Advertisement

ಇಸ್ರೋ ರಾಕೆಟ್‌ ಮೂರೇ ದಿನಗಳಲ್ಲಿ  ಸಿದ್ಧ

06:00 AM Nov 23, 2017 | Team Udayavani |

ಹೊಸದಿಲ್ಲಿ: ಸೋಮವಾರ ಉಪಗ್ರಹ ಉಡಾವಣೆ ಮಾಡಬೇಕೆ? ಶುಕ್ರವಾರದಿಂದ ರವಿವಾರದ ಒಳಗಾಗಿ ಸಿದ್ಧಗೊಳ್ಳಲಿದೆ ಉಡಾವಣಾ ರಾಕೆಟ್‌. ಇದು ಇಸ್ರೋದ ಹೊಸ ಯೋಜನೆ. ಜತೆಗೆ ಮುಂದಿನ ದಿನಗಳಲ್ಲಿ ಮಿತವ್ಯಯಿ ಉಪಗ್ರಹಗಳನ್ನು ನಭಕ್ಕೆ ಕಳುಹಿಸುವುದಕ್ಕೂ ಈ ಯೋಜನೆ ನೆರವಾಗಲಿದೆ.

Advertisement

ಸಾಮಾನ್ಯವಾಗಿ ಉಪಗ್ರಹ ಉಡಾವಣಾ ರಾಕೆಟ್‌ ಜೋಡಿಸಲು 30-40 ದಿನಗಳು ಬೇಕಾಗುತ್ತವೆ. ಆದರೆ ಹೊಸ ಮಾದರಿಯ ರಾಕೆಟ್‌ ಸಿದ್ಧಗೊಳಿಸಲು ಕೇವಲ ಮೂರು ದಿನ ಸಾಕು. ವೆಚ್ಚವೂ ಕಡಿಮೆ. ಪೋಲಾರ್‌ ಸ್ಯಾಟಲೈಟ್‌ ಲಾಂಚ್‌ ವೆಹಿಕಲ್‌ನ ನಿರ್ಮಾಣದ ವೆಚ್ಚಕಿಂತ ಹತ್ತನೇ ಒಂದರಷ್ಟು ವೆಚ್ಚ ಸಾಕು. ಪಿಎಸ್‌ಎಲ್‌ವಿ ನಿರ್ಮಾಣಕ್ಕೆ ವಿಶ್ವಾದ್ಯಂತ ಸರಾಸರಿ 150 ಕೋಟಿ ರೂ.ಗಳಿಂದ 500 ಕೋಟಿ ರೂ. ಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next