Advertisement

ಜಾವೆಲಿನ್‌: ಕಾಂಗ್‌ ನಿರಾಶೆ

12:28 PM Aug 14, 2017 | |

ಲಂಡನ್‌;  ವಿಶ್ವ ಆ್ಯತ್ಲೆಟಿಕ್‌ ಕೂಟದ ಜಾವೆಲಿನ್‌ ಸ್ಪರ್ಧೆಯಲ್ಲಿ ಫೈನಲಿಗೇರಿ ಇತಿಹಾಸ ನಿರ್ಮಿಸಿದ್ದ ಭಾರತದ ದೇವಿಂದರ್‌ ಸಿಂಗ್‌ ಕಾಂಗ್‌ ಅವರು ಅಂತಿಮವಾಗಿ 12ನೇ ಸ್ಥಾನ ಪಡೆಯಲಷ್ಟೇ ಶಕ್ತರಾಗಿ ನಿರಾಶೆಗೊಳಿಸಿದರು. 

Advertisement

ಜಾವೆಲಿನ್‌ ಸ್ಪರ್ಧೆಯ ಫೈನಲಿಗೇರಿದ ಭಾರತದ ಮೊದಲ ಆ್ಯತ್ಲೀಟ್‌ ಎಂಬ ಗೌರವಕ್ಕೆ ಪಾತ್ರರಾಗಿದ್ದ ಕಾಂಗ್‌ ಫೈನಲ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡಲು ವಿಫ‌ಲರಾದು. ಒಲಿಂಪಿಕ್‌ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕಾಂಗ್‌ ತನ್ನ ಮೂರನೇ ಪ್ರಯತ್ನದಲ್ಲಿ 80.02 ಮೀ. ದೂರ ಎಸೆದರು. ಮೊದಲ ಪ್ರಯತ್ನದಲ್ಲಿ 75.40  ಮೀ. ದೂರ ಎಸೆದಿದ್ದ ಅವರ ದ್ವಿತೀಯ ಪ್ರಯತ್ನ ಫೌಲ್‌ ಆಗಿತ್ತು. 84.57  ಮೀ. ದೂರ ಎಸೆದಿರುವುದು ಅವರ ಜೀವನಶ್ರೇಷ್ಠ ನಿರ್ವಹಣೆಯಾಗಿತ್ತು.

89.89 ಮೀ. ದೂರ ಎಸೆದ ಜರ್ಮನಿಯ ಜೋಹಾನೆಸ್‌ ವೆಟರ್‌ ಚಿನ್ನ ಗೆದ್ದರೆ ಜೆಕ್‌ ಗಣರಾಜ್ಯ ದವರಾದ ಜಾಕುಬ್‌ ವಡ್ಲೆಜೆಕ್‌ ಬೆಳ್ಳಿ ಮತ್ತು ಪೀಟರ್‌ ಫ್ರಿಡ್ರಿಚ್‌ ಕಂಚು ಗೆದ್ದರು.

Advertisement

Udayavani is now on Telegram. Click here to join our channel and stay updated with the latest news.

Next