- ಜೆ ಎಲ್ ಆರ್ ನ ಹೊಸ ವಾಯು ಶುದ್ಧೀಕರಣ ತಂತ್ರಜ್ಞಾನವು ಮೊದಲಿಗಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿರಲಿದೆ.
- ಇದು ಶೇಕಡಾ 97 ರಷ್ಟು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳೊಂದಿಗೆ ಹೋರಾಡಬಲ್ಲದು.
- ಕೊರೊನಾವೈರಸ್ ವಿರುದ್ಧ ಶೇಕಡಾ 99.995 ರಷ್ಟು ಯಶಸ್ಸಿನ ಪ್ರಮಾಣವನ್ನು ಹೊಂದಿದೆ.
Advertisement
ಕೋವಿಡ್ ಸೋಂಕು ವಿಶ್ವವ್ಯಾಪಿ ಹರಡಿದಂದಿನಿಂದ ಹಲವು ಕಾರ್ಪೋರೇಟ್ ಸಂಸ್ಥೆಗಳು, ತಮ್ಮ ಉತ್ಪನ್ನಗಳಲ್ಲಿ ಆ್ಯಂಟಿ ವೈರಸ್ ಅಥವಾ ನಿರ್ದಿಷ್ಟವಾಗಿ ಕೋವಿಡ್ ವಿರುದ್ಧ ಹೋರಾಡುವ ಗುಣಗಳನ್ನು ಪರಿಚಯಿಸಿದೆ. ಸಾಬೂನು, ಸ್ಯಾನಿಟೈಸರ್ ಗಳು ಮಾತ್ರವಲ್ಲದೆ ಹಲ್ಲುಜ್ಜುವ ಬ್ರಶ್, ಎಸಿ, ಪೈಂಟ್, ಪ್ಲೈವುಡ್ ಎಲ್ಲವೂ ಸಾಂಕ್ರಾಮಿಕ ರೋಗದ ವಿರುದ್ಧ ಸಮರ ಸಾರಿದವು. ಅದಕ್ಕೀಗ ಹೊಸ ಸೇರ್ಪಡೆ ಜಾಗ್ವಾರ್ ಲ್ಯಾಂಡ್ ರೋವರ್ ಕಾರು!
Related Articles
Advertisement
ಅದಲ್ಲದೆ, ನಿರ್ದಿಷ್ಟವಾಗಿ ಕೋವಿಡ್ ವೈರಸ್ ನನ್ನು ಗುರಿಯಾಗಿಸಿಕೊಂಡು, ಟೆಕ್ಸೆಲ್ ಸಂಸ್ಥೆ ನಡೆಸಿದ ಪರೀಕ್ಷೆಯಲ್ಲಿ ಎರಡು ಗಂಟೆಗಳೊಳಗೆ ಶೇಕಡಾ. 99.995 ರಷ್ಟು ಯಶಸ್ಸಿನ ಪ್ರಮಾಣವನ್ನು ದಾಖಲಿಸುವಲ್ಲಿ ಯಶಸ್ವಿಯಾಗಿದೆ.
ಇದನ್ನು ಸರಳವಾಗಿ ಹೇಳುವುದಾದರೆ, ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ಪರಿಚಯಿಸಲು ಹೊರಟಿರುವ ಹೊಸ ನ್ಯಾನೋ ಎಕ್ಸ್ ತಂತ್ರಜ್ಞಾನವು ಹಳೆಯ ನ್ಯಾನೋ ತಂತ್ರಜ್ಞಾನಕ್ಕಿಂತ ಹತ್ತು ಪಟ್ಟು ಹೆಚ್ಚು ಪರಿಣಾಮಕಾರಿಯಾಗಿರಲಿದೆ. ಸಾಮಾನ್ಯವಾಗಿ ವಾಯು ಶುದ್ಧೀಕರಣ ಮಾಡುವುದರೊಂದಿಗೆ, ಈ ತಂತ್ರಜ್ಞಾನವು ಗಾಳಿಯಲ್ಲಿ ಹರಡಿರುವ ಯಾವುದೇ ವೈರಸ್ ಹಾಗೂ ಬ್ಯಾಕ್ಟೀರಿಯಾಗಳ ನಾಶ ಮಾಡುತ್ತದೆ.
ಈ ತಂತ್ರಜ್ಞಾನವು ಗಾಳಿಯಲ್ಲಿ ನೈಸರ್ಗಿಕವಾಗಿ ಹರಿಡಿಕೊಂಡಿರುವ ಹೈಡ್ರಾಕ್ಸಿಲ್ ರಾಡಿಕಲ್ಸ್ ಅಯಾನ್ ನನ್ನು ಬಳಸುತ್ತದೆ. ಆದರೆ ವಿಶೇಷ ಸಂಗತಿಯೆಂದರೆ, ಜಾಗ್ವಾರ್ ಲ್ಯಾಂಡ್ ರೋವರ್ ಸಂಸ್ಥೆಯು ವಿದ್ಯುತ್ ನನ್ನು ಬಳಸಿ ಹೈಡ್ರಾಕ್ಸಿಲ್ ರಾಡಿಕಲ್ಸ್ ನಂತಹ ಟ್ರಿಲಿಯನ್ ಅಯಾನ್ ಗಳನ್ನು ಕಾರಿನೊಳಗೆಯೇ ಉತ್ಪಾದಿಸಿ, ಅಲ್ಲಿ ಹರಡಿಕೊಂಡಿರುವ ವೈರಸ್ ಬ್ಯಾಕ್ಟೀರಿಯಾಗಳನ್ನು ಪತ್ತೆ ಹಚ್ಚಿ, ಅದನ್ನು ಕಾರಿನಿಂದ ಹೊಡೆದೋಡಿಸುವುದಲ್ಲದೆ, ಅದರ ಸಂತಾನೋತ್ಪತ್ತಿ ಮತ್ತು ಹರಡುವ ಸಾಮರ್ಥ್ಯವನ್ನು ಕೊನೆಗೊಳಿಸುತ್ತದೆ.
ಇನ್ನು, ಕಾರುಗಳಲ್ಲಿ ಆ್ಯಂಟಿವೈರಸ್ ತಂತ್ರಜ್ಞಾನವನ್ನು ಅಳವಡಿಸಲು ಕೆಲಸ ಮಾಡುತ್ತಿರುವ ಏಕೈಕ ಕಂಪನಿ ಜಾಗ್ವರ್ ಲ್ಯಾಂಡ್ ರೋವರ್ ಅಲ್ಲ. ಕಳೆದ ವರ್ಷ ಕೋವಿಡ್ -19 ಸಾಂಕ್ರಾಮಿಕ ಉಂಟಾದಾಗ, ಇಟಾಲಿಯನ್ ಕಾರಿನ ಇತರೆ ಭಾಗಗಳ ತಯಾರಕರಾದ ಯು ಎ ಎಫ್ ಐ ಫಿಲ್ಟರ್ಸ್, ಭಾರತದಲ್ಲಿ ಆ್ಯಂಟಿ-ವೈರಸ್ ಕ್ಯಾಬಿನ್ ಫಿಲ್ಟರ್ ನನ್ನು ಬಿಡುಗಡೆ ಮಾಡಿತ್ತು.
ನೀವು ಜೆ ಎಲ್ ಆರ್ ಕಾರಿನೊಳಗೆ ಕಾಲಿಡುವ ಮೊದಲು, ಇದನ್ನು ಸಕ್ರಿಯಗೊಳಿಸಬಹುದು. ಐ-ಪೇಸ್, ಲ್ಯಾಂಡ್‌ರೋವರ್, ಡಿಸ್ಕವರಿ ಮತ್ತು ಇವೋಕ್‌ನಂತಹ ಹೊಸ ಜನರೇಷನ್ ಮಾದರಿಗಳಲ್ಲಿ ಈ ತಂತ್ರಜ್ಞಾನವನ್ನು ಪರಿಚಯಿಸಲಾಗುವುದು ಎಂದು ಜೆ ಎಲ್ ಆರ್ ಸಂಸ್ಥೆ ಹೇಳಿಕೊಂಡಿದೆ. ಆದರೆ ತಂತ್ರಜ್ಞಾನವನ್ನು ಯಾವಾಗ ವಾಣಿಜ್ಯೀಕರಿಸಲಾಗುವುದು ಅಥವಾ ತಮ್ಮ ಸಂಸ್ಥೆಯ ಯಾವ ಕಾರಿನಲ್ಲಿ ಈ ವ್ಯವಸ್ಥೆಯನ್ನು ಮೊದಲು ಪರಿಚಯಿಸಲಾಗುವುದು ಎಂಬುದನ್ನು ಜೆ ಎಲ್ ಆರ್ ಇನ್ನೂ ದೃಢೀಕರಿಸಿಲ್ಲ.
“ನಮ್ಮ ಗ್ರಾಹಕರ ಯೋಗಕ್ಷೇಮ ನಮಗೆ ಅತ್ಯಂತ ಮಹತ್ವದ್ದಾಗಿದೆ. ಆದರಲ್ಲೂ ಈಗ, ಎಂದಿಗಿಂತಲೂ ಹೆಚ್ಚಾಗಿ, ನಾವೆಲ್ಲರೂ ನಮ್ಮ ಪ್ರೀತಿಪಾತ್ರರ ಉತ್ತಮ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ತಾಂತ್ರಿಕ ಪರಿಹಾರಗಳನ್ನು ಹುಡುಕುತ್ತಿದ್ದೇವೆ. ನಮ್ಮ ಪರಿಣಿತ ಎಂಜಿನಿಯರ್‌ಗಳು ಅಭಿವೃದ್ಧಿಪಡಿಸಿದ ಈ ಸ್ವತಂತ್ರ ಸಂಶೋಧನೆ, ಹಾನಿಕಾರಕ ವೈರಸ್ ಮತ್ತು ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡುತ್ತದೆ. ಕ್ಯಾಬಿನ್ ಒಳಗೆ ಸ್ವಚ್ಛ ಮತ್ತು ನೈರ್ಮಲ್ಯ ಪರಿಸರವನ್ನು ಒದಗಿಸುತ್ತದೆ ಎಂದು ನಮ್ಮ ಗ್ರಾಹಕರಿಗೆ ಭರವಸೆ ನೀಡಲು ಬಯಸುತ್ತೇವೆ”
ಡಾ. ಸ್ಟೀವ್ ಇಲೆ, ಜಾಗ್ವಾರ್ ಲ್ಯಾಂಡ್ ರೋವರ್‌ನ ಮುಖ್ಯ ವೈದ್ಯಕೀಯ ಅಧಿಕಾರಿ
ಇದನ್ನೂ ಓದಿ : ಈ ಸರ್ಕಾರಕ್ಕೆ ದೂರಾಲೋಚನೆಗಳೇ ಇಲ್ಲ : ರಾಜ್ಯ ಸರ್ಕಾರದ ಕೋವಿಡ್ ಪ್ಯಾಕೇಜ್ ಗೆ HDK ಆಕ್ರೋಶ