Advertisement

ಜೈಲಿನ ಕೈದಿಗಳು ತಯಾರಿಸಿದ ಹವಾಯಿ ಚಪ್ಪಲಿ ಸದ್ಯದಲ್ಲೇ ಕೇರಳ ಮಾರುಕಟ್ಟೆ ಪ್ರವೇಶ

12:57 PM Nov 16, 2020 | sudhir |

ತಿರುವನಂತಪುರ: ಜೈಲಿನ ಕೈದಿಗಳು ತಯಾರಿಸಿದ ಹವಾಯಿ ಚಪ್ಪಲಿಗಳು ಸದ್ಯದಲ್ಲೇ ಕೇರಳ ಮಾರುಕಟ್ಟೆಗೆ ಪ್ರವೇಶ ನೀಡಲಿವೆ. ಅಲ್ಲದೆ, ಆನ್‌ಲೈನ್‌ ಮೂಲಕವೂ ಮನೆ ಬಾಗಿಲಿಗೆ ಬರಲಿವೆ!

Advertisement

ಹೌದು, ಪೂಜಾಪ್ಪುರ ಕೇಂದ್ರ ಕಾರಾಗೃಹದ ಕೈದಿಗಳು ಚಪ್ಪಲಿ ತಯಾರಿಕೆ ಆರಂಭಿಸಿದ್ದಾರೆ. ಈಗಾಗಲೇ ಆಹಾರ ಖಾದ್ಯ, ಆರ್ಗಾನಿಕ್‌ ಉತ್ಪನ್ನಗಳನ್ನು ತಯಾರಿಸಿ ಸೈ ಎನ್ನಿಸಿಕೊಂಡಿದ್ದ ಕೈದಿಗಳು ಈಗ “ಚಪ್ಪಲಿ’ ತಯಾರಿಕೆ ಮೂಲಕ ಹೊಸ ಹೆಜ್ಜೆ ಇಟ್ಟಿದ್ದಾರೆ.

“ಕೈದಿಗಳು ತಯಾರಿಸಿದ ಚಪ್ಪಲಿಗಳು ಫ್ರೀಡಂ ವಾಕ್‌ ಹೆಸರಿನಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ. ಪ್ರತಿ ಜೋಡಿ ಚಪ್ಪಲಿಗೆ 80 ರೂ. ನಿಗದಿಪಡಿಸಲಾಗಿದೆ’ ಎಂದು ಜೈಲಿನ ಸೂಪರಿಂಟೆಂಡೆಂಟ್‌ ನಿರ್ಮಲಾನಂದನ್‌ ನಾಯರ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next