ನವದೆಹಲಿ: ಪಶ್ಚಿಮಬಂಗಾಳದ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ರಾಜಸ್ಥಾನದ ಹಿರಿಯ ರಾಜಕಾರಣಿ ಜಗದೀಪ್ ಧನ್ಕರ್ ಅವರು ಗುರುವಾರ (ಆಗಸ್ಟ್ 11) ದೇಶದ 14ನೇ ಉಪರಾಷ್ಟ್ರಪತಿಯಾಗಿ ಪ್ರಮಾಣವಚನ ಸ್ವೀಕರಿಸಿದರು.
ಇದನ್ನೂ ಓದಿ:ರಕ್ಷಾ ಬಂಧನ: ಗೃಹ ಸಚಿವರಿಗೆ ರಾಖಿ ಕಟ್ಟಿದ ಮಹಿಳಾ ಕಾನ್ ಸ್ಟೇಬಲ್ಸ್
ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಸರಳ ಸಮಾರಂಭದಲ್ಲಿ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಉಪರಾಷ್ಟ್ರಪತಿ ಧನ್ಕರ್ ಗೆ ಪ್ರತಿಜ್ಞಾವಿಧಿ ಬೋಧಿಸಿದರು. ಈ ವೇಳೆ ಅವರು ರಾಜ್ಯಸಭೆಯ ಸಭಾಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಆಗಸ್ಟ್ 6ರಂದು ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಅಭ್ಯರ್ಥಿ ಮಾರ್ಗರೇಟ್ ಆಳ್ವ ಅವರನ್ನು ಪರಾಜಯಗೊಳಿಸಿ ಗೆಲುವು ಸಾಧಿಸಿದ್ದರು. 1997ರ ನಂತರ ನಡೆದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಧನ್ಕರ್ ಅತೀ ಹೆಚ್ಚಿನ ಮತಗಳೊಂದಿಗೆ ಜಯ ಸಾಧಿಸಿದ್ದರು.
ಉಪರಾಷ್ಟ್ರಪತಿ ಚುನಾವಣೆಯಲ್ಲಿ ಜಗದೀಪ್ ಧನ್ಕರ್ ಅವರು ಎನ್ ಡಿಎ ಯೇತರ ಪಕ್ಷಗಳಾದ ನವೀನ್ ಪಟ್ನಾಯಕ್ ಅವರ ಬಿಜು ಜನತಾದಳ, ಜಗನ್ ಮೋಹನ್ ರೆಡ್ಡಿಯ ವೈಎಸ್ ಆರ್ ಕಾಂಗ್ರೆಸ್, ಮಾಯಾವತಿಯ ಬಹುಜನ್ ಸಮಾಜ ಪಕ್ಷಗಳು ಬೆಂಬಲ ನೀಡಿದ್ದವು.