೂ ಓದಿ;- ಕುಷ್ಟಗಿ: ಆಹೋರಾತ್ರಿ ಟಗರು ಕಾಳಗ; ರಣೋತ್ಸಾಹದ ಕೇಕೆ
ಈ ಭಾಗದಲ್ಲಿಬಿಬಿಎಂಪಿ,ಮೆಟ್ರೋ ಸೇರಿದಂತೆ ಯಾವುದೇ ಸಿವಿಲ್‌ಕಾಮಗಾರಿ ನಡೆಯುತ್ತಿಲ್ಲ. “ಎಂಜಿನಿಯರ್‌ಗಳೊಂದಿಗೆ ಘಟನಾ ಸ್ಥಳಕ್ಕೆ ನೀಡಿ ಗುಂಡಿ ಅಗೆದು ಪರಿಶೀಲನೆ ನಡೆಸಲಾಗಿದೆ. ಆದರೂ ನಿಖರ ಕಾರಣ ತಿಳಿದುಬಂದಿಲ್ಲ. ಯಾವುದಾರೂ ಹಳೆಯ ಬಾವಿ ಇರಬಹುದು. ಅದೇನೇ ಇರಲಿ, ಈಗ ಗುಂಡಿಗೆ ವೆಟ್‌ಮಿಕ್ಸ್ ತುಂಬಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ’ ಎಂದು ಬಿಬಿಎಂಪಿ ದಕ್ಷಿಣ ವಲಯದ ಅಧಿಕಾರಿಗಳು ಮಾಹಿತಿ ನೀಡಿದರು.