Advertisement

RBI: ಇನ್ನು ಪರ್ಸನಲ್‌ ಲೋನ್‌ ಸಿಗೋದು ಸ್ವಲ್ಪ ಕಷ್ಟ- ಆರ್‌ಬಿಐನಿಂದ ಹೊಸ ನಿಯಮ

11:56 PM Nov 16, 2023 | Team Udayavani |

ಮುಂಬಯಿ: ಬ್ಯಾಂಕ್‌ಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಂದ (ಎನ್‌ಬಿಎಫ್ಸಿ) ಪರ್ಸ ನಲ್‌ ಲೋನ್‌ ಪಡೆಯಲು ಉದ್ದೇಶಿಸಿದ್ದೀರಾ? ಹಾಗಿದ್ದರೆ ಅದು ಸಿಗುವುದು ಕೊಂಚ ಕಷ್ಟವಾಗಲಿದೆ. ಅದಕ್ಕೆ ಸಂಬಂಧಿಸಿದ ನಿಯಮಗಳನ್ನು ಆರ್‌ಬಿಐ ಕಠಿಣಗೊಳಿಸಿರುವುದರಿಂದ ಈ ಸ್ಥಿತಿ ಉಂಟಾಗಲಿದೆ. ಪರ್ಸನಲ್‌ ಲೋನ್‌ ಅನ್ನು ಭದ್ರತೆ ಇಲ್ಲದ (ಅನ್‌ ಸೆಕ್ಯೂರ್ಡ್‌ ಲೋನ್‌) ಎಂದು ಪರಿಣಿಸಿದೆ. ಹೀಗಾಗಿ, ಬ್ಯಾಂಕ್‌ಗಳಿಗೆ ಇರುವ ರಿಸ್ಕ್ ಫ್ಯಾಕ್ಟರ್‌ ಪ್ರಮಾಣವನ್ನು ಶೇ.25ರಿಂದ ಶೇ.150ಕ್ಕೆ ಏರಿಕೆ ಮಾಡಿದೆ. ಆದರೆ, ಚಿನ್ನ ಮತ್ತು ಚಿನ್ನಾಭರಣ ಸಾಲ ಮೇಲೆ ಇರುವ ಸಾಲದ ಮೇಲಿನ ರಿಸ್ಕ್ ಫ್ಯಾಕ್ಟರ್‌ ಶೇ.100 ಹಾಗೆಯೇ ಮುಂದುವರಿಯಲಿದೆ. ಈ ನಿಯಮ ಗೃಹ, ಶಿಕ್ಷಣ ಮತ್ತು ವಾಹನ ಸಾಲಗಳ ಮೇಲೆ ಅನ್ವಯವಾಗುವುದಿಲ್ಲ.

Advertisement

ಇದೇ ವೇಳೆ, ದೇಶದಲ್ಲಿನ ಅರ್ಥ ವ್ಯವಸ್ಥೆ ಸಂಪೂರ್ಣ ಪ್ರಮಾಣದಲ್ಲಿ ಬಲವರ್ಧನೆ ಗೊಂಡಿಲ್ಲ ಎಂದು ಆರ್‌ಬಿಐ ಹೇಳಿದೆ. ವಿತ್ತೀಯ ನೀತಿಯ ಕ್ರಮ ಹಾಗೂ ಪೂರೈಕೆ ವ್ಯವಸ್ಥೆಯ ಖಾತರಿಯು ಚಿಲ್ಲರೆ ಹಣದುಬ್ಬರ ವನ್ನು ಸಮತೋಲನದಲ್ಲಿ ಇರಿಸಿದೆ. ನಾವಿನ್ನೂ ಸಮಸ್ಯೆಯಿಂದ ಸಂಪೂರ್ಣ ಹೊರಬಂದಿಲ್ಲ ಅರ್ಥವ್ಯವಸ್ಥೆ ಸಬಲಗೊಳ್ಳಲು ಮತ್ತಷ್ಟು ದೂರ ಶ್ರಮಿಸಬೇಕಿದೆ ಎಂದು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಹೇಳಿದೆ. ಕೊರೊನಾ ಬಿಕ್ಕಟ್ಟಿನ ಬಳಿಕ ದೇಶದ ಆರ್ಥಿಕ ಚೇತರಿಕೆ ಕುರಿತಂತೆ ಆರ್‌ಬಿಐ ಡೆಪ್ಯೂಟಿ ಗವರ್ನರ್‌ ಮೈಕಲ್‌ ದೇಬಬ್ರತ ಪಾತ್ರ ನೇತೃತ್ವದ ತಂಡ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ದೇಶದ ಸೇವಾವಲಯದ ವಿಸ್ತರಣೆ ಹೆಚ್ಚಿದ್ದು, 2023-24ರ ಅವಧಿಯಲ್ಲಿ ದೇಶದ ಜಿಡಿಪಿಯಲ್ಲಿ ಗಣನೀಯ ಏರಿಕೆಯಾಗುವ ನಿರೀಕ್ಷೆ ಇದೆ ಎನ್ನಲಾಗಿದೆ. ಇದೇ ವೇಳೆ ಅರ್ಥವ್ಯವಸ್ಥೆ ಇನ್ನೂ ಸದೃಢವಾಗಿಲ್ಲ, 2022-23ರ ಮೊದಲ 7 ತಿಂಗಳಲ್ಲಿ ಚಿಲ್ಲರೆ ಹಣದುಬ್ಬರ ಕಡಿಮೆಯಾಗಿದೆ ಭವಿಷ್ಯದಲ್ಲಿ ಹಣದುಬ್ಬರ ನಿಯಂತ್ರಣದಲ್ಲಿಡಲು ಮತ್ತಷ್ಟು ದೂರ ಸಾಗಬೇಕಿದೆ ಎಂದೂ ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next