Advertisement

MUDA: ಸುಮ್ನಿರಯ್ಯ ಗೊತ್ತಿಲ್ದೆ ಮಾತಾಡ್ತಿಯಾ: ಸೋಮಣ್ಣಗೆ ಸಿದ್ದರಾಮಯ್ಯ ಪ್ರೀತಿಯ ಗದರಿಕೆ!

02:15 AM Nov 19, 2024 | Team Udayavani |

ಬೆಂಗಳೂರು: “ನನ್‌ ಮಾತು ಕೇಳಿದ್ರೆ ಇಷ್ಟೆಲ್ಲ ಆಗ್ತಿತ್ತಾ’ ಎಂದು ಕೇಂದ್ರ ಸಚಿವ ವಿ. ಸೋಮಣ್ಣ ಹೇಳಿದರೆ “ಏಯ್‌ ಸುಮ್ನಿರಯ್ಯ ಗೊತ್ತಿಲ್ದೆ ಏನೆಲ್ಲ ಮಾತಾಡ್ತಿಯಾ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರೀತಿಯಿಂದ ಗದರಿದ ಪ್ರಸಂಗ ನಡೆದಿದೆ.

Advertisement

ಇದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದ ವೇಳೆ ಸೋಮಣ್ಣ ಹಾಗೂ ಸಿದ್ದರಾಮಯ್ಯ ಆಕಸ್ಮಿಕವಾಗಿ ಮುಖಾಮುಖಿಯಾದರು. ಆಗ ಮುಡಾ ನಿವೇಶನ ಹಂಚಿಕೆ ವಿಚಾರ ಪ್ರಸ್ತಾವಿಸಿದ ಸೋಮಣ್ಣ, ಸಿದ್ದರಾಮಯ್ಯ ವಿಚಾರದಲ್ಲಿ ನನ್ನದು ಏನಿದ್ದರೂ ನೇರಮಾತು. ಸಣ್ಣ ವಿಚಾರಕ್ಕೆ ಇಷ್ಟೆಲ್ಲ ಆಗುತ್ತಿದೆ. ಅಂದೇ ಹೇಳಿದ್ದೆ. ನನ್ನ ಮಾತು ಕೇಳಿ ನಿವೇಶನ ಹಿಂದಿರುಗಿಸಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಸದನದಲ್ಲಿ ಇಷ್ಟು ಕೋಟಿ ಅಲ್ಲ, ಅಷ್ಟು ಕೋಟಿ ಎಂದು ಏಕೆ ಹೇಳಿದ್ರಿ. ನಾವು ಹೇಳಿದ್ದೆವಾ ನಿಮಗೆ ಹೇಳ್ಳೋಕೆ? ನಾನೇನು ಸದನದಲ್ಲಿ ಇದ್ನಾ?’ ಎಂದೂ ಪ್ರೀತಿಯಿಂದಲೇ ಸಿದ್ದರಾಮಯ್ಯ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು.

ಇದಕ್ಕೆ ಪ್ರೀತಿಯಿಂದಲೇ ಗದರಿದ ಸಿದ್ದರಾಮಯ್ಯ “ಏಯ್‌ ಗೊತ್ತಿಲ್ಲದೆ ಏನೆಲ್ಲಾ ಮಾತನಾಡ್ತೀಯಾ. ಅವರೆಲ್ಲಾ ಸುಳ್ಳು ಹೇಳ್ತಾವ್ರೆ. ಅದು ಹಾಗಲ್ಲಾ ನನ್ನ ಮಾತು ಕೇಳಯ್ಯ. ಭೂ ಸ್ವಾಧೀನ ಕಾಯ್ದೆ ಬಗ್ಗೆ ಕೇಳು, ಮುಡಾದಿಂದ ಪ್ರಕ್ರಿಯೆಯಲ್ಲಿ ಸಮಸ್ಯೆ ಆಗಿದೆ’ ಎಂದು ಪ್ರಕರಣದ ಬಗ್ಗೆ ಸಮಜಾಯಿಷಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next