Advertisement

ಇಟಾಲಿಯನ್‌ ಓಪನ್‌ ಟನಿಸ್‌ : ನಡಾಲ್‌-ಒಪೆಲ್ಕ ಸೆಮಿಫೈನಲ್‌ ಸೆಣಸಾಟ

12:41 AM May 15, 2021 | Team Udayavani |

ರೋಮ್‌: ಇಟಾಲಿಯನ್‌ ಓಪನ್‌ ಟೆನಿಸ್‌ ಸೆಮಿಫೈನಲ್‌ನಲ್ಲಿ 9 ಬಾರಿಯ ಚಾಂಪಿಯನ್‌ ರಫೆಲ್‌ ನಡಾಲ್‌ ಮತ್ತು ಅಮೆರಿಕದ ಬಿಗ್‌ ಸರ್ವಿಂಗ್‌ ಖ್ಯಾತಿಯ ರಿಲೀ ಒಪೆಲ್ಕ ಮುಖಾಮುಖೀ ಆಗಲಿದ್ದಾರೆ.

Advertisement

ಕ್ವಾರ್ಟರ್‌ ಫೈನಲ್‌ ಹಣಾಹಣಿಯಲ್ಲಿ ರಿಲೀ ಒಪೆಲ್ಕ ಆರ್ಜೆಂಟೀನಾದ ಅರ್ಹತಾ ಆಟಗಾರ ಪೆಡ್ರಿಕೊ ಡೆಲ್ಬೊನಿಸ್‌ ಅವರನ್ನು 7-5, 7-6 (2) ಅಂತರದಿಂದ ಪರಾಭವಗೊಳಿಸಿದರು. ಇದು ಒಪೆಲ್ಕ ಕಾಣುತ್ತಿರುವ ಮೊದಲ ಮಾಸ್ಟರ್ ಸೆಮಿಫೈನಲ್‌.

ಇನ್ನೊಂದು ಕ್ವಾರ್ಟರ್‌ ಫೈನಲ್‌ನಲ್ಲಿ ರಫೆಲ್‌ ನಡಾಲ್‌ 2017ರ ಚಾಂಪಿಯನ್‌ ಅಲೆಕ್ಸಾಂಡರ್‌ ಜ್ವೆರೇವ್‌ ವಿರುದ್ಧ 6-3, 6-4 ನೇರ ಸೆಟ್‌ಗಳಿಂದ ಗೆದ್ದು ಬಂದರು.

ಪೆಟ್ರಾ ಮಾರ್ಟಿಕ್‌ ಮುನ್ನಡೆ
ವನಿತಾ ವಿಭಾಗದಿಂದ ಸೆಮಿಫೈನಲ್‌ ಪ್ರವೇಶಿಸಿದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆ ಕ್ರೊವೇಶಿಯಾದ ಪೆಟ್ರಾ ಮಾರ್ಟಿಕ್‌ ಅವರದಾಗಿದೆ. ಮಾರ್ಟಿಕ್‌ 7-5, 6-4 ಅಂತರದಿಂದ ಅಮೆರಿಕದ ಜೆಸ್ಸಿಕಾ ಪೆಗ್ಯುಲಾ ಅವರನ್ನು ಮಣಿಸಿದರು.

ಪೆಟ್ರಾ ಮಾರ್ಟಿಕ್‌ ಅವರ ಎದುರಾಳಿ 2019ರ ರೋಮ್‌ ಚಾಂಪಿಯನ್‌ ಕ್ಯಾರೋಲಿನಾ ಪ್ಲಿಸ್ಕೋವಾ. ಅವರು ತೀವ್ರ ಹೋರಾಟ ನೀಡಿದ ಜೆಲೆನಾ ಒಸ್ಟಾಪೆಂಕೊ ವಿರುದ್ಧ 4-6, 7-5, 7-6 (7-1) ಅಂತರದ ಗೆಲುವು ಸಾಧಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next