Advertisement

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

12:59 AM Nov 22, 2024 | Team Udayavani |

ಒಟ್ಟಾವಾ: ಕೆನಡಾದಲ್ಲಿ ಹಿಂದೂಗಳು ಮತ್ತು ದೇವಾಲಯಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಖಲಿಸ್ಥಾನಿ ಉಗ್ರರು ಬೆದರಿಕೆ ಹಾಕಿದ್ದಾರೆ. ನ.23ರಂದು ಓಕ್‌ವಿಲ್ಲೆ ವೈಷ್ಣೋದೇವಿ ದೇವಾಲಯ ಮತ್ತು ನ.30ರಂದು ಸ್ಕಾರ್‌ಬೋರ್ಗ್‌ ಲಕ್ಷ್ಮೀನಾರಾಯಣ ಮಂದಿರದಲ್ಲಿ ಜೀವಂತ ಪ್ರಮಾಣಪತ್ರ ವಿತರಣೆ ಶಿಬಿರಗಳನ್ನು ಆಯೋಜಿಸಲಾಗಿದೆ. 2 ಕಾರ್ಯಕ್ರಮಗಳ ಮೇಲೆ ದಾಳಿ ನಡೆಸುವ ಬೆದರಿಕೆಯನ್ನು ಖಲಿಸ್ಥಾನಿಗಳು ಒಡ್ಡಿದ್ದಾರೆ. ಈ ಬಗ್ಗೆ ಪ್ರಧಾನಿ ಜಸ್ಟಿನ್‌ ಟ್ರಾಡೊ ನೇತೃತ್ವದ ಸರಕಾರ ಕ್ರಮ ಕೈಗೊಂಡಿಲ್ಲ ಎಂದು ಕೆನಡಾದ ಹಿಂದೂಗಳು ಆರೋಪಿಸಿದ್ದಾರೆ. 2 ಕಾರ್ಯಕ್ರಮಗಳ ಮೂಲಕ ಸಿಕ್ಖ್ ಸಮುದಾಯದ ವಿರುದ್ಧ ಒತ್ತಡ ಹೇರಲು ಬಳಸಿಕೊಳ್ಳುತ್ತಿದ್ದಾರೆ ಎಂದು ಖಲಿಸ್ಥಾನಿ ಉಗ್ರರ ಆರೋಪ.

Advertisement

ನಿಜ್ಜರ್‌ ಹತ್ಯೆ ಮೋದಿಗೆ ಗೊತ್ತಿತ್ತು: ಕೆನಡಾ ವರದಿಗೆ ಭಾರತ ತೀವ್ರ ಆಕ್ರೋಶ
ಹೊಸದಿಲ್ಲಿ: ಖಲಿಸ್ಥಾನಿ ಉಗ್ರ ಹರ್ದೀಪ್‌ ಸಿಂಗ್‌ ನಿಜ್ಜರ್‌ ಹತ್ಯೆ ಪ್ರಧಾನಿ ನರೇಂದ್ರ ಮೋದಿಗೆ ತಿಳಿದಿತ್ತು ಎಂಬ ಕೆನಡಾದ ವರದಿಗೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. “ಇದು ಕಳಂಕ ಬಳಿಯುವ ಹಾಸ್ಯಾಸ್ಪದ ಕೆಲಸ’ ಎಂದಿದೆ. ಕೆನಡಾದ ರಾಜತಾಂತ್ರಿಕ ಅಧಿಕಾರಿಗಳ ಮಾಹಿತಿಯಂತೆ ಅಲ್ಲಿನ ಮಾಧ್ಯಮಗಳು ನಿಜ್ಜರ್‌ ಹತ್ಯೆ ವಿಚಾರ ಭಾರತದ ಪ್ರಧಾನಿ, ರಾಷ್ಟ್ರೀಯ ಭದ್ರತೆ ಸಲಹೆಗಾರ ಮತ್ತು ವಿದೇಶಾಂಗ ಸಚಿವರಿಗೆ ಗೊತ್ತಿತ್ತು ಎಂದು ವರದಿ ಮಾಡಿವೆ. ಇದಕ್ಕೆ ತಿರುಗೇಟು ನೀಡಿ ರುವ ವಿದೇಶಾಂಗ ಇಲಾಖೆ ವಕ್ತಾರ ಜೈಸ್ವಾಲ್‌ ಕೆನಡಾದ ಈ ಕೃತ್ಯದಿಂದ ಹದಗೆಟ್ಟಿರುವ 2 ದೇಶಗಳ ಬಾಂಧವ್ಯಕ್ಕೆ ಮತ್ತಷ್ಟು ಧಕ್ಕೆಯಾಗಲಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next