Advertisement

‘Jawan’ box office collection: ರಿಲೀಸ್‌ ಆದ ಎರಡೇ ದಿನಕ್ಕೆ 200 ಕೋಟಿ ಗಳಿಸಿದ ʼಜವಾನ್‌ʼ

09:50 AM Sep 09, 2023 | Team Udayavani |

ಮುಂಬಯಿ:  ಶಾರುಖ್‌ ಖಾನ್‌ ಅವರ ʼಜವಾನ್‌ʼ ಸಿನಿಮಾ ದಾಖಲೆಗಳನ್ನು ಮುರಿದು ಇತಿಹಾಸವನ್ನು ಬರೆಯಲು ಮುಂದಾಗುತ್ತಿದೆ. ಸಿನಿಮಾ ರಿಲೀಸ್‌ ಆಗಿ ಎರಡು ದಿನಗಳು ಕಳೆದಿದ್ದು, ಈ ಎರಡು ದಿನಗಳಲ್ಲಿ ಈಗಾಗಲೇ ಹಲವು ದಾಖಲೆಗಳು ಬ್ರೇಕ್‌ ಆಗಿವೆ.

Advertisement

ಕಿಂಗ್‌ ಖಾನ್‌ ಬಾಕ್ಸ್‌ ಆಫೀಸ್‌ ಕಿಂಗ್‌ ಆಗಿ ಮತ್ತೊಮ್ಮೆ ಮೋಡಿ ಮಾಡಿದ್ದಾರೆ. ಮೊದಲ ದಿನವ ʼಜವಾನ್‌ʼ 129.06 ಕೋಟಿ ರೂಪಾಯಿಯನ್ನು ಗಳಿಸಿತ್ತು. ಆ ಮೂಲಕ ಭಾರತ ಸಿನಿರಂಗದಲ್ಲಿ ಬಿಗ್‌ ಓಪನಿಂಗ್‌ ಪಡೆದುಕೊಂಡ ಹಿಂದಿ ಸಿನಿಮಾವಾಗಿ ʼಜವಾನ್‌ʼ ಹೊರಹೊಮ್ಮಿದೆ. ಇದೀಗ ಎರಡನೇ ದಿನವೂ ಅದೇ ರೀತಿಯ ಆರಂಭವನ್ನು ಪಡೆದುಕೊಂಡಿದೆ.

ಭಾರತದಲ್ಲಿ  ಎಲ್ಲಾ ಭಾಷೆಗಳಲ್ಲಿ ಸೇರಿ ಮೊದಲ ದಿನ ಸಿನಿಮಾ 74.50 ಕೋಟಿ ರೂ.ಗಳಿಸಿದೆ. ಇದೀಗ ಸೆಕೆಂಡ್‌ ಡೇ ಭಾರತದಲ್ಲಿ 53 ಕೋಟಿ ರೂಪಾಯಿಯ ಕಮಾಯಿಯನ್ನು ಮಾಡಿದೆ. ಎರಡು ದಿನದಲ್ಲಿ ಇಂಡಿಯನ್‌ ಬಾಕ್ಸ್‌ ಆಫೀಸ್‌ ನಲ್ಲಿ ʼಜವಾನ್‌ʼ 127 ಕೋಟಿ ರೂ.ಗಳಿಸಿದೆ. ವರ್ಲ್ಡ್‌ ವೈಡ್‌ 200 ಕೋಟಿ ರೂಪಾಯಿಯ ಗಳಿಕೆಯನ್ನು ಕಂಡಿದೆ ಎಂದು ಸಿನಿಮಾ ಟ್ರೇಡ್ ಅನಾಲಿಸ್ಟ್ ರಮೇಶ್‌ ಬಾಲಾ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

ಇದು ಆರಂಭಿಕ ಲೆಕ್ಕಚಾರವಾಗಿದ್ದು, ಅಧಿಕೃತ ಬಾಕ್ಸ್‌ ಆಫೀಸ್‌ ಗಳಿಕೆ ಬಗ್ಗೆ ಇನ್ನಷ್ಟೇ ಮಾಹಿತಿ ಹೊರಬೀಳಬೇಕಿದೆ.

ಸಿನಿಮಾದಲ್ಲಿ ಶಾರುಖ್‌ ಖಾನ್‌ ಗುಪ್ತಚರ ಅಧಿಕಾರಿ ಹಾಗೂ ಕಳ್ಳನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದ್ವಿಪಾತ್ರದಲ್ಲಿ ನಟಿಸಿರುವ ಶಾರುಖ್‌ ಅವರ ನಟನೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

Advertisement

ಸೆಪ್ಟೆಂಬರ್ 7, 2023 ರಂದು ‘ಜವಾನ್’ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್‌ ಆಗಿದೆ. ಅಟ್ಲಿ ನಿರ್ದೇಶನದ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆಗೆ ವಿಜಯ್ ಸೇತುಪತಿ, ನಯನತಾರಾ, ಸನ್ಯಾ ಮಲ್ಹೋತ್ರಾ ಮತ್ತು ಪ್ರಿಯಾಮಣಿ ನಟಿಸಿದ್ದಾರೆ. ದೀಪಿಕಾ ಪಡುಕೋಣೆ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next