Advertisement

ವೇಗಿ ಆ್ಯಂಡರ್ಸನ್‌ 600 ವಿಕೆಟ್‌ ಬೇಟೆ

10:43 PM Aug 25, 2020 | Hari Prasad |

ಸೌತಾಂಪ್ಟನ್: ಇಂಗ್ಲೆಂಡಿನ ವೇಗಿ ಜೇಮ್ಸ್‌ ಆ್ಯಂಡರ್ಸನ್‌ ಟೆಸ್ಟ್‌ ಇತಿಹಾಸದಲ್ಲಿ 600 ವಿಕೆಟ್‌ ಉಡಾಯಿಸಿದ ವಿಶ್ವದ 4ನೇ ಹಾಗೂ ಇಂಗ್ಲೆಂಡಿನ ಮೊದಲ ಬೌಲರ್‌ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Advertisement

ಪಾಕ್‌ ಎದುರಿನ ಅಂತಿಮ ಟೆಸ್ಟ್‌ ಪಂದ್ಯದ ಅಂತಿಮ ದಿನದಾಟದಲ್ಲಿ ಪಾಕ್‌ ನಾಯಕ ಅಜರ್‌ ಅಲಿ ಅವರ ವಿಕೆಟ್‌ ಹಾರಿಸುವ ಮೂಲಕ ಆ್ಯಂಡಿ ಈ ಮೈಲುಗಲ್ಲು ನೆಟ್ಟರು.

ಆ್ಯಂಡರ್ಸನ್‌ 600 ವಿಕೆಟ್‌ ಹಾರಿಸಿದ ಮೊದಲ ವೇಗಿ ಎಂಬ ಹಿರಿಮೆಗೂ ಭಾಜನರಾಗಿದ್ದಾರೆ.

ಈ ಯಾದಿಯಲ್ಲಿರುವ ಮುತ್ತಯ್ಯ ಮುರಳೀಧರನ್‌ (800), ಶೇನ್‌ ವಾರ್ನ್ (708) ಮತ್ತು ಅನಿಲ್‌ ಕುಂಬ್ಳೆ (619) ಸ್ಪಿನ್ನರ್‌ಗಳೇ ಆಗಿದ್ದಾರೆ.

38 ವರ್ಷದ ವೇಗಿ ಆ್ಯಂಡರ್ಸನ್ ಅವರು  2018ರಲ್ಲಿ ಆಸ್ಟ್ರೇಲಿಯಾದ ವೇಗಿ ಗ್ಲೆನ್ ಮೆಕ್ ಗ್ರಾಥ್ ಅವರ 563 ಟೆಸ್ಟ್ ವಿಕೆಟ್ ಮೈಲುಗಲ್ಲನ್ನು ದಾಟಿದ ಸಾಧನೆಯನ್ನು ಮಾಡಿದ್ದರು.

Advertisement

ಪಾಕ್ ವಿರುದ್ಧದ ಈ ಟೆಸ್ಟ್ ಪಂದ್ಯದ ನಾಲ್ಕನೇ ದಿನವೇ ಆ್ಯಂಡರ್ಸನ್ ಅವರಿಗೆ 600 ವಿಕೆಟ್ ಸಾಧನೆ ಮಾಡುವ ಅವಕಾಶ ಲಭಿಸಿತ್ತು. ಆದರೆ ಅವರ ಬೌಲಿಂಗ್ ನಲ್ಲಿ ಕೆಲವು ಕ್ಯಾಚ್ ಗಳನ್ನು ಇಂಗ್ಲಂಡ್ ಫೀಲ್ಡರ್ ಗಳು ಕೈಚೆಲ್ಲಿದ್ದರಿಂದ ಜೇಮ್ಸ್ ತನ್ನ ಈ ಐತಿಹಾಸಿಕ ಸಾಧನೆಗೆ ಇನ್ನೊಂದು ದಿನದವರೆಗೆ ಕಾಯಬೇಕಾಗಿ ಬಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next