Advertisement

ಭಾರತದಿಂದ ಹೋದರೆ ಜೈಲು: ನಿಯಮ ರದ್ದು

01:01 AM May 08, 2021 | Team Udayavani |

ಮೆಲ್ಬರ್ನ್: ಭಾರತದಿಂದ ಆಸ್ಟ್ರೇಲಿಯಕ್ಕೆ ಬಂದರೆ 5 ವರ್ಷ ಜೈಲು ಶಿಕ್ಷೆ, 66 ಸಾವಿರ ಡಾಲರ್‌ ದಂಡ ಎಂಬ ಕಠಿನ ನಿಯಮ ಮುಂದಿನ ಶನಿವಾರದಿಂದ ಇರುವುದಿಲ್ಲ. ಈ ಬಗ್ಗೆ ಖುದ್ದು ಅಲ್ಲಿನ ಪ್ರಧಾನಿ ಸ್ಕಾಟ್‌ ಮಾರಿಸನ್‌ ಮಾಹಿತಿ ನೀಡಿದ್ದಾರೆ.

Advertisement

ಹೀಗಾಗಿ ಆಸೀಸ್‌ನ ಡಾರ್ವಿನ್‌ಗೆ ಅದೇ ದಿನ ಇತರ ದೇಶದಿಂದ  ಪ್ರಜೆಗಳನ್ನು ಕರೆದೊಯ್ಯಲಿರುವ ವಿಮಾನ ತಲುಪಲಿದೆ. 15ರಿಂದ 31ರ ನಡುವೆ ಮೂರು ನಗರಗಳಿಂದ ಆ ದೇಶಕ್ಕೆ ವಿಮಾನಗಳು ಆಗಮಿಸಲಿವೆ. ಭಾರತದಿಂದ ವಿಮಾನ ಪ್ರಯಾ­ಣಕ್ಕೆ ಅನುಮತಿ ನೀಡಬೇಕೋ ಬೇಡವೇ ಎಂಬ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನಿಸಲಾಗುತ್ತದೆ.

ಇತ್ತೀಚಿನ ವರ್ಷಗಳಲ್ಲಿ ಆಸ್ಟ್ರೇಲಿಯಾ ವಿದೇಶ­ಗಳಲ್ಲಿರುವ ಪ್ರಜೆಗಳ ವಿರುದ್ಧ ವಿಧಿಸಲಾಗಿರುವ ಕಠಿನ ನಿರ್ಬಂಧ ಇದಾಗಿದೆ. ಈ ಬಗ್ಗೆ ಜಗತ್ತಿ­ನಲ್ಲಿರುವ ಆಸೀಸ್‌ನ ಎಲ್ಲ ಪ್ರಜೆಗಳು, ವೈದ್ಯರು, ಸಂಸದರು, ನಾಗರಿಕ ಹಕ್ಕು ಹೋರಾಟಗಾರರಿಂದ ಪ್ರಬಲ ಆಕ್ಷೇಪ ವ್ಯಕ್ತವಾಗಿತ್ತು. ಜತೆಗೆ ಬೆಂಗಳೂರಿ­ನಲ್ಲಿ 2020ರ ಮಾರ್ಚ್‌ನಿಂದ ಉಳಿದು­ಕೊಂಡಿರುವ ನ್ಯೂಮಾನ್‌ ಎಂಬವರು ಸಿಡ್ನಿಯ ಕೋರ್ಟ್‌ನಲ್ಲಿ ಕೇಸು ದಾಖಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next