Advertisement

ಇಟಾಲಿಯನ್‌ ಓಪನ್‌ ಟೆನಿಸ್‌ : ಸಿಸಿಪಸ್‌ ವಿರುದ್ಧ ಜೊಕೋ ಪಾಸ್‌

12:13 AM May 16, 2021 | Team Udayavani |

ರೋಮ್‌: ವಿಶ್ವದ ನಂ.1 ಟೆನಿಸಿಗ ನೊವಾಕ್‌ ಜೊಕೋವಿಕ್‌ “ಇಟಾಲಿಯನ್‌ ಓಪನ್‌ ಮಾಸ್ಟರ್-1000′ ಟೆನಿಸ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದ್ದಾರೆ. ಭಾರೀ ಸವಾಲೊಡ್ಡಿದ ಗ್ರೀಸ್‌ನ 5ನೇ ಶ್ರೇಯಾಂಕದ ಸ್ಟೆಫ‌ನೋಸ್‌ ಸಿಸಿಪಸ್‌ ವಿರುದ್ಧ ಜೊಕೋ 4-6, 7-5, 7-5 ಅಂತರದಿಂದ “ಪಾಸ್‌’ ಆದರು.

Advertisement

3 ಗಂಟೆ, 17 ನಿಮಿಷಗಳ ತನಕ ಸಾಗಿದ ಇವರಿಬ್ಬರ ಜಿದ್ದಾಜಿದ್ದಿ ಕಾಳಗ ರೋಮ್‌ ಟೆನಿಸ್‌ ಚರಿತ್ರೆಯ ಅತ್ಯಂತ ಥ್ರಿಲ್ಲಿಂಗ್‌ ಫೈಟ್‌ ಒಂದಕ್ಕೆ ಸಾಕ್ಷಿಯಾಯಿತು.

6 ಬಾರಿಯ ಚಾಂಪಿಯನ್‌ ಜೊಕೋವಿಕ್‌ ಅವರಿಗೆ ಇದು ಸತತ 8ನೇ ರೋಮ್‌ ಮಾಸ್ಟರ್ ಸೆಮಿಫೈನಲ್‌ ಆಗಿದೆ. ಇಲ್ಲಿ ಅವರು ತವರಿನ ಹೀರೋ, ಶ್ರೇಯಾಂಕ ರಹಿತ ಆಟಗಾರ ಲೊರೆಂಜೊ ಸೊನೆಗೊ ವಿರುದ್ಧ ಸ್ಪರ್ಧೆಗೆ ಇಳಿಯಲಿದ್ದಾರೆ. ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ಸೊನೆಗೊ ರಶ್ಯದ ಆ್ಯಂಡ್ರೆ ರುಬ್ಲೇವ್‌ ವಿರುದ್ಧ 3-6, 6-4, 6-3 ಅಂತರದ ಜಯ ಸಾಧಿಸಿದರು. ಇದು ಸೊನೆಗೊ ಕಾಣುತ್ತಿರುವ ಮೊದಲ ಮಾಸ್ಟರ್-1000 ಸೆಮಿಫೈನಲ್‌.

Advertisement

Udayavani is now on Telegram. Click here to join our channel and stay updated with the latest news.

Next