Advertisement

ವಿಮಾನದಲ್ಲಿ  ಜೈ ಹಿಂದ್‌  

01:00 AM Mar 05, 2019 | Harsha Rao |

ಹೊಸದಿಲ್ಲಿ: ಸಿಬಂದಿ, ಪ್ರಯಾಣಿಕರಲ್ಲಿ ದೇಶಭಕ್ತಿ ಮೂಡಿಸುವ ಉದ್ದೇಶದಿಂದ ಪ್ರತಿ ಬಾರಿ ವಿಮಾನ ಘೋಷಣೆ ಮಾಡುವಾಗಲೂ ಜೈ ಹಿಂದ್‌ ಎಂದು ಘೋಷಿಸುವಂತೆ ಏರ್‌ ಇಂಡಿಯಾ ಸಿಬಂದಿಗೆ ಆಡಳಿತ ಮಂಡಳಿ ಆದೇಶ ನೀಡಿದೆ. 2016 ಮೇಯಲ್ಲೂ ಇದೇ ರೀತಿಯ ಸುತ್ತೋಲೆ ಹೊರಡಿಸಲಾಗಿತ್ತು. ಈ ಸನ್ನಿವೇಶದಲ್ಲಿ ಇದು ಮರು ನೆನಪಿಸುವ ಸುತ್ತೋಲೆ ಎಂದು ಹೇಳಲಾಗಿದೆ. ಪೈಲಟ್‌ಗಳು ವಿಮಾನ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರಿಗೆ ಮಾಹಿತಿ ನೀಡುವಾಗ ಪ್ರತಿ ಬಾರಿಯೂ ಕೊನೆಯಲ್ಲಿ ಜೈ ಹಿಂದ್‌ ಎಂದು ಹೇಳಬೇಕು. ಅಲ್ಲದೆ, ಪ್ರಯಾಣಿಕರು ವಿಮಾನವನ್ನೇರುವಾಗ ನಮಸ್ಕಾರ ಎಂದು ಗಗನಸಖೀಯರು ನಗುಮುಖದಿಂದ ಸ್ವಾಗತಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next