Advertisement

ವಿವಿಧ ಮುಖಂಡರ ಮನೆಗಳಿಗೆ ಭೇಟಿ ಆರಂಭಿಸಿದ ಜನಾರ್ದನ ರೆಡ್ಡಿ

07:14 PM Jan 08, 2023 | Team Udayavani |

ಗಂಗಾವತಿ: ನೂತನ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸ್ಥಾಪಿಸಿ ಗಂಗಾವತಿ ಸೇರಿ ರಾಜ್ಯದ ವಿವಿಧೆಡೆ ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಿದ್ದತೆಯಲ್ಲಿರುವ ಮಾಜಿ ಸಚಿವ ಗಾಲಿ ಜನಾರ್ದನರೆಡ್ಡಿ ರವಿವಾರ ತಾಲೂಕಿನ ಹೇರೂರು ಗ್ರಾಮದಲ್ಲಿ ವಿವಿಧ ಜನಾಂಗ ಮತ್ತು ಪಕ್ಷಗಳ ಮುಖಂಡ ಮನೆಗಳಿಗೆ ಭೇಟಿ ನೀಡಿ ಬೆಂಬಲ ಕೋರಿದರು.

Advertisement

ಜಿ.ಪಂ.ಮಾಜಿ ಉಪಾಧ್ಯಕ್ಷ ವಿರೂಪಾಕ್ಷಗೌಡ ಹೇರೂರು, ಮುಖಂಡರಾದ ಲಿಂಗನಗೌಡ, ವಿರೂಪಾಕ್ಷಗೌಡ ನಾಯಕ ಸೇರಿ ವಿವಿಧ ಮುಖಂಡರ ಮನೆಗಳಿಗೆ ತೆರಳಿ ಮಾತುಕತೆ ನಡೆಸಿ ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿ ಸೇರುವ ಮೂಲಕ ಕಲ್ಯಾಣ ಮತ್ತು ಉತ್ತರ ಕರ್ನಾಟಕದ ಅಭಿವೃದ್ಧಿಗೆ ಶ್ರಮಿಸುವಂತೆ ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ವಿವಿಧ ಜನಾಂಗದವರಿಗೆ ಪಕ್ಷದಲ್ಲಿ ಸ್ಥಾನಮಾನ ಕಲ್ಪಿಸಲಾಗುತ್ತದೆ. ಜಿ.ಪಂ.ತಾ.ಪಂ. ಚುನಾವಣೆಯಲ್ಲಿಯೂ ಕಾರ್ಯಕರ್ತರನ್ನು ಗುರುತಿಸಿ ಅವಕಾಶ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಜಿ.ಪಂ.ಮಾಜಿ ಉಪಾಧ್ಯಕ್ಷ ವಿರೂಪಾಕ್ಷಗೌಡ ಹೇರೂರು ಮಾತನಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿಗೆ ಅಧಿಕಾರ ಹಿಡಿಯಲು ರೆಡ್ಡಿಯವರು ನೆರವಾಗಿದ್ದರು. ಇದೀಗ ಬಿಜೆಪಿ ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷಗಳು ದುಡಿಯುವ ಮುಖಂಡರು ಕಾರ್ಯಕರ್ತರನ್ನು ಮೂಲೆಗುಂಪು ಮಾಡುತ್ತಿದ್ದು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜನಾರ್ದನರೆಡ್ಡಿಯವರ ಪಕ್ಷ ಪ್ರಮುಖ ಪಾತ್ರ ವಹಿಸಲಿದೆ ಎಂದರು.

ಈ ಸಂದರ್ಭದಲ್ಲಿ ಧೀರ ಕನ್ನಡಿಗರ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವಿರುಪಾಕ್ಷಗೌಡ ನಾಯಕ, ಗವಿಸಿದ್ದಪ್ಪ ಸಜ್ಜನ, ವೀರನಗೌಡ, ಗೂಳನಗೌಡ, ಸುಬ್ರಮಣ್ಯಂ,ನಾಗರಾಜಗೌಡ, ಬಾಷಾ, ಬಸವರಾಜ ಸ್ವಾಮಿ, ಮಹಾಂತಮ್ಮ ಸೇರಿ ಹಲವರು ಕಲ್ಯಾಣ ರಾಜ್ಯ ಪ್ರಗತಿ ಪಾರ್ಟಿಯನ್ನು ಸೇರ್ಪಡೆಗೊಂಡರು. ಹೇರೂರು, ಆಗೋಲಿ, ಕೇಸರಟ್ಟಿ, ಬಾಪಿರೆಡ್ಡಿ ಕ್ಯಾಂಪ್, ರ‍್ಹಾಳ, ಉಡುಮಕಲ್, ಗಡ್ಡಿ, ವೆಂಕಟಗಿರಿ ಗ್ರಾಮಗಳ ನೂರಾರು ಜನರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next