Advertisement

ಚಂದ್ರಯಾನ-3 ರ ಪ್ರಮುಖ ಕ್ರಯೋಜನಿಕ್‌ ಇಂಜಿನ್‌ ಪರೀಕ್ಷೆ ಸಫಲ : ಇಸ್ರೋ

02:14 PM Feb 28, 2023 | Team Udayavani |

ಬೆಂಗಳೂರು: ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯೋಜನೆಗೆ ಸಂಬಂಧಿಸಿದ ಎಲ್ಲಾ ಪರೀಕ್ಷೆಗಳನ್ನೂ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯಶಸ್ವಿಯಾಗಿ ನಡೆಸಿದೆ ಎಂದು ಹೇಳಿದೆ.

Advertisement

ಚಂದ್ರನ ಅಂಗಳಕ್ಕೆ ಉಡಾಯಿಸಲು ಬಳಸುವ ರಾಕೆಟ್‌ನ ಕೊನೆಯ ಹಂತದ ಪ್ರಯೋಗವಾದ ಕ್ರಯೋಜನಿಕ್‌ಗೆ ಶಕ್ತಿ ತುಂಬುವ ಸಿಇ-20 ಕ್ರಯೋಜನಿಕ್‌ ಇಂಜಿನ್‌ ಪರೀಕ್ಷೆ ಸಫಲವಾಗಿದೆ ಎಂದು ಇಸ್ರೋ ಹೇಳಿಕೊಂಡಿದೆ.

ʻಫೆ. 24ರಂದು ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಇಸ್ರೋ ಘಟಕದಲ್ಲಿ 25 ಸೆಕೆಂಡುಗಳ ನಿಯೋಜಿತ ಅವಧಿಯಲ್ಲಿ ನಡೆದ ಪರೀಕ್ಷೆ ಯಶಸ್ವಿಯಾಗಿದೆ. ಪರೀಕ್ಷೆಯು ನಮ್ಮ ನಿರೀಕ್ಷಿತ ಮಾನದಂಡಗಳನ್ನು ತಲುಪಿದ್ದು, ಫಲಿತಾಂಶ ತೃಪ್ತಿ ತಂದಿದೆʼ ಎಂದು ಇಸ್ರೋ ಹೇಳಿಕೊಂಡಿದೆ.

ʻಕ್ರಯೋಜನಿಕ್‌ ಹಂತದಲ್ಲಿ ಇಂಜಿನ್‌ನ ಇಂಧನ ಟ್ಯಾಂಕ್‌, ಕೊಳವೆಗಳು ಸೇರಿದಂತೆ ಕೆಲವು ಸುಧಾರಣೆಯನ್ನು ಮಾಡಲಾಗಿದ್ದು ಬಾಹ್ಯಾಕಾಶ ಸಂಶೋಧನೆಯಲ್ಲಿ ಇದೊಂದು ಹೊಸ ಮೈಲಿಗಲ್ಲುʼ ಎಂದು ಇಸ್ರೋ ಹೇಳಿದೆ.

ಇದನ್ನೂ ಓದಿ:ಮಣಿಪುರ, ಮೇಘಾಲಯ, ಅಫ್ಘಾನಿಸ್ತಾನ ಸೇರಿದಂತೆ ಹಲವೆಡೆ ಕಂಪಿಸಿದ ಭೂಮಿ

Advertisement

2019 ಜುಲೈ 22 ರಂದು ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ಕೇಂದ್ರದಿಂದ ʻಚಂದ್ರಯಾನ-2ʼ ನೌಕೆಯನ್ನು ಇಸ್ರೋ ಉಡಾವಣೆ ಮಾಡಿತ್ತಾದರೂ ಅದು ಚಂದ್ರನ ಮೇಲೆ ಸಾಫ್ಟ್‌ ಲ್ಯಾಂಡಿಂಗ್‌ ಮಾಡುವಲ್ಲಿ ವಿಫಲವಾಯಿತು. ಆದರೂ ಇಸ್ರೋದ ಈ ಸಾಧನೆಗೆ ಜಗತ್ತಿನಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಇಸ್ರೋ ತಂಡಕ್ಕೆ ಧೈರ್ಯ ತುಂಬಿದ್ದನ್ನು ನೆನಪಿಸಿಕೊಳ್ಳಬಹುದು.

Advertisement

Udayavani is now on Telegram. Click here to join our channel and stay updated with the latest news.

Next