ಶ್ರೀಹರಿಕೋಟ: ಪರಿಸರದ ಮೇಲೆ ನಿಗಾ ಇರಿಸುವ ನಿಟ್ಟಿನಲ್ಲಿ 175 ಕೆ.ಜಿ. ತೂಕದ ಭೂ ವೀಕ್ಷಣಾ ಉಪಗ್ರಹ ಇಒಎಸ್ -08(DEMOSAT) ಅನ್ನು ಇಸ್ರೋ (ISRO) ಶುಕ್ರವಾರ (ಆ.16ರಂದು) ಯಶಸ್ವಿಯಾಗಿ ಉಡಾವಣೆ ಮಾಡುವ ಮೂಲಕ ಜಾಗತಿಕ ಸೆಟಲೈಟ್ ಮಾರುಕಟ್ಟೆ ಮೇಲೆ ದೃಷ್ಟಿ ಇಟ್ಟಂತಾಗಿದೆ.
ಸಣ್ಣ ಉಪಗ್ರಹ ಉಡಾವಣ ವಾಹನ(ಎಸ್‌ಎಸ್‌ಎಲ್‌ವಿ) ಈ ಉಪಗ್ರಹವನ್ನು ಹೊತ್ತೊಯ್ದಿದ್ದು. ಇದು ಎಸ್‌ಎಸ್‌ಎಲ್‌ವಿಯ ಮೂರನೇ ಹಾಗೂ ಕೊನೆಯ ಉಡಾವಣೆಯಾಗಿರಲಿದೆ.
ಶುಕ್ರವಾರ ಚೆನ್ನೈನಿಂದ ಪೂರ್ವಕ್ಕೆ 135 ಕಿಲೋ ಮೀಟರ್ ದೂರದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬೆಳಗ್ಗೆ 9.15ಕ್ಕೆ ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು ಎಂದು ವರದಿ ತಿಳಿಸಿದೆ.
ಎಲೆಕ್ಟ್ರೋ ಆಪ್ಟಿಕಲ್ ಇನ್ಪ್ರಾರೆಡ್ ಪೇಲೋಡ್ ( EOIR), ಗ್ಲೋಬಲ್ ನ್ಯಾವಿಗೇಶನ್ ಸೆಟಲೈಟ್ ಸಿಸ್ಟಮ್ ರಿಫ್ಲೆಕ್ಟೋಮೆಟ್ರಿ ಪೇಲೋಡ್ (GNSS-R) ಮತ್ತು Siv UV ಡೋಸಿಮೀಟರ್ ಸೇರಿದಂತೆ ಮೂರು ಪೇಲೋಡ್ಸ್ ಗಳನ್ನು ಸೆಟಲೈಟ್ ಹೊತ್ತೊಯ್ದಿದೆ.
ಎಸ್ ಎಸ್ೆಲ್ ವಿಯು ಇನ್ನು ಮುಂದೆ ಖಾಸಗಿ ಸಂಸ್ಥೆಗಳ ಹಾರಾಟಕ್ಕಷ್ಟೇ ಉಪಯೋಗಿಸಲ್ಪಡುತ್ತದೆ ಎಂದು ಇಸ್ರೋ ತಿಳಿಸಿದೆ.
ಎಸ್ಸೆಸ್‌ಎಲ್‌ವಿ ವಿಶೇಷತೆಗಳು
*ಕೇವಲ 2 ಮೀ. ವ್ಯಾಸ ಹಾಗೂ 34 ಮೀ. ಉದ್ದ
*3 ಘನ , 1 ದ್ರವ ಇಂಧನ ಹಂತದಲ್ಲಿ ವೇಗ ನಿರ್ವಹಣೆ
*2023ರಲ್ಲಿ 450 ಕಿಮೀ ಕಕ್ಷೆಯಲ್ಲಿ 3 ಉಪಗ್ರಹ ಉಡಾವಣೆ ಯಶಸ್ವಿ