Advertisement

ಜಕ್ಕಲಮಡಗು ಜಲಾಶಯಕ್ಕೆ ಜೀವಕಳೆ

10:50 AM Jul 13, 2020 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹಲವು ದಿನಗಳಿಂದ ಮಳೆರಾಯನ ಕೃಪೆ ತೋರುತ್ತಿರುವುದರಿಂದ ಒಂದೆಡೆ ಕೃಷಿ ಚಟುವಟಿಕೆಗಳು ಚುರುಕುಗೊಂಡು ಅನ್ನದಾತರದಲ್ಲಿ ಸಂತಸ, ಮತ್ತೂಂದೆಡೆ ಜಿಲ್ಲೆಯ ಪ್ರಮುಖ ಜಲಾಶಯಗಳು, ಡ್ಯಾಂಗಳಿಗೆ ನೀರು ಹರಿದು ಬರುತ್ತಿದೆ.

Advertisement

ಕಳೆದ ಶನಿವಾರ ರಾತ್ರಿ ಉತ್ತಮ ಮಳೆಯಾಗಿದ್ದು, ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಹಾಗೂ ಪಕ್ಕದ ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಪೂರೈಸುವ ಜಕ್ಕಲಮಡಗು ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ.

ಜಲಾಶಯದಲ್ಲಿ ತಳಮಟ್ಟಕ್ಕೆ ತಲುಪಿದ್ದ ನೀರು ಕೆಲ ದಿನಗಳಿಂದ ಬಿದ್ದ ಮಳೆಗೆ ಸುಮಾರು 8 ಅಡಿಯಷ್ಟು ನೀರು ಸಂಗ್ರಹವಾಗಿದೆ. ಜಕ್ಕಲಮಡಗು ಜಲಾಶಯ ವರ್ಷವೀಡಿ ಚಿಕ್ಕಬಳ್ಳಾಪುರ ಹಾಗೂ ದೊಡ್ಡ ಬಳ್ಳಾಪುರಕ್ಕೆ ನೀರು ಒದಗಿಸುವ ಪ್ರಮುಖ ಜಲಾಶಯವಾಗಿದೆ. ಹಲವು ತಿಂಗಳ ಹಿಂದೆ ಮಳೆ ಇಲ್ಲದೇ ಜಲಾಶಯದಲ್ಲಿ ನೀರು ಸಂಪೂರ್ಣ ನೆಲಕಚ್ಚಿತ್ತು. ಹಲವು ದಿನಗಳಿಂದ ಸುರಿಯುತ್ತಿರುವ ವರ್ಷಾಧಾರೆಗೆ ಜಲಾಶಯಕ್ಕೆ ನೀರು ಹರಿಯುತ್ತಿದೆ.

ಸುತ್ತಮುತ್ತಲೂ ಬೆಟ್ಟಗುಡ್ಡಗಳ ಕಣಿವೆ ಪ್ರದೇಶ ಹೊಂದಿರುವ ಜಲಾಶಯಕ್ಕೆ ಬೆಟ್ಟಗುಡ್ಡಗಳಿಂದ ನೀರು ಹರಿಯುವ ರಮಣೀಯ ದೃಶ್ಯಗಳನ್ನು ಕಣ್ತುಂಬಿಕೊಳ್ಳಲು ಚಿಕ್ಕಬಳ್ಳಾಪುರ ನಗರದ ನಾಗರಿಕರು ಜಲಾಶಯದ ಕಡೆಗೆ ಹೆಜ್ಜೆ ಹಾಕುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next