Advertisement
ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನ 9ಕ್ಕೂ ಹೆಚ್ಚು ಮಂದಿ ಅಧಿಕಾರಿಗಳು ಶಾಮೀಲಾಗಿರುವುದು ಸಾಬೀತಾದ ಬೆನ್ನಲ್ಲೇ ಆ ಅಧಿಕಾರಿಗಳ ವಿರುದ್ಧ ತನಿಖೆ ಹಾಗೂ ವಿಚಾರಣೆ ನಡೆಸಬೇಕಿದ್ದು, ಅನುಮತಿ ನೀಡುವಂತೆ ಒಂದೂವರೆ ತಿಂಗಳ ಹಿಂದೆಯೇ ಕಾರಾಗೃಹ ಇಲಾಖೆ ಮಹಾನಿರ್ದೇಶಕರು ಮತ್ತು ಗೃಹ ಇಲಾಖೆಗೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾತೀಮಾ ಪತ್ರದ ಮೂಲಕ ಮನವಿ ಮಾಡಿದ್ದಾರೆ. ಆದರೆ, ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಸಕ್ಷಮ ಪ್ರಾಧಿಕಾರದ ಅನುಮತಿ ಬಂದ ಬಳಿಕ ಅಧಿಕಾರಿಗಳ ವಿಚಾರಣೆ ನಡೆಸಿ, ಆರೋಪಪಟ್ಟಿ ಸಲ್ಲಿಸಲಾಗುತ್ತದೆ. ಈ ವಿಚಾರವನ್ನು ಕೋರ್ಟ್ ಗಮನಕ್ಕೂ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.
Related Articles
Advertisement
ಪ್ರಕರಣದ ತನಿಖೆಯಲ್ಲಿ ವಿಲ್ಸನ್ಗಾರ್ಡನ್ ನಾಗ ಮತ್ತು ತಂಡದಿಂದ ಜೈಲಿನ ಮುಖ್ಯಸ್ಥರು ಸೇರಿ ಕೆಲ ಅಧಿಕಾರಿಗಳ ಲಕ್ಷಾಂತರ ರೂ. ಪಡೆದು ದರ್ಶನ್ ಮತ್ತು ನಾಗನಿಗೆ ವಿಶೇಷ ಆತಿಥ್ಯ ನೀಡಿದ್ದರು. ಅಲ್ಲದೆ, ಜೈಲಿನಲ್ಲಿ ಕೈದಿಗಳು ಮೊಬೈಲ್ ಬಳಕೆಗೂ ಹಣ ಪಡೆದುಕೊಂಡಿದ್ದರು. ಪ್ರಮುಖವಾಗಿ ಸಿಸಿಬಿ ಅಧಿಕಾರಿಗಳ ದಾಳಿಗೆ ಹೋದಾಗ, ಸುಮಾರು ಒಂದು ಗಂಟೆಗಳ ಕಾಲ ಗೇಟ್ ಬಳಿಯೆ ನಿಲ್ಲಿಸಿ, ಕೆಲ ಬ್ಯಾರಕ್ನಲ್ಲಿದ್ದ ಬಾಕ್ಸ್ಗಳನ್ನು ವಿಲೇವಾರಿ ಮಾಡಿರುವುದು ಉದ್ದೇಶಪೂರ್ವಕವಾಗಿಯೇ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣಗಳಲ್ಲಿ ಜೈಲಿನ ಅಧಿಕಾರಿಗಳು ಕರ್ತವ್ಯಲೋಪ ಎಸಗಿದ್ದು, ಭಾರೀ ಭ್ರಷ್ಟಾಚಾರ ಎಸಗಿದ್ದಾರೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಹೇಳಲಾಗಿದೆ. ಮತ್ತೂಂದೆಡೆ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ, ಕಾರಾಗೃಹ ಡಿಜಿಪಿ ಮಾಲಿನಿ ಕೃಷ್ಣಮೂರ್ತಿ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಅಲ್ಲದೆ, ಮುಖ್ಯ ಅಧೀಕ್ಷಕನಾಗಿದ್ದ ಶೇಷಮೂರ್ತಿ, ಅಧೀಕ್ಷಕ ಮಲ್ಲಿಕಾರ್ಜುನ ಸ್ವಾಮಿ ಸೇರಿ 9 ಮಂದಿ ಅಮಾನತುಗೊಳಿಸಲಾಗಿತ್ತು.