Advertisement

ಜಲಜೀವನ್‌ ಯೋಜನೆ ಕಾಮಗಾರಿ ಕಳಪೆ: ಶಾಸಕರು ಗರಂ

03:29 PM Oct 15, 2022 | Team Udayavani |

ತುರುವೇಕೆರೆ: ತಾಲೂಕಿನ ವಿವಿಧ ಗಾಮಗಳಲ್ಲಿ ನಡೆಯುತ್ತಿರುವ ಜಲಜೀವನ್‌ ಯೋಜನೆಯ ಕಾಮಗಾರಿಯ ಗುಣಮಟ್ಟ ಕಳಪೆಯಾಗಿದೆ ಎಂದು ಆರೋಪಿಸಿರುವ ಶಾಸಕ ಮಸಾಲಾ ಜಯರಾಮ್‌ ಅವರು, ಸಂಬಂಧಿಸಿದ ಅಧಿಕಾರಿಗಳು, ಇಂಜಿನಿಯರ್‌ ಮತ್ತು ಗುತ್ತಿಗೆದಾರರ ವಿರುದ್ಧ ಗರಂ ಆದ ಪ್ರಸಂಗ ಜರುಗಿತು.

Advertisement

ತಾಲೂಕಿನ ಕೆ.ಬೇವಿನಹಳ್ಳಿ, ಕೆ.ಮಾವಿನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಜಲಜೀವನ್‌ ಮಿಷನ್‌ನ ಯೋಜನೆಯಡಿ ಮನೆ ಮನೆಗೆ ಕೊಳಾಯಿ ಮೂಲಕ ನೀರು ಸರಬರಾಜು ಮಾಡುವ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಸಂದರ್ಭದಲ್ಲಿ ಗ್ರಾಮಗಳಲ್ಲಿ ಈಗಾಗಲೇ ನಿರ್ಮಿಸಿರುವ ಕಾಂಕ್ರೀಟ್‌ ರಸ್ತೆಯನ್ನು ಹಾಳು ಮಾಡಿ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಈ ಮೂಲಕ ಚನ್ನಾಗಿದ್ದ ಸಿಮೆಂಟ್‌ ರಸ್ತೆಯನ್ನೂ ಸಹ ಹಾಳು ಮಾಡಲಾಗಿದೆ ಎಂದು ಸಾರ್ವಜನಿಕರು ದೂರಿದ್ದರು.

ಸ್ಥಳ ಪರಿಶೀಲನೆ: ಈ ಕುರಿತು ಶಾಸಕ ಮಸಾಲಾ ಜಯರಾಮ್‌ ಅವರು ಜಿಲ್ಲಾ ಪಂಚಾಯ್ತಿಯ ಕೆಡಿಪಿ ಸಭೆಯಲ್ಲಿ ಚರ್ಚೆ ಮಾಡಿದ್ದರು. ಈ ಹಿನ್ನೆಲೆ ಯಲ್ಲಿ ಜಿಪಂ ಸಿಇಒ ಡಾ.ವಿದ್ಯಾಕುಮಾರಿ, ಜಲ ಜೀವನ್‌ ಮಿಷನ್‌ನ ಎಕ್ಸಿಕ್ಯೂಟಿವ್‌ ಇಂಜಿನಿಯರ್‌ ರವೀಶ್‌ ಸೇರಿದಂತೆ ಹಲವು ಅಧಿಕಾರಿಗಳು ಸ್ಥಳ ಪರಿಶೀಲನೆಗೆ ಆಗಮಿಸಿದ್ದರು.

ಕ್ರಮ ಕೈಗೊಳ್ಳಬೇಕು: ಶಾಸಕ ಮಸಾಲಾ ಜಯ ರಾಮ್‌ ಅವರು ಅಧಿಕಾರಿಗಳಿಗೆ ಗ್ರಾಮಗಳಲ್ಲಿ ಮಾಡಲಾಗಿರುವ ಕಾಮಗಾರಿಗಳ ಚಿತ್ರಣವನ್ನು ಅವರ ಎದುರೇ ತೆರೆದಿಟ್ಟರು. ಗ್ರಾಮಗಳಲ್ಲಿ ನಿರ್ಮಿಸಿರುವ ಸಿಮೆಂಟ್‌ ರಸ್ತೆಯನ್ನು ಹಾಳು ಮಾಡಲಾಗಿದೆ, ಪೈಪುಗಳನ್ನು ಹುದಿಯುವ ಸಂದರ್ಭದಲ್ಲಿ ಸಿಮೆಂಟ್‌ ರಸ್ತೆಯನ್ನು ಸರಿಪಡಿ ಸದೇ ಉದಾಸೀನ ಮಾಡಲಾಗಿದೆ. ಇದರಿಂದಾಗಿ ನಾಗರಿಕರು ಓಡಾಡಲೂ ಆಗದ ರೀತಿ ಕಾಮಗಾರಿ ಮಾಡಲಾಗಿದೆ ಎಂದು ಶಾಸಕರು ಗರಂ ಆದರು.

ಕಳಪೆ ಕಾಮಗಾರಿ ಮಾಡಿ ಸರ್ಕಾರಕ್ಕೆ ಲಕ್ಷಾಂತರ ರೂ.ನಷ್ಟ ಉಂಟು ಮಾಡಿರುವ ಅಧಿಕಾರಿಗಳು, ಇಂಜಿಯರ್‌ ಮತ್ತು ಗುತ್ತಿಗೆದಾರರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Advertisement

ಕ್ರಮ ಭರವಸೆ: ಸ್ಥಳ ಪರಿಶೀಲನೆ ಮಾಡಿದ ಜಿಪಂ ಸಿಇಒ ಡಾ.ವಿದ್ಯಾಕುಮಾರಿಯವರು ಜಲಜೀವನ್‌ ಯೋಜನೆಯಡಿ ಮಾಡಲಾಗುವ ಕಾಮಗಾರಿ ಯಲ್ಲಿ ರಸ್ತೆಯನ್ನೂ ಸಹ ಸಹಜ ರೀತಿಯಲ್ಲಿ ನಿರ್ಮಿಸಿಕೊಡುವಂತೆ ಸೂಚನೆ ನೀಡಲಾಗಿದೆ. ಆದರೆ, ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ಗುತ್ತಿಗೆ ದಾರರ ಬೇಜವಾಬ್ದಾರಿತನದಿಂದಾಗಿ ಕಾಮಗಾರಿಯಲ್ಲಿ ಲೋಪವಾಗಿರುವುದು ಕಂಡುಬಂದಿದೆ. ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾ ರರಿಗೆ ಮಾಡಲಾಗಿರುವ ಕಾಮಗಾರಿಯ ಲೋಪ ಸರಿಪಡಿಸಿ ಕೊಡವಂತೆ ಸೂಚಿಸಿ ನೋಟಿಸ್‌ ನೀಡ ಲಾಗುವುದು. ಇದಕ್ಕೆ ಪ್ರತಿಕ್ರಿಯಿ ಸದಿದ್ದಲ್ಲಿ ಅವರ ವಿರುದ್ಧ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next