Advertisement

ಪ್ರಾಮಾಣಿಕರನ್ನು ಹುಡುಕುವುದೇ ಕಷ್ಟ: ಚಿಮೂ

11:49 AM Mar 23, 2018 | |

ಬೆಂಗಳೂರು: ಕನ್ನಡಪರ ಹೋರಾಟಗಾರರಲ್ಲಿ ಪ್ರಾಮಾಣಿಕರನ್ನು ಹುಡುಕುವುದೇ ಕಷ್ಟವಾಗಿದೆ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದಮೂರ್ತಿ ಕಳವಳ ವ್ಯಕ್ತಪಡಿಸಿದರು.

Advertisement

ಕಸಾಪದಿಂದ ಗುರುವಾರ ಹಮ್ಮಿಕೊಂಡಿದ್ದ ಕನ್ನಡಪರ ಹೋರಾಟಗಾರ ಮ.ರಾಮಮೂರ್ತಿ ಅವರ ಜನ್ಮಶತಮಾನೋತ್ಸವ ಹಾಗೂ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು. ಇವತ್ತಿನ ಕನ್ನಡಪರ ಹೋರಾಟಗಳು ವಸೂಲಿ ಎಂಬಂತಾಗಿದೆ. ಕತ್ತೆ, ಕುದುರೆ ಮೇಲೆ ಬಂದು ಹೋರಾಟ ಮಾಡುತ್ತಾರೆ. ಕೆಲವೊಮ್ಮೆ ಅವರೇ ಕತ್ತೆ, ಕುದುರೆ ಅಗಿ ಬಿಡುತ್ತಾರೆ ಎಂದರು.

ಬೆಳಗಾವಿ ಕರ್ನಾಟಕದ ರಾಜಧಾನಿ ಆಗಬೇಕಿತ್ತು. ರಾಜಧಾನಿಯಾಗಿ ನಿರ್ಮಿಸಲು ಬೇಕಾದ ಎಲ್ಲಾ ರೀತಿಯ ಸಂಪತ್ತು ಹಾಗೂ ಸೌಲಭ್ಯ ಅಲ್ಲಿತ್ತು. ದುರ್ದೈವ ನಮ್ಮ ಕಿತ್ತಾಟದಿಂದಲೇ ಅದು ಸಾಧ್ಯವಾಗಿಲ್ಲ. 49 ವರ್ಷ ಬದುಕಿದ ಮ.ರಾಮಮೂರ್ತಿಯವರು ಕನ್ನಡದಲ್ಲಿ ಹೊಸ ಅಲೆ ಮೂಡಿಸಿದ್ದಾರೆ. ಕನ್ನಡ ಪರ ಹೋರಾಟ ಮಾಡಿದ್ದು ಮಾತ್ರವಲ್ಲ ಡಬ್ಬಿಂಗ್‌ ವಿರೋಧಿಯಾಗಿದ್ದರು ಎಂದು ಹೇಳಿದರು.

ದತ್ತಿ ಪ್ರಶಸ್ತಿ ವಿಜೇತ ಕನ್ನಡಪರ ಹೋರಾಟಗಾರ ಅಶೋಕ್‌ ಚಂದರಗಿ, ದತ್ತಿ ಹಣದಲ್ಲಿ 10 ಸಾವಿರ ಕಮಲಮ್ಮ ಅವರಿಗೆ ಮತ್ತು 15 ಸಾವಿರ ಬೆಳಗಾವಿಯ ಕನ್ನಡ ಮಾಧ್ಯಮದಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ನೀಡುವುದಾಗಿ ಘೋಷಿಸಿದರು. ಕಮಲಮ್ಮ ಮ.ರಾಮಮೂರ್ತಿ ಅವರಿಗೆ ಗೌರವಾರ್ಪಣೆ ಮಾಡಲಾಯಿತು. ಸಾಹಿತಿ ಡಾ.ಬಾಬು ಕೃಷ್ಣಮೂರ್ತಿ, ಕಸಾಪ ಅಧ್ಯಕ್ಷ ಡಾ.ಮನುಬಳಿಗಾರ್‌, ಕನ್ನಡ ಗೆಳೆಯರ ಬಳಗದ ಸಂಚಾಲಕ ರಾ.ನಂ.ಚಂದ್ರಶೇಖರ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next