Advertisement

ನಿನ್ನ ಮುಂಗುರುಳಲ್ಲಿ ಕೇಳಿಸಿದ್ದು ಸಾವಿರ ವೀಣೆಯ ಗಾನ

03:45 AM Apr 25, 2017 | |

ನೀ ನನ್ನ ಜೀವನದೊಳಗ ವಸಂತ ಋತುವಿನಂಗ ಬಂದಿ. ನಡು ಮಧ್ಯಾಹ್ನಕ್ಕ ನೆರಳಾಗಿದ್ದಿ. ಮಳಿ ಇಲ್ಲಾಂದ್ರುನೂ ಕಾಮನಬಿಲ್ಲು ಮೂಡಿದಂಗಾಗಿತ್ತು. ನನ್ನ ಭುಜದ ಮ್ಯಾಲೆ ತಲೆ ಹಾಕಿ ಕುಂತಾಕಿ ಭಾಳ ನಿಚ್ಚಳವಾಗಿ ನನ್ನ ಯಾಕ್‌ ಇಷ್ಟು ಹಚಗೊಂಡಿ? ಯಾಕ ಹಿಂಗ ಪ್ರೀತಿ ಮಾಡಕುಂತಿ? ಅಂತ ಪ್ರಶ್ನೆ ಹಾಕಿ ನನ್ನ ಕೈಯಾಗ ಕೈಯಿಟ್ಟೆ. ನಿನ್ನ ಕಣ್ಣೊಳಗ ಭರವಸೆಯ ನಿರೀಕ್ಷೆ ಕಾಣುತಿತ್ತು.

Advertisement

ಹಾಯ… ಪುಣ್ಯಾತಗಿತ್ತಿ…
ಎದಿಯೊಳಗ ಚುಚ್ಚಿದಂಗ ಆಗ್ತದ… ಮನಸು ಕದಡಿದಂಗ ಆಗ್ಲಿಕತ್ತದ… ಕನಸುಗಳು ಕರಗಿದಂಗ ಆಗೇದ… ಉಸಿರಿಗೆ ಉರಿ ಬಿದ್ದದ… ಭಾವನೆಗಳು ಗಾಳಿ ಜೊತಿ ಹಾರಿ ಹೋಗ್ಯಾವೇನ ಅನ್ನಿಸ್ಲಿಕತ್ತದ… ಕಣ್ಣಾಗ ತೂತು ಬಿದ್ದಂಗಾಗಿ ದಳದಳ ಇಳಿಯೋದು ಕಣ್ಣೀರ, ಏನ್‌ ರಕ್ತನಾ ತಿಳಿವಲ್ದಂಗಾಗೇದ. ನಿನಗ ಹೇಳಬೇಕಂದ್ರ ನಮ್ಮೂರ ಜನ ನನ್ನ ಖೂನ ಹಿಡಿವಲುÅ ಅಂದ್ರ ನೀ ನಂಬಂಗಿಲ್ಲ ಬಿಡು. ಇಂವ ಏನ ಆಗ್ಯಾನಪ? ಅನ್ಲಿಕತ್ತಾರ. ನಾ ಯಾಕ ಹಿಂಗ ಆಗೇನಿ ಅಂದ್ರ ನನಗ ತಿಳಿಲಾರದ್ದು ಏನೋ ಆಗೇತಿ ನನ್ನೊಳಗ, ಅದು ಮಾತ್ರ ಖಾತ್ರಿ ಐತಿ.

ಕಾರಣ ಏನಪ ಅಂದ್ರ… 
ಅವತ್‌ ನಿನ್ನ ನೋಡಿದ ದಿವಸದಿಂದ ನಿನ್ನ ಮ್ಯಾಲ ಮನಸಾತು. ನೀನು ನನಗ ಬಾಳ ಹಿಡಿಸಿದಿ. ಅದಕ್ಕ ಹಿಂಗ ಆಗೇದೇನೊ ಅಂತ ಹೇಳಿದ್ರ ತಪ್ಪಾಗೆôತಿ. ನನ್ನ ಪ್ರೀತಿನ ಹ್ಯಾಂಗ ಹೇಳೂದು, ಹೇಳಿದ್ರ ಹೂnಂ.. ಅಂತಿಯಾ? ಇಲ್ಲಾ.. ಅಂತ ತಿರಸ್ಕಾರ ಮಾಡ್ತಿಯಾ ಅನ್ನುವ ಗೊಂದಲದ ಸಂಕಟಕ್ಕ ಹಿಂಗಾಗ್ಲಿಕತ್ತದ ಅನ್ಕೊಳ್ಳಾಕ ನಾ ಇನ್ನು ನಿನ್ನ ಮುಂದ ಹೇಳೇ ಇಲ್ಲ. ಆದರೂ ಹಿಂಗೆಲ್ಲಾ ಆಗಾಕ ಖರೇ ಹಕೀಕತ್ತು ಅಂದ್ರ ನಾ ಕಂಡ ಕನಸು…

ಬೆಳಗ ಮುಂಜಾನಿ ಬಿದ್ದ ಕನಸಿನ್ಯಾಗ ಬಂದಾಕಿ ನೀ ಹೆಂಗಿದ್ದಿ ಅಂದ್ರ ಬೆಳ್ಳಿ ಚುಕ್ಕಿಯಂಗ ಮಿರಿಮಿರಿ ಮಿಂಚುತಿದ್ದಿ. ನಿನ್ನ ಕಣ್ಣು  ಫ‌ಳ್‌ ಫ‌ಳಾ ಅಂತ ಹೊಳಿತಿದುÌ. ನಿನ್‌ ನೋಡೆRಂತ ಕುಂತ ನನಿಗೆ ಹೊತ್ತು ಹೋಗಿದ್ದ ಗೊತ್ತಾಗ್ಲಿಲ್ಲ. ಬೆಳಕು ಹರೀತು. ನಿನ್ನ ಕಣ್ಣಾಗಿನ ಮಿಂಚಿಗೆ ನಾಚಿಗೆಂಡು ಚುಕ್ಕಿಗಳು ಮಾಯ ಆದುÌ. ನಿನ್ನ ಮುಂಗುರುಳಿಗೆ ತಂಗಾಳಿ ತಾಕಿ ಸಾವಿರ ವೀಣೆಗಳಿಂದ ಹೊಮ್ಮಿದ ಗಾನ ಕೇಳಿದಂಗಾತು. ನಿನ್ನ ಚೆಲುವಿಕೆ ನೋಡಿ ಆಗ ಹುಟ್ಟುತ್ತಿದ್ದ ಸೂರ್ಯ ಎಡವಿ ಬಿದ್ದು ಮೋಡದೊಳಗ ಸಿಕ್ಕಂಬಿಟ್ಟ. ಅವತ್ತು ಇಪ್ಪತ್ನಾಲ್ಕು ಗಂಟೆನೂ ಬೆಳದಿಂಗಳು. ನಿನ್ನ ಕಣ್ಣ ಮಿಂಚೇ ಇಡೀ ಜಗತ್ತನ್ನ ಬೆಳಗಿತು ಅನ್ನೋದು ನಂಬಲಿಕ್ಕ ಅಸಾಧ್ಯ ಆದರೂ ನಿಜ ಐತಿ.

ಬರೇ ಇಷ್ಟ ಆಗಿದ್ರ ನನಗ ಏನೂ ಆಗ್ತಿರಲಿಲ್ಲೇನಪ. ಆದ್ರ ನೀ ನನ್ನ ಜೀವನದೊಳಗ ವಸಂತ ಋತುವಿನಂಗ ಬಂದಿ. ನಡು ಮಧ್ಯಾಹ್ನಕ್ಕ ನೆರಳಾಗಿದ್ದಿ. ಮಳಿ ಇಲ್ಲಾಂದ್ರುನೂ ಕಾಮನಬಿಲ್ಲು ಮೂಡಿದಂಗಾಗಿತ್ತು. ನನ್ನ ಭುಜದ ಮ್ಯಾಲೆ ತಲೆ ಹಾಕಿ ಕುಂತಾಕಿ ಭಾಳ ನಿಚ್ಚಳವಾಗಿ ನನ್ನ ಯಾಕ್‌ ಇಷ್ಟು ಹಚಗೊಂಡಿ? ಯಾಕ ಹಿಂಗ ಪ್ರೀತಿ ಮಾಡಕುಂತಿ? ಅಂತ ಪ್ರಶ್ನೆ ಹಾಕಿ ನನ್ನ ಕೈಯಾಗ ಕೈಯಿಟ್ಟೆ. ನಿನ್ನ ಕಣ್ಣೊಳಗ ಭರವಸೆಯ ನಿರೀಕ್ಷೆ ಕಾಣುತಿತ್ತು. ಅವಾಗ ನಾನು ನನಗನಿಸಿದ್ದನ್ನ ನಿನಗಷ್ಟ ಕೇಳುವಂಗ ಪಿಸುಗುಟ್ಟಿದ್ದೆ. ಪ್ರೀತಿ ಅಂದ್ರ ಆಸೆ ಮತ್ತು ಕನಸುಗಳ ಮ್ಯಾಲೆ ಕಟ್ಟಿದ ಗೋಪುರ ಆಗಬಾರ್ದು. ಭರವಸೆಗಳ ಕಲ್ಲು ಜೋಡಿಸಿ ಭದ್ರವಾದ ಬುನಾದಿ ಹಾಕಿ ಪ್ರಾಮಾಣಿಕತೆ ಮತ್ತು ನಂಬಿಕೆ ಬೆರೆಸಿ ನಿರ್ಮಿಸಿದ ಸುಂದರವಾದ ಮಹಲಿನಂಗ ಇರಬೇಕು. ಮಹಲಿನ ಎಡಕ್ಕ ಚಂದ್ರ, ಬಲಕ್ಕ ಸೂರ್ಯ ಕಾವಲು ಕಾಯಬೇಕು. ನಮ್ಮಿಬ್ಬರ ಬದುಕಿನ ಚಂದದ ಹಗಲುಗಳಿಗೆ ಸೂರ್ಯನ ಬಿಸಿಲು ತಂಪಾಗಿರ್ತದ. ಮೌನದ ರಾತ್ರಿಗಳಿಗೆ ಬೆಳದಿಂಗಳಿಗೂ ಬಿಸಿ ಉಕ್ತಿರ್ತದ… ನಾ ಇನ್ನೂ ಏನೇನ ಹೇಳಾಂವ ಇದ್ದೆ, ನಿನಗ ನಾಚಿಕೆ ಬಂತೋ..? ಹುಸಿ ಮುನಿಸು ಬಂತೋ..? ಕೈ ಬಿಡಿಸಿಕೊಂಡು ಓಡ್ಲಾಕತ್ತಿದಿ. ನಿನ್‌ ಹಿಡಿಯಾಕ ಅಂತ ನಾನು ಎದ್ದೆ. ಎಚ್ಚರಾಗಿ ಮಂಚದ ಮ್ಯಾಲಿಂದ ಬಿದ್ದೆ.

Advertisement

ನಾ ಬಿದ್ದಿದ್ದಕ್ಕ ನಿನಗ ನಗು ಬರ್ಲಿಕತ್ತದ ಅಂತಾ ಗೊತ್ತು ನನಗ. ಜಾಸ್ತಿ ನಗಬ್ಯಾಡ. ಮತ್ತ ಮುತ್ತು ಉದುರಿದ್ರ ನನಗ ಲಾಸು! ಇರ್ಲಿ ಬಿಡು ನೀ ನಕ್ರ ನಾ ಏನ್‌ ಬೇಜಾರಾಗಂಗಿಲ್ಲ. ಇಷ್ಟ ಹುಚ್ಚು ಹಿಡಿಸಿಗೊಂಡಿನಿ ನಿನ್‌ ಮ್ಯಾಲ ಅಂದ್ರ ನೀ ಸಿಗಲಿಲ್ಲ ಅಂದ್ರ ನಾ ಹುಚ್‌c ಅಗೋದು ಗ್ಯಾರಂಟಿ ಐತಿ. ಅವಾಗ ಜನ ನನ್ನ ನೋಡಿ ನಗಬಾರ್ದಲ್ಲ ಅದಕ್ಕ ಈಗ ಹೇಳಾಕತ್ತೇನಿ. ನಿನಗ ಅರ್ಧ ಗೊತ್ತಾಗೇದ. ಇಷ್ಟತನ ಓದಿದ್ದು ಐತಲ್ಲ ಅದು ಒಂದು ಕನಸು, ನನಗ ಕನಸು ಅಂದ್ರ ಇಡ್ಲಿ ವಡಾ ಜಾಂಗೀರ್‌ ಜಿಲೇಬಿ ಇದ್ದಂಗ. ಪಂಚಪ್ರಾಣ. ಹಂಗಂತ ಇಡೀ ಜೀವನಾನ ಒಂದು ಕನಸು ಮಾಡಿಕೊಂಡಾನೇನ ಇಂವ ಅನ್ಕೋಬ್ಯಾಡ. ಆದರ ಜೀವನ ಒಂದು ಸುಂದರ ಕನಸಾಗಬೇಕು ಅನ್ನೂದು ನನ್ನ ದೊಡ್ಡ ಆಸೆ ಅದ.

ನನ್ನ ಎದಿ ಹೊಲದಾಗ ಬೆಳೆದ ಒಂದು ಮಧುರವಾದ ಕನಸಿನ ಹೂ ನಿನ್ನ ಮನಸಿನ ಮುಡಿಗೇರಸಾಕತ್ತಿನಿ, ವಲ್ಲೆ ಅನಬ್ಯಾಡ. ಅಷ್ಟಕ್ಕೂ ಈ ಕನಸ್ನಾ ನಾ ಮದುವಿ ಅಗೋವಾಕಿ ಮುಂದಷ್ಟ ಹೇಳಾಂವಿದ್ದೆ. ಅದು ನೀನಾ ಅಂತಾ ಚುಕ್ತಾ ಆದ ಮ್ಯಾಲ ಗಟ್ಟಿ ನಿರ್ಧಾರಕ್ಕ ಬಂದೇನಿ. ಅದೇನಪ ಇವುಂದು ಅಂಥ ದೊಡ್ಡ ಕನಸು! ಇಷ್ಟು ಬಿಲ್ಡಪ್‌ ಕೊಡ್ತಾನ ಅಂತೀಯೇನು? ಹೌದು ಮತ್ತ. ಅದೇನಂದ್ರ ಎಲ್ಲಾ ಹುಡುಗೂರು ತಮ್ಮ ಪ್ರೀತಿ ಹೇಳ್ಕೊಳ್ಳಾಕ ಹಿಂದ ಮುಂದ ನೋಡ್ತಾರ, ಮೊದುÉ ದೋಸ್ತಿ ಮಾಡೂನು ಅಂತಾರ, ಮೆಲ್ಲಕ ನನಗ ನಿನ್‌ ಮ್ಯಾಲ ಮನಸಾಗೇದ ಹೆಂಗ್‌ ಮಾಡೂನು ಅಂತ ಕೇಳ್ತಾರ. ಅಮೇಲೆ ಅನುಕೂಲ ಅನಾನುಕೂಲ ನೋಡ್ಕೊಂಡು ಮದುವಿ ಬಗ್ಗೆ ಮಾತಾಡ್ತಾರ. ನಾ ಹಂಗಲ್ಲ. ಮೊದಲು ಮದುವಿ ಆಗಾಂವ. ಅಮೇಲೆ ಪ್ರೀತಿ ಮಾಡಾಂವ. ಮುಂದ ಜೀವನಪೂರ್ತಿ ನಿನ್‌ ಕೂಟ ಗೆಳೆಯ ಆಗಿರಾಂವ ಅದೀನಿ. ಗಂಡ ಹೆಂಡತಿ ಅಂದ್ರ ಜಗಳ ಇರ್ತಾವ. ಪ್ರೇಮಿಗಳು ಅಂದ್ರ ವಿರಸಗಳು ಇರ್ತಾವ. ಆದರ ದೋಸ್ತಿ ಅನ್ನೂದು ಐತಲ್ಲ, ಅದರ ಮುಂದ ಯಾವುದೂ ಹತ್ತಂಗಿಲ್ಲ ಬಿಡ. ನಾ ಹೇಳಾಕತ್ತಿನಲ್ಲ ಇದು ಬರೀ ಮಾತಲ್ಲ ಮತ್ತ ಪ್ರಮಾಣ ಐತಿ ಪ್ರಮಾಣ. ನಮ್ಮ ಪ್ರೀತಿ ಮ್ಯಾಲ ಆಣಿ ಹಾಕ್ತೀನಿ ಮದುವಿ ನಂತರ ಗಂಡನ ಬದ್ಲಿ ಗೆಳೆಯನಾಗಿ ಸಿಗುವ ಹುಡುಗನನ್ನು ಕೈ ಹಿಡಿಯುವ ನಿನ್ನಂಥ ಪುಣ್ಯಾತಗಿತ್ತಿ ಯಾರೂ ಇಲ್ಲಾ ಅಂದ್ರ ತಪ್ಪಾಗಂಗಿಲ್ಲ. ನನ್ನ ಪ್ರೀತಿನಾ ಒಪ್ಕೊಂತೀಯಲ್ಲ..?

ಇಂತಿ ನಿನ್ನವ(ನಾದರೆ)
ಪುಣ್ಯಪುರುಷ

– ಸೋಮು ಕುದರಿಹಾಳ, ಗಂಗಾವತಿ

Advertisement

Udayavani is now on Telegram. Click here to join our channel and stay updated with the latest news.

Next