Advertisement

ಟೀಂ ಇಂಡಿಯಾ ಅಭಿಮಾನಿಗಳಿಗೆ ಸಿಹಿ ಸುದ್ದಿ: ಬುಮ್ರಾ ತಂಡಕ್ಕೆ ಮರಳಲು ವೇದಿಕೆ ಸಜ್ಜು

06:49 PM Jun 18, 2023 | Team Udayavani |

ಮುಂಬೈ: ಗಾಯದ ಕಾರಣದಿಂದ ಹಲವು ಸಮಯದಿಂದ ಭಾರತದ ತಂಡದಿಂದ ಹೊರಗಿರುವ ವೇಗಿ ಜಸ್ಪ್ರೀತ್ ಬುಮ್ರಾ ಅವರು ಟೀಂ ಇಂಡಿಯಾಗೆ ಮರಳಲು ವೇದಿಕೆ ಸಜ್ಜಾಗಿದೆ. ಈ ವರ್ಷದ ಆಗಸ್ಟ್‌ ನಲ್ಲಿ ನಡೆಯಲಿರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯ ಸಮಯದಲ್ಲಿ ಭಾರತದ ಸ್ಟಾರ್ ವೇಗಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಗೆ ಮರಳುವ ನಿರೀಕ್ಷೆಯಿದೆ.

Advertisement

ಕಳೆದ ವರ್ಷ ಬುಮ್ರಾ ಅವರಿಗೆ ಗಂಭೀರವಾದ ಬೆನ್ನಿನ ಗಾಯವಾಗಿತ್ತು. ಹೀಗಾಗಿ ಅವರು ಟಿ20 ವಿಶ್ವಕಪ್ 2022 ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್ 2023 ನಲ್ಲಿ ಆಡುವ ಅವಕಾಶ ತಪ್ಪಿಸಿಕೊಂಡಿದ್ದರು. ಆದರೆ ನ್ಯೂಸ್ 18 ರ ವರದಿಗಳ ಪ್ರಕಾರ, ಮಾರ್ಚ್‌ ನಲ್ಲಿ ನಡೆದ ಬೆನ್ನುಮೂಳೆಯ ಶಸ್ತ್ರಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವಂತೆ ತೋರುತ್ತಿದೆ. ಸಂಪೂರ್ಣ ಫಿಟ್ ಆದರೆ ಐರ್ಲೆಂಡ್ ವಿರುದ್ದದ ಟಿ20 ಸರಣಿ ಆಡಲಿದ್ದಾರೆ.

“ಜಸ್ಪ್ರೀತ್ ಬುಮ್ರಾ ಈ ವರ್ಷದ ಆಗಸ್ಟ್‌ ನಲ್ಲಿ ಐರ್ಲೆಂಡ್ ಸರಣಿಗೆ ಆಯ್ಕೆಯಾಗುವ ಸಾಧ್ಯತೆಯಿದೆ. ಇದು ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಉತ್ತೇಜನ ನೀಡಲಿದೆ. ಸುದೀರ್ಘ ಗಾಯದ ವಿರಾಮದ ನಂತರ ಬುಮ್ರಾ ಅವರಿಗೆ ಉತ್ತಮ ಸಮಯವನ್ನು ನೀಡುತ್ತದೆ. ಎಲ್ಲವೂ ಸರಿಯಾಗಿದ್ದರೆ, ಗರಿಷ್ಠ ಫಿಟ್‌ ನೆಸ್‌ ನಲ್ಲಿರುವ ಬುಮ್ರಾ ಮೈದಾನಕ್ಕಿಳಿಯುವ ಸಾಧ್ಯತೆಯಿದೆ” ಎಂದು ಬಿಸಿಸಿಐ ಮೂಲ ತಿಳಿಸಿದೆ.

ಎನ್‌ ಸಿಎಯಲ್ಲಿ ಜಸ್ಪ್ರೀತ್ ಬುಮ್ರಾ ಹೇಗೆ ಪ್ರಗತಿ ಸಾಧಿಸುತ್ತಿದ್ದಾರೆ ಎಂಬುದರ ಕುರಿತು ಬಿಸಿಸಿಐ ಅಧಿಕಾರಿ ಮತ್ತಷ್ಟು ಮಾಹಿತಿ ನೀಡಿದ್ದಾರೆ. ಎನ್ ಎಸ್ಎ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ ಅವರ ಕಣ್ಗಾವಲಿನಲ್ಲಿರುವುದರ ಜೊತೆಗೆ, ಬುಮ್ರಾ ಅವರು ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next