ನವದೆಹಲಿ: ಭಾರತದ ಮಹತ್ವಾಕಾಂಕ್ಷೆಯ “ಗಗನಯಾನ’ ನೌಕೆಯ ಉಡಾವಣೆಗೂ ಮುನ್ನ ಡೇಟಾ ರಿಲೇ ಸ್ಯಾಟಲೈಟ್ಟನ್ನು ಹಾರಿಬಿಡಲು ಇಸ್ರೋ ನಿರ್ಧರಿಸಿದೆ.
ಈ ಉಪಗ್ರಹ ಮಾನವ ಸಹಿತ ಗಗನಯಾನ ನೌಕೆಯನ್ನು ಟ್ರ್ಯಾಕ್ ಮಾಡಲಿದೆ. “ನಾವೇ ನಿರ್ಮಿಸಿದ ಉಪಗ್ರಹವನ್ನು ಹಾರಿಬಿಡಲು ಯೋಜನೆ ಆರಂಭಿಸಿದ್ದೇವೆ. ಭಾರತದ ಚೊಚ್ಚಲ ಮಾನವ ಬಾಹ್ಯಾಕಾಶ ಹಾರಾಟಕ್ಕೂ ಮುನ್ನ ಡೇಟಾ ರಿಲೇ ಸ್ಯಾಟಲೈಟ್ ಕಾರ್ಯಾಚರಣೆ ಆರಂಭಿಸಲಿದೆ’ ಎಂದು ಇಸ್ರೋ ತಿಳಿಸಿದೆ.
ಇದು ನೌಕೆಯ ಟ್ರ್ಯಾಕಿಂಗ್ ಕುರಿತಾದ ಇಂಚಿಂಚೂ ಮಾಹಿತಿಗಳನ್ನು ಇಸ್ರೋ ಸಂಪರ್ಕಿತ ಜಗತ್ತಿನ ವಿವಿಧ ಗ್ರೌಂಡ್ ಸ್ಟೇಷನ್‌ಗಳಿಗೆ ರವಾನಿಸಲಿದೆ. ಪ್ರಸ್ತುತ ಇಸ್ರೋ ಮಾರಿಷಸ್, ಬ್ರುನೈ ಮತ್ತು ಬಿಯಾಕ್, ಇಂಡೋನೇಷ್ಯಾಗಳಲ್ಲಿ ಗ್ರೌಂಡ್ ಸ್ಟೇಷನ್‌ಗಳನ್ನು ಬಳಸಿಕೊಳ್ಳುತ್ತಿದೆ.
ಇದನ್ನೂ ಓದಿ :ಕರ್ಫ್ಯೂನಲ್ಲೂ ಉಡುಪಿ ಜಿಲ್ಲೆಯಾದ್ಯಂತ 644 ಜೋಡಿಗೆ ಕಂಕಣಭಾಗ್ಯ
ಇಸ್ರೋದ “ಗಗನಯಾನ’ 2 ಹಂತಗಳಲ್ಲಿ ನೆರವೇರಲಿದ್ದು, ಈ ವರ್ಷದ ಡಿಸೆಂಬರ್‌ನಲ್ಲಿ ಮಾನವರಹಿತ ನೌಕೆ ಉಡಾವಣೆಗೊಳ್ಳಲಿದೆ. 2023ರಲ್ಲಿ ಮಾನವ ಸಹಿತ ಗಗನಯಾನ ನೌಕೆ ನಭಕ್ಕೆ ಚಿಮ್ಮಲಿದೆ.